ಮಾಜಿ ಸಿಎಂ ಸಿದ್ದರಾಮಯ್ಯ ( SIDDARAMAIAH ) ನನಗೆ ಅನೇಕ ವರ್ಷಗಳಿಂದ ಆಪ್ತರು. ಅವರು ಮುಖ್ಯಮಂತ್ರಿ ಆಗುವುದಕ್ಕೂ ಮೊದಲಿನಿಂದಲೇ ನನಗೆ ಪರಿಚಯ. ಕಳೆದ ಒಂದು ವಾರದ ಹಿಂದೆ ಆಪರೇಷನ್ ಆಗಿತ್ತು. ಹಾಗಾಗಿ ಮಾತನಾಡಿಸೋಕೆ ಬಂದಿದ್ದೆ ಎಂದು ವಚನಾನಂದ ಸ್ವಾಮೀಜಿ ( VACHANADHA SWAMIJI ) ಹೇಳಿದ್ದಾರೆ. ಸಿದ್ದರಾಮಯ್ಯ ಭೇಟಿ ಬಳಿಕ ಮಾತನಡಿದ ಅವರು, ಈ ಹಿಂದೆ ಮಠಕ್ಕೆ ಬಂದಿದ್ದಾಗ ಮನೆಗೆ ಬಂದಿದ್ದ ವೇಳೆ ಮನೆಗೆ ಬರುವಂತೆ ಹೇಳಿದ್ದರು. ಹಾಗಾಗಿ ಸಿದ್ದರಾಮಯ್ಯ ಅವರನ್ನ ಭೇಟಿಯಾಗಿ ಆರೋಗ್ಯ ವಿಚಾರಿಸಿದ್ದೇನೆ ಎಂದು ಹೇಳಿದ್ರು.
ಪಂಚಮಸಾಲಿ ಸಮುದಾಯಕ್ಕೆ 2A ಮೀಸಲಾತಿ ಡೆಡ್ ಲೈನ್ ವಿಚಾರವಾಗಿ ಮಾತನಾಡಿದ ಅವರು, ನಿನ್ನೆ ನಾವು ಮುಕ್ತವಾಗಿ ಮಾತನಾಡಿದ್ದೇವೆ. 4 ಗೋಡೆಗಳ ಮಧ್ಯೆ ಬೇಡ ಸಮಾಜಕ್ಕೆ ಸ್ಪಷ್ಟ ಸಂದೇಶ ಸಿಗಬೇಕು ಎನ್ನುವ ಕಾರಣಕ್ಕಾಗಿ ಮಾತಾಡಿದ್ದೇವೆ. ಜಯಪ್ರಕಾಶ್ ಹೆಗಡೆ ಅವರ ಜೊತೆಗೆ ಮುಖ್ಯಮಂತ್ರಿಗಳು ಮಾತನಾಡಿದರು.
ಚಳಿಗಾಲದ ಅಧಿವೇಶನದಲ್ಲಿ ಮುಖ್ಯಮಂತ್ರಿಗಳು ಹಿಂದುಳಿದ ವರ್ಗದ ಶಾಶ್ವತ ಆಯೋಗದ ವರದಿ ಮೇಲೆ ಘೋಷಣೆ ಮಾಡಲಿ. ವರದಿಯ ಮೇಲೆ ಸರ್ವ ಪಕ್ಷ ಸಭೆ ಕರೆದು ಚರ್ಚೆ ಮಾಡಲಿ. ಪಂಚಮಸಾಲಿ ಸಮುದಾಯಕ್ಕೆ ಸಾಮಾಜಿಕ ಶೈಕ್ಷಣಿಕ ಉದ್ಯೋಗದ ಮೀಸಲಾತಿಯನ್ನು ಘೋಷಣೆ ಮಾಡಬೇಕು ಎಂದು ಕೇಳಿಕೊಂಡಿದ್ದೇವೆ. ಆ ನಿಟ್ಟಿನಲ್ಲಿ ಮುಖ್ಯಮಂತ್ರಿಗಳು ಸಕಾರಾತ್ಮಕವಾಗಿ ಮಾತನಾಡಿದ್ದಾರೆ. ಇದನ್ನು ಓದಿ : – ಸಿದ್ದರಾಮಯ್ಯ ಅವಧಿಯಲ್ಲಿ ಸಾಕಷ್ಟು ಭ್ರಷ್ಟಾಚಾರ ನಡೆದಿದೆ – ಸಿಎಂ ಬೊಮ್ಮಾಯಿ ಗಂಭೀರ ಆರೋಪ..!
ಇಲ್ಲಿಯ ತನಕ ವರದಿ ಬಂದಿರಲಿಲ್ಲ ಈಗ ವರದಿ ಬಂದಿದೆ ಅದೇ ನಮಗೆ ಮೂಲ. ಮೀಸಲಾತಿ ಮಾನದಂಡದಿಂದ ಹೆಚ್ಚು ಮಾರ್ಕ್ಸ್ ಪಡೆದರು ವಿದ್ಯಾರ್ಥಿಗಳಿಗೆ ಅವಕಾಶ ಸಿಗಲಿಲ್ಲ. ಹೀಗಾಗಿ ನಮ್ಮ ಸಮುದಾಯಕ್ಕೂ ಮೀಸಲಾತಿ ಬೇಕು ಎಂದು ಬಹಳ ಸ್ಪಷ್ಟವಾಗಿ ನಿನ್ನೆ ಮುಖ್ಯಮಂತ್ರಿಗಳಿಗೆ ತಿಳಿಸಿದ್ದೇವೆ .
ನಾವು ಹೆಡ್ಲೈನ್ ಆಗುವುದಕ್ಕೆ ಇಷ್ಟಪಡುವುದಿಲ್ಲ, ಡೆಡ್ ಲೈನ್ ಆಗೋದಕ್ಕೂ ಕೂಡ ಇಷ್ಟಪಡುವುದಿಲ್ಲ . ಸಮುದಾಯಕ್ಕೆ ಲೈಫ್ ಲೈನ್ ಆಗಲು ಇಷ್ಟಪಡುತ್ತೇವೆ . 1994 ರಿಂದ ಈ ಹೋರಾಟ ನಡೆಯುತ್ತಿದೆ. ಇದೇ ಬಿಜೆಪಿ ಸರ್ಕಾರ, ಸಿಎಂ ಆಗಿದ್ದ ಯಡಿಯೂರಪ್ಪನವರು ಪಂಚಮಸಾಲಿಯನ್ನ 3B ಗೆ ಸೇರಿಸಿದದ್ದರು. ಯಡಿಯೂರಪ್ಪನವರು ಕೆಲಸ ಮಾಡದೆ ಇದ್ರೆ ನಾವು ಇಂದು 3B ಗೆ ಹೋರಾಟ ಮಾಡಬೇಕಾಗಿತ್ತು ಎಂದು ಹೇಳಿದ್ರು.
ಇದನ್ನು ಓದಿ : – ಲೋಕಸಭೆಯಲ್ಲಿ ಪ್ರತಿಧ್ವನಿಸಿದ ಮಹಾರಾಷ್ಟ್ರ-ಕರ್ನಾಟಕ ಗಡಿ ವಿವಾದ; ಅಮಿತ್ ಶಾ ಮಧ್ಯಪ್ರವೇಶಕ್ಕೆ ಆಗ್ರಹಿಸಿದ ಸುಪ್ರಿಯಾ ಸುಳೆ