ಗುರೂಜಿ ಅವರನ್ನು ದೇವರಂತೆ ಕಾಣುತ್ತಿದ್ದೆವು ಎಂದು ಹೇಳುವ ಮೂಲಕ ಸರಳವಾಸ್ತು ತಜ್ಞ ಚಂದ್ರಶೇಖರ (chandrashekhar) ಗುರೂಜಿ ಭೀಕರ ಹತ್ಯೆಗೆ ಹಂತಕ ಮಹಾಂತೇಶ್ ಶಿರೂರು ಪತ್ನಿ ವನಜಾಕ್ಷಿ(vanajakshi) ಮರುಕ ವ್ಯಕ್ತಪಡಿಸಿದ್ದಾರೆ.
ಹುಬ್ಬಳ್ಳಿ(huballi) ಯಲ್ಲಿ ಮಾತನಾಡಿದ ಹಂತಕ ಮಹಾಂತೇಶ್ ಶಿರೂರು ಪತ್ನಿ ವನಜಾಕ್ಷಿ ನನ್ನ ಪತಿ ಹೀಗೆ ಮಾಡುತ್ತಾರೆ ಎಂದು ಕನಸ್ಸಿನಲ್ಲಿಯೂ ನಾನು ಅಂದುಕೊಂಡಿರಲಿಲ್ಲ. ಗುರೂಜಿ ನಮ್ಮನ್ನು ಬಹಳ ಚೆನ್ನಾಗಿ ನೋಡಿಕೊಂಡಿದ್ದರು. ಕೆಲಸ ಮಾಡುವ ಪ್ರತಿಯೊಬ್ಬರನ್ನು ಕೂಡ ಬಹಳ ಪ್ರೀತಿಯಿಂದ ನೋಡಿಕೊಳ್ಳುತ್ತಿದ್ದರು. ಇಲ್ಲಿವರೆಗೂ ಯಾವತ್ತು ಯಾರಿಗೂ ಗುರೂಜಿ ಮೋಸ ಮಾಡಿಲ್ಲ ಎಂದಿದ್ದಾರೆ.
ಗುರೂಜಿ ನಮ್ಮ ಮನೆಯ ದೇವರು, ನಮ್ಮ ತಂದೆ ತರಹ. ಗುರೂಜಿ ನನಗೆ ಯಾವುದೇ ಆಸ್ತಿ ನೀಡಿಲ್ಲ. ಅಪಾರ್ಟ್ಮೆಂಟ್ ಕೂಡ ಗುರೂಜಿ ಅವರ ಹೆಸರಿನಲ್ಲಿದೆ. ಆದರೆ ಒಂದು ಫ್ಲಾಟ್ ಮಾತ್ರ ನಮ್ಮದಾಗಿದೆ. ಅದನ್ನು 20 ಲಕ್ಷ ರೂಪಾಯಿ ಸಾಲ ಮಾಡಿ ಖರೀದಿಸಿದ್ದೇವೆ. ನನ್ನ ಮತ್ತು ಗಂಡನ ಹೆಸರಿನಲ್ಲಿ ಯಾವುದೇ ಬೇನಾಮಿ ಆಸ್ತಿ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಇದನ್ನು ಓದಿ : – ಚಂದ್ರಶೇಖರ್ ಗುರೂಜಿಗೆ ಬ್ಲಾಕ್ ಮೇಲ್ ಮಾಡಿ ಸುಲಿಗೆಗೆ ಇಳಿದಿದ್ರಾ ಹಂತಕರು..!