ಕೊರೊನಾ ಸೋಂಕಿತೆ ಮಹಿಳೆ ಮೇಲೆ ವಾರ್ಡ್ ಬಾಯ್ ಆಸ್ಪತ್ರೆಯಲ್ಲೇ ಅತ್ಯಾಚಾರ ನಡೆಸಿದ್ದು, 24 ಗಂಟೆಯೊಳಗೆ ಮಹಿಳೆ ಮೃತಪಟ್ಟಿ ಅಮಾನುಷ ಘಟನೆ ಭೂಪಾಲ್ ನಲ್ಲಿ ನಡೆದಿದೆ.
ಭೂಪಾಲ್ ನ ಸರಕಾರಿ ಆಸ್ಪತ್ರೆಯಲ್ಲಿ ಈ ಘಟನೆ ನಡೆದಿದ್ದು, ಸುಮಾರು ಒಂದು ತಿಂಗಳ ಹಿಂದೆ ಈ ಘಟನೆ ನಡೆದಿದ್ದು, ಕುಟುಂಬಸ್ಥರ ಮನವಿ ಮೇರೆಗೆ ಈ ಪ್ರಕರಣವನ್ನು ಅಧಿಕಾರಿಗಳು ಮುಚ್ಚಿಟ್ಟಿದ್ದರು.
ಏಪ್ರಿಲ್ 6ರಂದು ಮಹಿಳೆ ಭೂಪಾಲ್ ನ ಮೆಮೊರಿಯಲ್ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರ ಆಸ್ಪತ್ರೆಗೆ ದಾಖಲಾಗಿದ್ದರು. ವಾರ್ಡ್ ಬಾಯ್ ಅತ್ಯಾಚಾರ ಮಾಡಿದ ಕೂಡಲೇ ಉಸಿರಾಟದ ಸಮಸ್ಯೆಗೆ ಒಳಗಾದ ಮಹಿಳೆಯನ್ನು ವೆಂಟಿಲೇಟರ್ ಗೆ ವರ್ಗಾಯಿಸಲಾಯಿತಾದರೂ ಪ್ರಯೋಜನವಾಗದೇ ಮೃತಪಟ್ಟಿದ್ದರು.