ಅರ್ಜೆಂಟೀನಾ ವಿರುದ್ಧ ಗೆಲುವು –ಇಂದು ರಾಷ್ಟ್ರೀಯ ರಜಾದಿನವನ್ನಾಗಿ ಘೋಷಿಸಿದ ಸೌದಿ ಅರೇಬಿಯಾ

ಅರಬ್ಬರ ನಾಡಿನಲ್ಲಿ ನಡೆಯುತ್ತಿರುವ ಫಿಫಾ ವಿಶ್ವಕಪ್ ಟೂರ್ನಿ ಯಲ್ಲಿ ಕೂಟದ ಬಲಿಷ್ಠ ತಂಡ ಲಿಯೋನೆಲ್ ಮೆಸ್ಸಿ ಸಾರಥ್ಯದ ಅರ್ಜೆಂಟೀನಾ ವಿರುದ್ಧ ಸೌದಿ ಅರೇಬಿಯಾ 2-1 ಗೋಲುಗಳ ಅಂತರದ ಜಯ ಸಾಧಿಸಿ ಮೆರೆದಾಡಿದೆ. ಈ ಬೆನ್ನಲ್ಲೇ ಸೌದಿ ಅರೇಬಿಯಾದಲ್ಲಿ ಸಂಭ್ರಮ ಮುಗಿಲು ಮುಟ್ಟಿದ್ದು, ಇಂದು ರಾಷ್ಟ್ರೀಯ ರಜೆ ಘೋಷಿಸಿ ಸಂಭ್ರಮಿಸುತ್ತಿದೆ.

ಯಶಸ್ವಿ ತಂಡ 2 ಬಾರಿ ವಿಶ್ವಕಪ್ ಎತ್ತಿಹಿಡಿದಿದ್ದ ಲಿಯೋನೆಲ್ ಮೆಸ್ಸಿ ನಾಯಕತ್ವದ ಅರ್ಜೆಂಟೀನಾ ವಿರುದ್ಧ ಸೌದಿ ಅರೇಬಿಯಾ 2-1 ಅಂತರದ ಗೋಲುಗಳಿಂದ ಗೆಲುವು ಸಾಧಿಸಿ ಮಿಂಚಿದೆ. ಈ ಬೆನ್ನಲ್ಲೇ ಸೌದಿ ಅರೇಬಿಯಾದ ದೊರೆ ಸಲ್ಮಾನ್ ಬಿನ್ ಅಬ್ದುಲಜೀಜ್ ಅರ್ಜೆಂಟೀನಾ ವಿರುದ್ಧದ ವಿಜಯವನ್ನು ಆಚರಿಸಲು ಬುಧವಾರ ರಾಷ್ಟ್ರೀಯ ರಜಾದಿನವನ್ನಾಗಿ ಘೋಷಿಸಿದ್ದಾರೆ. ಇದನ್ನೂ ಓದಿ : – ನಾನು ಬಳಸಿದ ಪದ ಸ್ವತಃ ನನಗೂ ನೋವುಂಟು ಮಾಡಿದೆ – ಹೆಚ್.ಡಿ ಕುಮಾರಸ್ವಾಮಿ

ಕತಾರ್ ನ ಲುಸೈಲ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಲಿಯೋನೆಲ್ ಮೆಸ್ಸಿ ತಂಡ ಗೆಲುವಿನ ಫೇವರಿಟ್ ತಂಡವಾಗಿ ಕಾಣಿಸಿಕೊಂಡಿತ್ತು. ಆದರೆ ಇತ್ತ ಅದ್ಭುತ ಪ್ರದರ್ಶನದ ಮೂಲಕ ಸೌದಿ ಅರೇಬಿಯಾ ಫುಟ್ ಬಾಲ್ ಅಭಿಮಾನಿಗಳ ಮನಗೆದ್ದಿದೆ. ಪಂದ್ಯದ 10ನೇ ನಿಮಿಷದಲ್ಲಿ ಮೆಸ್ಸಿ ಗೋಲಿನೊಂದಿಗೆ ಅರ್ಜೆಂಟೀನಾಗೆ 1-0 ಮುನ್ನಡೆ ತಂದುಕೊಟ್ಟರು. ಈ ವೇಳೆ ಅಭಿಮಾನಿಗಳು ಫುಟ್ ಬಾಲ್ ದಿಗ್ಗಜನ ಆಟಕ್ಕೆ ಚಪ್ಪಾಳೆ ತಟ್ಟಿ ಹುರಿದುಂಬಿಸಿದರು.

ಇದನ್ನೂ ಓದಿ : – ರಮೇಶ್ ಕುಮಾರ್ ಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ ಹೆಚ್ಡಿಕೆ – ವಿಡಿಯೋ ವೈರಲ್

Related Articles

Leave a Reply

Your email address will not be published. Required fields are marked *

Back to top button
Close

Adblock Detected

Support Free Content We use ads to keep our content free for you. Please allow ads and let sponsors fund your surfing. Thank you!