ಕೇಂದ್ರ ಸಚಿವೆ ಸ್ಮೃತಿ ಇರಾನಿ(Smriti Irani) ಬೆಂಗಳೂರಿನಲ್ಲಿ ಸಿಎಂ ಬಸವರಾಜ ಬೊಮ್ಮಾಯಿಯವರನ್ನ(Basavaraj Bommai) ಭೇಟಿಯಾಗಿ ಚರ್ಚೆ ನಡೆಸಿದ್ರು.
ಬಳಿಕ ನಗರದ ಖಾಸಗಿ ಹೋಟೆಲ್ ನಲ್ಲಿ ಸ್ಮೃತಿ ಇರಾನಿ ಸುದ್ದಿಗೋಷ್ಠಿ ನಡೆಸಿದ್ರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸ್ಮೃತಿ ಇರಾನಿ, ಪ್ರಧಾನಿ ಮೋದಿ ಮಹಿಳೆಯರಿಗೆ ಪ್ರಾಮುಖ್ಯತೆ ನೀಡಿದ್ದಾರೆ. ಪ್ರಧಾನಿ 3 ಯೋಜನೆಗಳನ್ನು ಮಹಿಳೆಯರಿಗಾಗಿ ನೀಡಿದ್ದಾರೆ. ಪೋಷಣ್ ಅಭಿಯಾನ ಮೂಲಕ 14 ಲಕ್ಷ ಅಂಗನವಾಡಿ ಬಲಪಡಿಸ್ತಿದ್ದೇವೆ. 11 ಲಕ್ಷ ಅಂಗನವಾಡಿ ಗ್ರೋತ್ ಮಾನಿಟರಿಗೆ ಒಳಪಡಿಸಿದೆ ಎಂದು ಹೇಳಿದ್ರು. ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯಗಳನ್ನ ತಡೆಯಬೇಕಿದೆ.
ಇದನ್ನು ಓದಿ :- ಪೊಲೀಸ್ ಧ್ವಜ ದಿನಾಚರಣೆಗೆ ಚಾಲನೆ ನೀಡಿದ ಸಿಎಂ ಬೊಮ್ಮಾಯಿ ಚಾಲನೆ
ಮಹಿಳೆಯರ ಫೋರ್ನೋಗ್ರಫಿ ತಡೆಯಬೇಕಿದೆ. ಹೀಗಾಗಿ ಜಿಲ್ಲಾವಾರು ಕೇಂದ್ರಗಳನ್ನು ತೆರೆದು ಮಕ್ಕಳ ಸುರಕ್ಷತೆಗೆ ದೌರ್ಜನ್ಯ ತಡೆಯಲು ಕ್ರಮಕ್ಕೆ ಸೂಚನೆ ನೀಡಲಾಗಿದೆ. ಭಾರತ ಅಭಿವೃದ್ಧಿಯಾಗಬೇಕಾದರೆ ಮಹಿಳೆಯರು ಅಭಿವೃದ್ಧಿಯಾಗಬೇಕು ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. ಭೇಟಿ ಬಚಾವ್, ಭೇಟಿ ಪಡಾವ್ ಯೋಜನೆಯನ್ನು ಮೋದಿ ಪ್ರಾರಂಭಿಸಿದ್ದಾರೆ. ಪ್ರತಿ ಜಿಲ್ಲೆಯಲ್ಲೊಂದು ಕೇರ್ ಸೆಂಟರ್ ಇರಬೇಕು ಎಂದು ಮೋದಿ ಸೂಚಿಸಿದ್ದಾರೆ. 704 ಒನ್ ಕೇರ್ ಸೆಂಟರ್ ನಿರ್ಮಾಣ ಮಾಡಲಾಗಿದೆ.
ಈ ಸೆಂಟರ್‌ನಿಂದ ದೈಹಿಕವಾಗಿ,ಮಾನಸಿಕವಾಗಿ ಕಿರುಕುಳಕ್ಕೆ ಒಳಗಾದ ಮಹಿಳೆಯರಿಗೆ ಎಲ್ಲಾ ಆರೋಗ್ಯ ಸೌಲಭ್ಯ ನೀಡಲಾಗುವುದು ಎಂದು ಹೇಳಿದ್ರು. ಮೋದಿಯವರ ಕನಸಿನ ಯೋಜನೆ ಜನಧನ್ ಅಕೌಂಟ್ ಯೋಜನೆಯಿಂದ 24 ಕೋಟಿ ಮಹಿಳೆಯರು ಮೊದಲ ಬಾರಿಗೆ ಬ್ಯಾಂಕ್ ಖಾತೆ ತೆರೆದಿದ್ದಾರೆ. 34 ಕೋಟಿ ಲೋನ್‌ಗಳನ್ನು ಮಹಿಳೆಯರು ಮುದ್ರಾ ಯೋಜನೆಯಡಿ ಪಡೆದಿದ್ದಾರೆ ಎಂದು ತಿಳಿಸಿದ್ರು.
ಇದನ್ನು ಓದಿ :- HDFC ಲಿಮಿಟೆಡ್, HDFC ಬ್ಯಾಂಕ್ ವಿಲೀನ – ಸೆನ್ಸೆಕ್ಸ್ 1300 ಅಂಕಗಳ ಏರಿಕೆ