WHATSAPP ಬಳಕೆದಾರರ ಡೇಟಾ ಸುರಕ್ಷಿತವಾಗಿದೆ – ಸ್ಪಷ್ಟನೆ ನೀಡಿದ ಕಂಪನಿ

ಭಾರೀ ದೊಡ್ಡ ಮಟ್ಟದ ಡೇಟಾ ಸೋರಿಕೆ ಪ್ರಕರಣ ಬೆಳಕಿಗೆ ಬಂದಿದೆ. ವಿಶ್ವದಾದ್ಯಂತ ಸುಮಾರು 50 ಕೋಟಿ ವಾಟ್ಸಪ್ (Whatsapp) ಬಳಕೆದಾರರ ಡೇಟಾ ಸೋರಿಕೆಯಾಗಿದೆ. ಅದನ್ನು ಮಾರಾಟಕ್ಕಿಡಲಾಗಿದೆ ಎಂಬ ಆಘಾತಕಾರಿ ಮಾಹಿತಿಯನ್ನು ಸೈಬರ್ ನ್ಯೂಸ್ (Cyber news) ವರದಿ ತಿಳಿಸಿದೆ.

ಭಾರೀ ದೊಡ್ಡ ಮಟ್ಟದ ಡೇಟಾ ಸೋರಿಕೆ ಪ್ರಕರಣ ಬೆಳಕಿಗೆ ಬಂದಿದೆ. ವಿಶ್ವದಾದ್ಯಂತ ಸುಮಾರು 50 ಕೋಟಿ ವಾಟ್ಸಪ್ (Whatsapp) ಬಳಕೆದಾರರ ಡೇಟಾ ಸೋರಿಕೆಯಾಗಿದೆ. ಅದನ್ನು ಮಾರಾಟಕ್ಕಿಡಲಾಗಿದೆ ಎಂಬ ಆಘಾತಕಾರಿ ಮಾಹಿತಿಯನ್ನು ಸೈಬರ್ ನ್ಯೂಸ್ (Cyber news) ವರದಿ ತಿಳಿಸಿದೆ. ಜನಪ್ರಿಯ ಹ್ಯಾಕಿಂಗ್ ವೇದಿಕೆಯೊಂದು 50 ಕೋಟಿ ವಾಟ್ಸಪ್ ಬಳಕೆದಾರರ ದೂರವಾಣಿ ಸಂಖ್ಯೆಯನ್ನು ಮಾರಾಟಕ್ಕೆ ಇಟ್ಟಿದೆ. ಇದರಲ್ಲಿ 84 ದೇಶಗಳ ವಾಟ್ಸಪ್ ಬಳಕೆದಾರರ ಖಾಸಗಿ ಮಾಹಿತಿ ಒಳಗೊಂಡಿದೆ.

WhatsApp iletişim biçimimizi nasıl değiştirdi, anlık mesajlaşma uygulamalarına ne kadar bağımlıyız? - BBC News Türkçe

ಈಜಿಪ್ಟ್ (Egypt) , ಇಟಲಿ (Italy) , ಫ್ರಾನ್ಸ್ (France) , ಬ್ರಿಟನ್, ರಷ್ಯಾ ಹಾಗೂ ಭಾರತವೂ ಸೇರಿದಂತೆ ಲಕ್ಷಾಂತರ ಬಳಕೆದಾರರ ಸಂಖ್ಯೆಗಳು ಇದರಲ್ಲಿ ಸೇರಿವೆ ಎನ್ನಲಾಗಿದೆ. ವರದಿಗಳ ಪ್ರಕಾರ, 84 ದೇಶಗಳ ಪೈಕಿ ಈಜಿಪ್ಟ್ನ ಅತಿ ಹೆಚ್ಚು ಬಳಕೆದಾರರ ಮಾಹಿತಿ ಸೋರಿಕೆಯಾಗಿದ್ದು, 4.5 ಕೋಟಿ ಜನರ ಮಾಹಿತಿ ಇದರಲ್ಲಿ ಸೇರಿವೆ. ಇಟಲಿಯ 3.5 ಕೋಟಿ ಹಾಗೂ ಅಮೆರಿಕದ 3.2 ಕೋಟಿ ಜನರ ಮಾಹಿತಿ ಸೋರಿಕೆಯಾಗಿದೆ. ಭಾರತದ 60 ಲಕ್ಷ ಬಳಕೆದಾರರ ಮಾಹಿತಿಯೂ ಸೋರಿಕೆಯಾಗಿದೆ ಎಂಬುದನ್ನು ವರದಿ ತಿಳಿಸಿದೆ. ವಾಟ್ಸಪ್ ಬಳಕೆದಾರರ ಮಾಹಿತಿಗಳನ್ನು ಮಾರಾಟಕ್ಕಿಟ್ಟಿರುವ ವ್ಯಕ್ತಿ ವಿವಿಧ ದೇಶಗಳ ಬಳಕೆದಾರರ ಡೇಟಾಗಳ ಬೆಲೆಯನ್ನೂ ನಿಗದಿಪಡಿಸಿದ್ದಾನೆ. ಅಮೆರಿಕದ ಬಳಕೆದಾರರ ಡೇಟಾಗಾಗಿ 5.61 ಲಕ್ಷ ರೂ., ಬ್ರಿಟನ್ ಬಳಕೆದಾರರ ಡೇಟಾಗೆ 1.61 ಲಕ್ಷ ರೂ. ಹಾಗೂ ಜರ್ಮನಿಯ ಬಳಕೆದಾರರ ಡೇಟಾಗಳಿಗಾಗಿ 2.04 ಲಕ್ಷ ರೂ. ನಿಗದಿಪಡಿಸಿದ್ದಾನೆ.  ಇದನ್ನೂ ಓದಿ : ಪುಷ್ಪಕ ವಿಮಾನ ಚಿತ್ರಕ್ಕೆ 35 ವರ್ಷ – ಭಾವನಾತ್ಮಕ ಪತ್ರ ಬರೆದ ಕಮಲ್

ಆದರೆ ಹ್ಯಾಕರ್ ಈ ಡೇಟಾಗಳನ್ನು ಹೇಗೆ ಪಡೆದಿದ್ದಾನೆ ಎಂಬ ಬಗ್ಗೆ ಮಾಹಿತಿಯಿಲ್ಲ. ಸೈಬರ್ ನ್ಯೂಸ್ ಪ್ರಕಟಿಸಿದ ವರದಿಯನ್ನು ನಿರಾಕರಿಸಿದ META ಸಂಸ್ಥೆಯೂ ಆ ರೀತಿಯ ಯಾವುದೇ ಘಟನೆಯೂ ನಡೆದಿಲ್ಲ ಎಂದು ಸ್ಪಷ್ಟನೆ ನೀಡಿದೆ . ಮತ್ತು ಈ ರೀತಿಯ ಸುದ್ದಿಗಳಿಗೆ ಕಿವಿಡಗೊಡಬೇಡಿ ಎಂದಿದೆ. ಸೈಬರ್ ನ್ಯೂಸ್ ಸಂಸ್ಥೆಯೂ ಪ್ರಕಟಿಸಿರುವ ಸುದ್ದಿಯಲ್ಲಿ ಯಾವುದೇ ಸತ್ಯಾಂಶವಿಲ್ಲ ಮತ್ತು ಮಾಡಿರುವ ಆರೋಪ ಆಧಾರರಹಿತ ಎಂದು ಅಲ್ಲಗಳೆದಿದೆ.

ಇದನ್ನೂ ಓದಿ : –  ಸಿದ್ದರಾಮಯ್ಯ ಟಿಪ್ಪು, ಟೋಪಿ ಪ್ರಿಯ – ಸಿ.ಟಿ.ರವಿ ವ್ಯಂಗ್ಯ

Related Articles

Leave a Reply

Your email address will not be published. Required fields are marked *

Back to top button
Close

Adblock Detected

Support Free Content We use ads to keep our content free for you. Please allow ads and let sponsors fund your surfing. Thank you!