ಎಡಿಜಿಪಿ ಬಂಧನ ಕಣ್ಣೊರೆಸುವ ತಂತ್ರ ಎಂಬ ಡಿಕೆಶಿ ಹೇಳಿಕೆ ವಿಚಾರಕ್ಕೆ ಗೃಹ ಸಚಿವ ಅರಗ ಜ್ಞಾನೇಂದ್ರ (Araga gnanendra) ಪ್ರತಿಕ್ರಿಯೆ ನೀಡಿದ್ದಾರೆ. ಅವರೆಲ್ಲಾ ರಾಜ್ಯ ನಡೆಸಿದವರು. ಅವರ ಕಾಲದಲ್ಲಿ ಎಷ್ಟು ಹಗರಣ ನಡೆದಿದೆ ಎಂದು ನಾನು ತುಂಬಾ ದಾಖಲಾತಿ ನೀಡಿದ್ದೇನೆ, ಅವೆಲ್ಲ ಮುಚ್ಚಿ ಹಾಕಿದ್ದಾರೆ.
ಇವತ್ತು ನಮ್ಮ ಕಾಲದಲ್ಲಿ ಯಾವುದನ್ನು ಮುಚ್ಚಿ ಹಾಕುವ ಪ್ರಯತ್ನ ಮಾಡಿಲ್ಲ. ನಮ್ಮ ಕೈಗೆ ಸಾಕ್ಷ್ಯಗಳು ಸಿಗುತ್ತಿದ್ದಂತೆ ತನಿಖೆ ಶುರು ಮಾಡಿಸಿದ್ದೇವೆ. 50 ಜನ ಅರೆಸ್ಟ್ ಆದವರಲ್ಲಿ 20 ಜನ ಪೊಲೀಸರನ್ನೇ ಬಂಧಿಸಿದ್ದೇವೆ. ಯಾರನ್ನು ಬಿಡಲಿಲ್ಲ, ಕಣ್ಣೋರೆಸುವ ತಂತ್ರ, ಕಾಲು ಒರೆಸುವ ತಂತ್ರ ಇದೆಲ್ಲಾ ನಮಗೆ ಗೊತ್ತಿಲ್ಲ. ಕಾಂಗ್ರೆಸ್ ನವರಿಗೆ ಇದೆಲ್ಲಾ ಗೊತ್ತಿರುತ್ತೆ. ಮೊದಲು ನನಗೆ ಮಾಹಿತಿ ಇರಲಿಲ್ಲ, ಸಾಕ್ಷ್ಯಾಧಾರಗಳಿಲ್ಲದೆ ನಡೆದಿದೆ ಅಂತ ಹೇಳಿದ್ರೆ, ತನಿಖಾಧಿಕಾರಿಗಳು ಸಾಕ್ಷ್ಯ ಕೇಳ್ತಾರೆ.
ಈಗ ನನ್ನ ಕೈಗೆ ಸಾಕ್ಷ್ಯಗಳು ಸಿಗುತ್ತಿದ್ದಂತೆ, ಒಂದು ನಿಮಿಷ ತಡ ಮಾಡಲಿಲ್ಲ ಎಂದು ತಿಳಿಸಿದ್ದಾರೆ.
ಸಿಎಂ ಮಾರ್ಗದರ್ಶನದಲ್ಲಿ ತನಿಖೆಗೆ ವಹಿಸಿದ್ದೇನೆ . ನಿಮಗೆ ಏನು ತೋಚುತ್ತೊ ಅದನ್ನು ಮಾಡಿ ಎಂದು ಹೇಳಿದರು. ಸಿಐಡಿ ತಂಡ ರಚನೆ ಮಾಡಿದ್ದೇವೆ. ಅವರಿಗೆ ಫ್ರೀ ಹ್ಯಾಂಡ್ ನೀಡಿದ್ದೇವೆ. ಜಡ್ಜ್ ಕರೆಕ್ಷನ್ ಮುಕ್ತ ಸಮಾಜ ಆಗಬೇಕೆಂದು ಒಳ್ಳೆ ಭಾವನೆಯಿಂದ ಮಾತನಾಡಿದ್ದಾರೆ. ಇದನ್ನೂ ಓದಿ : – ಚಂದ್ರಶೇಖರ್ ಗುರೂಜಿಗೆ ಬ್ಲಾಕ್ ಮೇಲ್ ಮಾಡಿ ಸುಲಿಗೆಗೆ ಇಳಿದಿದ್ರಾ ಹಂತಕರು..!
ತುಂಬಾ ಎಮೋಷನಲ್ ಆಗಿ ಮಾತನಾಡಿದ್ದಾರೆ. ನಾನು ವೀಡಿಯೋ ನೋಡಿದ್ದೇನೆ. ಆ ಸೀಟಿನಲ್ಲಿ ಕುಳಿತು ಹೇಳಿದ್ದಾರೆ. ಇದರಿಂದ ಸಮಾಜದಲ್ಲಿ ಒಂದು ಭಯ ಗೌರವ ಬರಬಹುದು ಅಂತ ಹೇಳಿದ್ದಾರೆ. ಅವರು ಹೇಳಿದ್ದು ಸರಿಯಿದೆ, ಕರಪ್ಷನ್ ಮುಕ್ತ ಸಮಾಜ ಮಾಡಲಿಕ್ಕೆ ಆ ಸೀಟಿನಿಂದ ಸಲಹೆ ನೀಡೋದು ಬಹಳ ಒಳ್ಳೆದು. ಭ್ರಷ್ಟಚಾರ ತಡೆಯುವಲ್ಲಿ ನಮ್ಮ ಸರ್ಕಾರ ಅದಕ್ಕೆ ಬದ್ಧವಾಗಿದೆ. ಆ ನಿಟ್ಟಿನಲ್ಲಿ ಕೆಲಸ ಮಾಡ್ತಿದೆ ಎಂದು ಅರಗ ಜ್ಞಾನೇಂದ್ರ ತಿಳಿಸಿದ್ದಾರೆ. ಇದನ್ನೂ ಓದಿ : – ‘ಡೋಲೋ 650’ ಗೆ ಚಳಿ ಜ್ವರ ! -ಬೆಂಗಳೂರಿನ ಮೈಕ್ರೋ ಲ್ಯಾಬ್ಸ್ ಮೇಲೆ ಐಟಿ ದಾಳಿ