ಲಿಂಗಾಯತ (Lingayath) ಪಂಚಮಸಾಲಿ (Panchamasali) ಸಮುದಾಯಕ್ಕೆ 2ಎ ಮೀಸಲಾತಿ (Reservation) ನೀಡುವಂತೆ ಆಗ್ರಹಿಸಿ ಸುವರ್ಣ ವಿಧಾನಸೌಧ (Suvarna vidhanasoudha) ಬಳಿ ವಿರಾಟ್ ಪಂಚಶಕ್ತಿ ಸಮಾವೇಶ (Virat panchashakthi samavesha) ಆಯೋಜಿಸಲಾಗಿದೆ. ಸಮಾವೇಶದಲ್ಲಿ ಭಾರೀ ಪ್ರಮಾಣದ ಜನರು ಸೇರಿದ್ದಾರೆ.
ಬೈಲಹೊಂಗಲದ ರಾಣಿ ಚನ್ನಮ್ಮ ಸಮಾಧಿ ಸ್ಥಳದಿಂದ ಆರಂಭವಾದ ಪಾದಯಾತ್ರೆ ಹಿರೇಬಾಗೇವಾಡಿ ತಲುಪಿ, ಸುವರ್ಣ ಸೌಧದ ಕಡೆಗೆ ಹೊರಟಿದೆ. ಕೂಡಲಸಂಗಮ ಪಂಚಮಸಾಲಿ ಪೀಠದ ಬಸವಜಯ ಮೃತ್ಯುಂಜಯ ಸ್ವಾಮೀಜಿ, ಶಾಸಕ ಬಸನಗೌಡ ಪಾಟೀಲ ಯತ್ನಾಳ್, ವಿಜಯಾನಂದ ಕಾಶಪ್ಪನವರ್, ಎ.ಬಿ.ಪಾಟೀಲ ಸೇರಿದಂತೆ ಹಲವು ಮುಖಂಡರು ಹಾಗೂ ಅಪಾರ ಸಂಖ್ಯೆಯ ಮಹಿಳೆಯರು ಯಾತ್ರೆಯಲ್ಲಿ ಪಾಲ್ಗೊಂಡಿದ್ದಾರೆ. ಇದನ್ನು ಓದಿ :- ಒಕ್ಕಲಿಗರ ಮೀಸಲಾತಿ ಕುರಿತಂತೆ ಸಿಎಂ ಜೊಚೆ ಚರ್ಚೆ – ಆರ್. ಅಶೋಕ್
ಸಮಾವೇಶಕ್ಕಾಗಿ ಸುವರ್ಣವಿಧಾನಸೌಧದಿಂದ 5 ಕಿ.ಮೀ ದೂರದ ಬಸ್ತವಾಡ- ಕಮಕಾರಟ್ಟಿ ಮಧ್ಯದಲ್ಲಿ ಬೃಹತ್ ವೇದಿಕೆ ಹಾಕಲಾಗಿದೆ.
ಇದನ್ನು ಓದಿ :- ಸಹಕಾರ ಸಂಘದ ಭ್ರಷ್ಚಾಚಾರದಲ್ಲಿ ಸಚಿವ ಸೋಮಶೇಖರ್ ಕುಮ್ಮಕ್ಕಿದೆ – ಡಿಕೆಶಿ