ಮತ್ತೆ ಯೂಟ್ಯೂಬ್ ಗೆ ಮರಳಿದ ಕಾಂತಾರ ಚಿತ್ರದ ‘ವರಾಹ ರೂಪಂ’ ಹಾಡು

‘ಕಾಂತಾರ’ ( KANTARA ) ಚಿತ್ರದಷ್ಟೇ ಅದರಲ್ಲಿ ಮೂಡಿ ಬಂದ ‘ವರಾಹ ರೂಪಂ’ ಹಾಡು ಕೂಡ ಸಾಕಷ್ಟು ಜನಪ್ರಿಯ ಪಡೆದುಕೊಂಡಿತ್ತು.

‘ಕಾಂತಾರ’ ( KANTARA ) ಚಿತ್ರದಷ್ಟೇ ಅದರಲ್ಲಿ ಮೂಡಿ ಬಂದ ‘ವರಾಹ ರೂಪಂ’ ಹಾಡು ಕೂಡ ಸಾಕಷ್ಟು ಜನಪ್ರಿಯ ಪಡೆದುಕೊಂಡಿತ್ತು. ಆದರೆ ಈ ಹಾಡಿಗೆ ಕೃತಿಚೌರ್ಯದ ಆರೋಪ ಮಾಡಲಾಗಿತ್ತು. ಬಳಿಕ ಹಾಡನ್ನು ಪ್ರಸಾರ ಮಾಡದಂತೆ ಕೇರಳದ ಸ್ಥಳೀಯ ನ್ಯಾಯಾಲಯ ಆದೇಶ ಹೊರಡಿಸಿತ್ತು.

Kantara box office: Rishab Shetty film outperforms Ponniyin Selvan 1 in  Hindi belt, scores big in Tamil and Telugu states | Entertainment News,The  Indian Express

ಹಾಗಾಗಿ ಯೂಟ್ಯೂಬ್, ಮ್ಯೂಸಿಕ್ ಆ್ಯಪ್ ಗಳಾದ ‘ಸಾವನ್..’ ಮೊದಲಾದ ಪ್ಲಾಟ್ ಫಾರ್ಮ್ ಗಳಿಂದ ಈ ಸಾಂಗ್ ಡಿಲೀಟ್ ಮಾಡಲಾಗಿತ್ತು. ಆದರೆ ಈಗ ‘ವರಾಹ ರೂಪಂ’ ಹಾಡು ಯೂಟ್ಯೂಬ್ ನಲ್ಲಿ ಪ್ರತ್ಯಕ್ಷವಾಗಿದೆ. ಹಾಗಾದ್ರೆ ಕಾನೂನು ಹೋರಾಟದಲ್ಲಿ ‘ಕಾಂತಾರ’ ಚಿತ್ರಕ್ಕೆ ಗೆಲುವು ಸಿಕ್ತಾ ಎಂಬ ಅನುಮಾನಗಳು ಹುಟ್ಟಿಕೊಂಡಿವೆ. ‘ಕಾಂತಾರ’ ಚಿತ್ರದ ‘ವರಾಹ ರೂಪಂ’ ಹಾಡಿನ ಕುರಿತು ಕೇರಳದ ಕೋರ್ಟ್ ನೀಡಿದ್ದ ತಡೆಯಾಜ್ಞೆ ತೆರವುಗೊಂಡಿರುವ ಹಿನ್ನೆಲೆಯಲ್ಲಿ ಆ ಹಾಡು ಇಂದಿನಿಂದ ಚಿತ್ರಮಂದಿರ, ಯೂಟ್ಯೂಬ್, ಓಟಿಟಿ ಸೇರಿದಂತೆ ಎಲ್ಲೆಡೆ ಲಭ್ಯವಿದೆ. ಇದನ್ನೂ ಓದಿ : –  ತಾಕತ್ ಇದ್ರೆ ನನ್ನ ಎದುರು ಹಸು ತಿನ್ನಿ – ಸಿದ್ದರಾಮಯ್ಯ, ಖರ್ಗೆಗೆ ಪ್ರಭು ಚೌಹಾಣ್ ಸವಾಲು

Box Office Collection: Kantara Spooks Phone Bhoot, Rishab Shetty Earns Rs 5  Lakhs More Than Katrina's Film

ಇದಕ್ಕೂ ಮುನ್ನ, ‘ವರಾಹ ರೂಪಂ …’ ಹಾಡನ್ನು ಯೂಟ್ಯೂಬ್ ಸೇರಿದಂತೆ ಯಾವುದೇ ಪ್ಲಾಟ್ ಫಾರ್ಮ್ ಗಳಲ್ಲಿ ಒಪ್ಪಿಗೆ ಇಲ್ಲದೆ ಬಳಸಬಾರದು ಎಂದು ಕೇರಳ ( KERALA ) ದ ಕೋರ್ಟ್ ಆದೇಶ ಹೊರಡಿಸಿತ್ತು. ಇದಕ್ಕೆ ತಲೆ ಬಾಗಿದ್ದ ಚಿತ್ರತಂಡವು, ‘ವರಾಹ ರೂಪಂ’ ಹಾಡನ್ನು ಚಿತ್ರಮಂದಿರ, ಯೂಟ್ಯೂಬ್ ನ ಹೊಂಬಾಳೆ ಫಿಲಂಸ್ ನ ಚಾನಲ್, ಮ್ಯೂಸಿಕ್ ಆ್ಯಪ್ ಗಳಾದ ಸಾವನ್ ಮುಂತಾದ ಕಡೆಗಳಿಂದ ಹಾಡನ್ನು ಡಿಲೀಟ್ ಮಾಡಿತ್ತು.

ಇದನ್ನೂ ಓದಿ : –  ಕಟೀಲು ದೇವಸ್ಥಾನಕ್ಕೆ ಭೇಟಿ ನೀಡಿದ ನಟಿ ತಾರಾ

Related Articles

Leave a Reply

Your email address will not be published. Required fields are marked *

Back to top button
Close

Adblock Detected

Support Free Content We use ads to keep our content free for you. Please allow ads and let sponsors fund your surfing. Thank you!