ತನ್ನ ವಿಕೆಟ್ ಪಡೆದ ಬಾಂಗ್ಲಾ ಬೌಲರ್ ಗೆ ವಿಶೇಷ ಉಡುಗೊರೆ ನೀಡಿದ ವಿರಾಟ್ ಕೊಹ್ಲಿ

ಬಾಂಗ್ಲಾದೇಶದ ಮೀರ್ ಪುರ್ ನ ಶೇರ್ ಎ ಬಾಂಗ್ಲಾ ಕ್ರೀಡಾಂಗಣದಲ್ಲಿ ನಡೆದ 2ನೇ ಟೆಸ್ಟ್ ಪಂದ್ಯವನ್ನು ಭಾರತ 3 ವಿಕೆಟ್ ಗಳಿಂದ ಜಯಗಳಿಸಿ ಸರಣಿಯನ್ನು ಕ್ಲೀನ್ ಸ್ವೀಪ್ ಮಾಡಿಕೊಂಡಿದೆ.

ಬಾಂಗ್ಲಾದೇಶದ ಮೀರ್ ಪುರ್ ನ ಶೇರ್ ಎ ಬಾಂಗ್ಲಾ ಕ್ರೀಡಾಂಗಣದಲ್ಲಿ ನಡೆದ 2ನೇ ಟೆಸ್ಟ್ ಪಂದ್ಯವನ್ನು ಭಾರತ 3 ವಿಕೆಟ್ ಗಳಿಂದ ಜಯಗಳಿಸಿ ಸರಣಿಯನ್ನು ಕ್ಲೀನ್ ಸ್ವೀಪ್ ಮಾಡಿಕೊಂಡಿದೆ. ಈ ಪಂದ್ಯದಲ್ಲಿ ತನ್ನ ವಿಕೆಟ್ ಪಡೆದ ಬಾಂಗ್ಲಾದೇಶದ ಆಫ್ ಸ್ಪಿನ್ನರ್ ಮೆಹಿದಿ ಹಸನ್ ಮಿರಾಜ್ ಗೆ ವಿರಾಟ್ ಕೊಹ್ಲಿ ( VIRAT KOHILI ) ವಿಶೇಷ ಉಡುಗೊರೆ ನೀಡಿ ಅಭಿನಂದಿಸಿದ್ದಾರೆ.

2ನೇ ಟೆಸ್ಟ್ ಪಂದ್ಯದಲ್ಲಿ ಸ್ಪಿನ್ ದಾಳಿ ನಡೆಸಿದ ಮಿರಾಜ್ ಟೀಂ ಇಂಡಿಯಾ ( TEAM INDIA )  ಎದುರು ಅಬ್ಬರಿಸಿದರು. 6 ಓವರ್ ಗಳಲ್ಲಿ 36 ರನ್ ನೀಡಿ ಪ್ರಮುಖ 6 ವಿಕೆಟ್ ಗಳನ್ನು ಪಡೆದು ಮಿಂಚಿದ್ದರು. ಇದೇ ವೇಳೆ ತಮ್ಮ ಸ್ಪಿನ್ ಕೈಚಳಕದಿಂದ ಟೀಂ ಇಂಡಿಯಾ ಬ್ಯಾಟ್ಸ್ ಮ್ಯಾನ್ ವಿರಾಟ್ ಕೊಹ್ಲಿ ಅವರನ್ನ ಕೇವಲ 1 ರನ್ ಗಳಿಗೆ ಔಟ್ ಮಾಡಿ ಪೆವಿಲಿಯನ್ ದಾರಿ ತೋರಿಸಿದ್ರು. ಇದರಿಂದ ಮಿರಾಜ್ ಬೌಲಿಂಗ್ ಕೈಚಳಕ ಮೆಚ್ಚಿಕೊಂಡ ಕೊಹ್ಲಿ ತಮ್ಮ ವಿಕೆಟ್ ಪಡೆದಿದ್ದಕ್ಕಾಗಿ ಸ್ಮರಣಿಕೆಯಾಗಿ ಸಹಿ ಮಾಡಿದ ಜೆರ್ಸಿ ನೀಡಿ ಅಭಿನಂದಿಸಿದ್ದಾರೆ.

ಇದನ್ನು ಓದಿ :-  ಅಶ್ವಿನ್, ಅಯ್ಯರ್ ಭರ್ಜರಿ ಬ್ಯಾಟಿಂಗ್ – ಬಾಂಗ್ಲಾ ಸರಣಿ ಗೆದ್ದ ಭಾರತ

 

Related Articles

Leave a Reply

Your email address will not be published. Required fields are marked *

Back to top button
Close

Adblock Detected

Support Free Content We use ads to keep our content free for you. Please allow ads and let sponsors fund your surfing. Thank you!