ಸಿದ್ದರಾಮಯ್ಯ (siddaramaiah) ಕಾಲದಲ್ಲಿ ಹಗರಣಗಳಾಗಿದ್ದು ಇದನ್ನು ಜನರ ಬಳಿಗೆ ತಗೊಂಡುಹೋಗುವುದಾಗಿ ಹೇಳಿದ್ದ ಸಿಎಂ(basavaraj bommai) ಹೇಳಿಕೆಗೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿಕ್ರಿಯೆ ನೀಡಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಅವರು ನಮ್ಮ ಕಾಲದಲ್ಲಿ ಅಕ್ರಮ ನಡೆದಿದ್ರೆ ಯಾಕೆ ಸುಮ್ಮನಿದ್ರು. ಆಗ ಬಿಜೆಪಿ(bjp) ಯವರು ಕಡ್ಲೆ ಪುರಿ ತಿನ್ನುತ್ತಿದ್ರಾ. ದಾಖಲೆ ಇದ್ರೆ ಬಿಡುಗಡೆ ಮಾಡಿ ಮಾತನಾಡಲಿ. ಈಗ ದಾಖಲೆ ಬಿಡುಗಡೆ ಅಲ್ಲ ತನಿಖೆ ಮಾಡಲಿ. ಪಿಎಸ್ ಐ (psi) ಪ್ರಕರಣದಲ್ಲಿ ನೈತಿಕತೆ ಇದ್ದರೆ ಗೃಹ ಸಚಿವರನ್ನು ವಜಾಮಾಡಬೇಕು. ಗೃಹ ಸಚಿವರು ಸದನದಲ್ಲಿ ಪಿಎಸ್ ಐ ನೇಮಕಾತಿ ಅಕ್ರಮ ನಡೆದಿಲ್ಲ ಎಂದು ತಿಳಿಸಿದ್ರು.
ಜವಾಬ್ದಾರಿ ಸ್ಥಾನದಲ್ಲಿ ಇದ್ದು ಸುಳ್ಳು ಉತ್ತರ ಕೊಟ್ಟಿದ್ದಾರೆ. ಸುಳ್ಳು ಹೇಳಿದ ಮೇಲೆ ಸಚಿವರಾಗಿ ಹೇಗೆ ಮುಂದುವರಿತಾರೆ..? ಯಾವ ನೈತಿಕತೆ ಇದೆ ಮುಂದುವರಿಯಲು. ಬಿಜೆಪಿ ಕೂಡ ಅವರನ್ನು ಮುಂದುವರಿಸಬಾರದು. ಗೃಹ ಸಚಿವರು (home minister) ಸುಳ್ಳು ಹೇಳಿದ್ದು ಅಪರಾಧ ಅಲ್ವಾ..? ಕಾನೂನು ಓದಿಕೊಂಡಿದ್ದಾರೆನ್ರಿ…? ಎಂದು ಗೃಹ ಸಚಿವ ಆರಗ ಜ್ಞಾನೆಂದ್ರ ವಿರುದ್ಧ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದ್ರು.
ಇದನ್ನೂ ಓದಿ : – ಸರ್ಕಾರದಿಂದ ಸರ್ಕಾರಿ ಶಾಲೆಗಳ ನಿರ್ಲಕ್ಷ್ಯ – ಸೇವ್ ಸ್ಕೂಲ್ ಹ್ಯಾಶ್ ಟ್ಯಾಗ್ ಬಳಸಿ ಸಿದ್ದರಾಮಯ್ಯ ಆಕ್ರೋಶ