ಮುಖ್ಯಮಂತ್ರಿ ವಿರುದ್ಧ ಮಾತನಾಡಿದ್ದಕ್ಕೆ ಅರೆಸ್ಟ್ ಮಾಡಿದ್ದರು. ಅದೇ ರೀತಿ ಪ್ರಚೋದನೆ ಮಾಡುವವರನ್ನೂ ಅರೆಸ್ಟ್ ಮಾಡಿ. ಪ್ರಚೋದನೆ ಮಾಡುವವರು ಶಾಸಕನೇ ಆಗಿರಲಿ, ಸಚಿವನೇ ಆಗಿರಲಿ ಅವರನ್ನು ಅರೆಸ್ಟ್ ಮಾಡಿ. ಇಂತಹವರು ಈ ದೇಶವನ್ನು ಉಳಿಸುವವರಲ್ಲ ಆಕ್ರೋಶ ವ್ಯಕ್ತಪಡಿಸಿದ್ದಾರೆ. ವಿಧಾನಸೌಧದಲ್ಲಿ ಮಾತನಾಡಿದ ಅವರು ರಾಜ್ಯವನ್ನು ಎಲ್ಲಿಗೆ ಕೊಂಡೊಯ್ಯಬೇಕೆಂದು ಅಂದುಕೊಂಡಿದ್ದೀರಿ? ರಾಜ್ಯವನ್ನು ಹಾಳು ಮಾಡಿಕೊಳ್ಳಬೇಡಿ. ಕರ್ನಾಟಕದ ಶಾಂತಿಯ ತೋಟವನ್ನು ಹಾಳು ಮಾಡಬೇಡಿ. ಇಲ್ಲಿ ಯಾರೂ ಶಾಶ್ವತವಲ್ಲ. ಕನ್ನಡಿಗರೇ ದಾರಿ ತಪ್ಪಬೇಡಿ ಎಂದು ಹೆಚ್.ಡಿ ಕುಮಾರಸ್ವಾಮಿ ಮನವಿ ಮಾಡಿಕೊಂಡಿದ್ದಾರೆ.
ಹೊಟ್ಟೆಗೆ ತಿನ್ನೋಕೆ ಏನೂ ಕೊಡದೆ ತಣ್ಣೀರು ಬಟ್ಟೆ ಹಾಕಿದ್ರಿ. ದಲಿತರು ಪೂಜೆ ಮಾಡಲು ಹಿಂದೂ ದೇವಾಲಯಕ್ಕೆ ಬಿಡ್ತೀರಾ? ದೇವಾಲಯಗಳನ್ನು ಕಟ್ಟುವವರು ಹಿಂದುಳಿದವರು, ದಲಿತರು. ದೇವಸ್ಥಾನದೊಳಗೆ ಕೂತು ಆಸ್ತಿ ಹೊಡೆಯುವವರು ನೀವುಗಳು. ನೀವು ಮಜಾ ಮಾಡುವವರು ಎಂದು ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದನ್ನು ಓದಿ :- IT NOTICE – ಹೆಚ್ಡಿಡಿ ಪತ್ನಿ ಚೆನ್ನಮ್ಮಗೆ ಆದಾಯರ ತೆರಿಗೆ ಅಧಿಕಾರಿಗಳಿಂದ ನೋಟಿಸ್