ಲೋಕಸಭೆಯಲ್ಲಿ (Lok Sabha) ಮಂಗಳವಾರ ಮಾತನಾಡಿದ ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ ಅಂಕಿ ಅಂಶಗಳನ್ನು ಉಲ್ಲೇಖಿಸಿ ಬಿಜೆಪಿ (BJP) ನೇತೃತ್ವದ ಕೇಂದ್ರ ಸರ್ಕಾರಕ್ಕೆ ಪ್ರಶ್ನೆಗಳ ಸುರಿಮಳೆಗೈದಿದ್ದಾರೆ.
Two months ago @AITCofficial National General Secretary @abhishekaitc coined the new phrase #IndiasBiggestPappuAmitShah
Then came T-shirts & more which went viral across #India
Today @MahuaMoitra introduced #IndiasBiggestPappuAmitShah to Lok Sabha #Parliament
Her speech 👇 https://t.co/SaDByZhDgB pic.twitter.com/jHGWlo321T
— Derek O'Brien | ডেরেক ও'ব্রায়েন (@derekobrienmp) December 13, 2022
ಈಗ ಪಪ್ಪು ಯಾರು ಎಂದು ಕೇಳಿದ್ದರು. ಮೊಯಿತ್ರಾ ಅವರ ಭಾಷಣ ಸಾಮಾಜಿಕ ಮಾಧ್ಯಮಗಳಲ್ಲೂ ಸಂಚಲನ ಸೃಷ್ಟಿಸಿದ್ದು ವಿಪಕ್ಷ ನಾಯಕರು ವಿಡಿಯೊವನ್ನು ಶೇರ್ ಮಾಡಿ ಶ್ಲಾಘಿಸಿದ್ದಾರೆ. ಅನುದಾನದ ಪೂರಕ ಬೇಡಿಕೆ ಕುರಿತು ಲೋಕಸಭೆಯಲ್ಲಿ ನಡೆದ ಚರ್ಚೆ ವೇಳೆ ಮೊಯಿತ್ರಾ ಅವರು ಕೈಗಾರಿಕೆ, ನಿರ್ಮಾಣ ವಲಯ ಮತ್ತು ಭಾರತ ಬಿಟ್ಟು ವಲಸೆ ಹೋಗುತ್ತಿರುವ ಜನರ ಅಂಕಿ ಅಂಶಗಳನ್ನು ಉಲ್ಲೇಖಿಸಿ ಪ್ರಶ್ನಿಸಿದ್ದಾರೆ. ಅವಹೇಳನ, ತೀವ್ರ ಅಸಮರ್ಥತೆಯನ್ನು ಸೂಚಿಸುವ ಪಪ್ಪು ಎಂಬ ಪದವನ್ನು ಆಡಳಿತರೂಢ ಬಿಜೆಪಿ ಹುಟ್ಟು ಹಾಕಿದ್ದು, ಸಾಮಾನ್ಯವಾಗಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮೇಲೆ ದಾಳಿ ಮಾಡಲು ಬಳಸಲಾಗುತ್ತದೆ. ಇದನ್ನು ಓದಿ : – BMTC ನೌಕರರಿಗೆ ಗುಡ್ ನ್ಯೂಸ್ – 5 ಲಕ್ಷ ರೂ. ಆರೋಗ್ಯ ವಿಮೆ ಘೋಷಿಸಿದ ಶ್ರೀರಾಮುಲು
— Mahua Moitra (@MahuaMoitra) December 13, 2022
ಹೀಗೆ ಹೇಳುವಾಗ ವಿಪಕ್ಷ ನಾಯಕರು ಮೇಜು ಕುಟ್ಟಿ ಪ್ರಶಂಸಿಸಿದ್ದಾರೆ. ತಮ್ಮ ಭಾಷಣವನ್ನು ಮುಂದುವರಿಸಿದ ಟಿಎಂಸಿ ಸಂಸದೆ, ಸವಾಲ್ ಯೇ ನಹೀ ಹೈ ಬಸ್ತಿಯಾಂ ಕಿಸ್ನೇ ಜಲಾಯಿ, ಸವಾಲ್ ಯೇ ಹೈ ಕೀ ಪಾಗಲ್ ಕೇ ಹಾಥ್ ಮೇ ಮಾಚಿಸ್ ಕಿಸ್ನೇ ದೀ (ಯಾರು ಬೆಂಕಿ ಹೊತ್ತಿಸಿದರು ಎಂಬುದು ಪ್ರಶ್ನೆಯಲ್ಲ, ಹುಚ್ಚನ ಕೈಯಲ್ಲಿ ಬೆಂಕಿಪೊಟ್ಟಣ ಕೊಟ್ಟವರು ಎಂಬುದು ಪ್ರಶ್ನೆ) ಎಂದು ಕೇಳಿದ್ದಾರೆ. ನಟ ಪ್ರಕಾಶ್ ರಾಜ್ ಕೂಡಾ ಮೊಯಿತ್ರಾ ಅವರ ಭಾಷಣ ಶೇರ್ ಮಾಡಿ, ಡಿಯರ್ ಸುಪ್ರೀಂ ಪಪ್ಪು, ಎನೀ ಕಾಮೆಂಟ್ಸ್ ಎಂದು ಬರೆದಿದ್ದಾರೆ. ಇದೇ ಭಾಷಣ ಶೇರ್ ಮಾಡಿದ ಡಿಎಂಕೆ ಶಾಸಕ ಟಿಆರ್ ಬಿ ರಾಜ, ಖಜಾನೆ ಕಿತ್ತುಕೊಳ್ಳುತ್ತಿರುವ ಮಹುವಾ ಎಂದು ಬರೆದಿದ್ದಾರೆ. ಮಹುವಾ ರೀತಿ ಹೆಚ್ಚಿನ ಸಂಸದರು ಬೇಕು ಎಂದು ಮಹಾರಾಷ್ಟ್ರ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜಿತೇಂದ್ರ ದೆಹಾಡೆ ಹೇಳಿದ್ದಾರೆ.
ಇದನ್ನು ಓದಿ : – ಶೀಘ್ರವೇ ಅಧಿಕೃತವಾಗಿ ಕಾಂಗ್ರೆಸ್ ಪಕ್ಷ ಸೇರುತ್ತೇನೆ – ವೈ ಎಸ್ ವಿ ದತ್ತ