‘ವಂದೇ ಭಾರತ್ ಪರಿಷ್ಕೃತ ಟಿಕೆಟ್ ದರ , ಟಿಕೆಟ್ ಬುಕ್ಕಿಂಗ್ ಕುರಿತು ಇಲ್ಲಿದೆ ಮಾಹಿತಿ

ಬೆಂಗಳೂರು (Bengaluru) ಮತ್ತು ಮೈಸೂರು (Mysuru) ಬಹುನಿರೀಕ್ಷಿತ, ದಕ್ಷಿಣ ಭಾರತದ ಮೊಟ್ಟಮೊದಲ 'ವಂದೇ ಭಾರತ್ ಸೆಮಿ ಹೈ ಸ್ಪೀಡ್ ರೈಲು' (Vande bharath express) ಸೌಲಭ್ಯವನ್ನು ಪ್ರಧಾನಿ ನರೇಂದ್ರ ಮೋದಿ (Narendra modi) ಯವರು ಲೋಕಾರ್ಪಣೆ ಮಾಡಿದ್ದಾರೆ.

ಬೆಂಗಳೂರು (Bengaluru) ಮತ್ತು ಮೈಸೂರು (Mysuru) ಬಹುನಿರೀಕ್ಷಿತ, ದಕ್ಷಿಣ ಭಾರತದ ಮೊಟ್ಟಮೊದಲ ‘ವಂದೇ ಭಾರತ್ ಸೆಮಿ ಹೈ ಸ್ಪೀಡ್ ರೈಲು’ (Vande bharath express) ಸೌಲಭ್ಯವನ್ನು ಪ್ರಧಾನಿ ನರೇಂದ್ರ ಮೋದಿ (Narendra modi) ಯವರು ಲೋಕಾರ್ಪಣೆ ಮಾಡಿದ್ದಾರೆ. ದೇಶಕ್ಕೆ ಸಮರ್ಪಣೆಗೊಂಡಿರುವ 5ನೇ ವಂದೇ ಭಾರತ್ ರೈಲು ಇದಾಗಿದೆ. ಚೆನ್ನೈ- ಬೆಂಗಳೂರು- ಮೈಸೂರು ನಡುವೆ ತ್ವರಿತ ರೈಲು ಸಂಪರ್ಕ ಕಲ್ಪಿಸಲಿದೆ.

ಬೆಳಗ್ಗೆ ಬೆಂಗಳೂರಿಗೆ ಆಗಮಿಸಿದ ಪ್ರಧಾನಿ ನರೇಂದ್ರ ಮೋದಿ ವಾಲ್ಮೀಕಿ, ಕನಕದಾಸ ಪ್ರತಿಮೆಗಳಿಗೆ ಮಾಲಾರ್ಪಣೆ ನೆರವೇರಿಸಿದ್ರು. ಅಲ್ಲಿಂದ ನೇರವಾಗಿ, ಬೆಂಗಳೂರಿನ ಮೆಜೆಸ್ಟಿಕ್ ನಲ್ಲಿರುವ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣಕ್ಕೆ ಆಗಮಿಸಿದರು. ಅಲ್ಲಿ, ಚೆನ್ನೈ- ಬೆಂಗಳೂರು- ಮೈಸೂರು ನಡುವೆ ಸಂಚರಿಸುವ ವಂದೇ ಭಾರತ್ ರೈಲಿನ ಮೊದಲ ಪ್ರಯಾಣಕ್ಕೆ ಚಾಲನೆ ನೀಡಿದರು. ವಂದೇ ಭಾರತ್ ಎಕ್ಸ್ ಪ್ರೆಸ್ ರೈಲುಗಳು ಸೆಮಿ- ಹೈ ಸ್ಪೀಡ್ ಪ್ಯಾಸೆಂಜರ್ ರೈಲುಗಳಾಗಿವೆ. ಇವು ಸಾಮಾನ್ಯ ರೈಲುಗಳಿಗಿಂತ ವೇಗವಾಗಿ ಚಲಿಸುತ್ತವೆ ಹಾಗೂ ನಿಗದಿತ ನಿಲ್ದಾಣವನ್ನು ಶೇ. 25 – 45ರಷ್ಟು ತ್ವರಿತವಾಗಿ ತಲುಪಬಲ್ಲವು. ಪ್ರಸ್ತುತ, ಬೆಂಗಳೂರು ಮತ್ತು ಚೆನ್ನೈ ನಡುವಿನ ಶತಾಬ್ದಿ ಎಕ್ಸ್ ಪ್ರೆಸ್ ಈ ಮಾರ್ಗದಲ್ಲಿ ಅತ್ಯಂತ ವೇಗದ ರೈಲು ಆಗಿದ್ದು, ಇದು ಸುಮಾರು ಐದು ಗಂಟೆಗಳಲ್ಲಿ 359 ಕಿ.ಮೀ ದೂರವನ್ನು ಸರಾಸರಿ 72 ಕಿ.ಮೀ ವೇಗದೊಂದಿಗೆ ಕ್ರಮಿಸುತ್ತದೆ. ಲಾಲ್ ಬಾಗ್ ಎಕ್ಸ್ ಪ್ರೆಸ್ ನಂತಹ ಇತರ ರೈಲುಗಳು ಸರಾಸರಿ 61 ಕಿ.ಮೀ ವೇಗದಲ್ಲಿ ಸಂಚರಿಸುತ್ತಿದ್ದು, ಚೆನ್ನೈ ತಲುಪಲು 5 ಗಂಟೆ 55 ನಿಮಿಷಗಳನ್ನು ತೆಗೆದುಕೊಳ್ಳುತ್ತದೆ. ಈ ಮಾರ್ಗದಲ್ಲಿನ ಇತರ ರೈಲುಗಳ ಸರಾಸರಿ ವೇಗವು 55 ಕಿ.ಮೀ ನಿಂದ 61 ಕಿ.ಮೀ ವರೆಗೆ ಇರುತ್ತದೆ. ಈಗ, ವಂದೇ ಭಾರತ್ ರೈಲು ಪ್ರಯಾಣದ ಸಮಯವನ್ನು ಮತ್ತಷ್ಟು ಕಡಿತಗೊಳಿಸಲಿದೆ. ರೈಲು ನೋಡಲು ಅಂದವಾಗಿದ್ದು, ಉತ್ತಮ ಆಸನ ವ್ಯವಸ್ಥೆಗಳನ್ನು ಹೊಂದಿದೆ. ಇದರಲ್ಲಿ ಸಂಚರಿಸಿದರೆ ವಿಮಾನದಲ್ಲಿ ಪ್ರಯಾಣಿಸಿದ ಅನುಭವ ಆಗುತ್ತದೆ ಎಂದು ಹೇಳಲಾಗಿದೆ.

ಇದರಲ್ಲಿ 16 ಬೋಗಿಗಳು ಇದ್ದು, ಒಂದು ಟ್ರಿಪ್ ನಲ್ಲಿ, 1200 ಪ್ರಯಾಣಿಕರು ಪ್ರಯಾಣಿಸಬಹುದು. ವಂದೇ ಭಾರತ್ ಎಕ್ಸ್ ಪ್ರೆಸ್’ ನ ಚೆನ್ನೈ-ಬೆಂಗಳೂರು-ಮೈಸೂರು ನಡುವೆ ಸಂಚರಿಸುವಾಗ ಬೆಂಗಳೂರು ನಗರ ಜಂಕ್ಷನ್ ನಲ್ಲಿ ಒಂದೇ ಒಂದು ನಿಲುಗಡೆ ಇರುಲಿದೆ. ಈ ರೈಲು, ಚೆನ್ನೈ ಸೆಂಟ್ರಲ್ ನಿಂದ ಬೆಳಿಗ್ಗೆ 5.50ಕ್ಕೆ ಹೊರಡುತ್ತದೆ. ಬೆಂಗಳೂರು ನಗರ ಜಂಕ್ಷನ್ ಗೆ 359 ಕಿ.ಮೀ.ಗಳನ್ನು ಕ್ರಮಿಸಿ ಬೆಳಿಗ್ಗೆ 10:25ಕ್ಕೆ ಆಗಮಿಸುತ್ತದೆ. ಇಲ್ಲಿ ಐದು ನಿಮಿಗಳ ಕಾಲ ನಿಂತು, ಬೆಳಿಗ್ಗೆ 10:30 ಗಂಟೆಗೆ ಮೈಸೂರಿಗೆ ಹೊರಡುತ್ತದೆ. ನಂತರ ಮೈಸೂರು ಜಂಕ್ಷನ್ಗೆ 137.6 ಕಿ.ಮೀ.ಗಳ ದೂರ ಕ್ರಮಿಸಿ ಮಧ್ಯಾಹ್ನ 12.30ಕ್ಕೆ ತಲುಪುತ್ತದೆ.

ಇದನ್ನೂ ಓದಿ : – ಬೆಂಗಳೂರು ‘ಸ್ಟಾರ್ಟ್-ಅಪ್’ ಮನೋಭಾವವನ್ನು ಪ್ರತಿನಿಧಿಸುತ್ತದೆ – ನರೇಂದ್ರ ಮೋದಿ

Related Articles

Leave a Reply

Your email address will not be published. Required fields are marked *

Back to top button
Close

Adblock Detected

Support Free Content We use ads to keep our content free for you. Please allow ads and let sponsors fund your surfing. Thank you!