ಬಾಲಗಂಗಾಧರನಾಥ ಸ್ವಾಮೀಜಿ ಇತಿಹಾಸ, ಶಿವಕುಮಾರ ಸ್ವಾಮೀಜಿ ಇತಿಹಾಸ, ಶಂಕರಾಚಾರ್ಯರು ಎಲ್ಲರ ಬಗ್ಗೆಯೂ ಪಠ್ಯದಲ್ಲಿ (TEXT BOOK) ಅವಮಾನ ಆಗಿದೆ. ಕೆಲವು ಸ್ವಾಮೀಜಿಗಳು ಟ್ವೀಟ್ ಮಾಡಿ ದೂರು ಕೊಡುವ ಕೆಲಸ ಮಾಡಿದ್ದಾರೆ ಎಂದು ಡಿ.ಕೆಶಿವಕುಮಾರ್ (D.K SHIVKUMAR) ಹೇಳಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಅವರು ಸ್ವಾಮೀಜಿಗಳು ರಾಜಕಾರಣಕ್ಕೆ ಬೆಂಬಲ ಕೊಡುವುದು ಬೇಡ. ಆದರೆ ಇನ್ನಷ್ಟು ಸ್ವಾಮೀಜಿಗಳು ಧ್ವನಿ ಎತ್ತಬೇಕು. ಸರ್ಕಾರಕ್ಕೆ ಹೆದರಿಕೊಂಡು ಸ್ವಾಮೀಜಿಗಳು ಸುಮ್ಮನಿರುವುದು ಬೇಡ. ಅವರೇ ಧ್ವನಿ ಎತ್ತದಿದ್ದರೆ ಯಾರು ಎತ್ತಬೇಕು? ಒಂದು ಜಾತಿ ಧರ್ಮದ ವಿಚಾರ ಅಲ್ಲ. ಎಲ್ಲರೂ ಕೂಡ ಒಗ್ಗಟ್ಟಾಗಿ ಇರಬೇಕು ಶಾಂತಿ ಭಂಗ ಮಾಡುವ ಕೆಲಸ ಸರ್ಕಾರ ಮಾಡ್ತಿದೆ. ಅವಮಾನ ಆದಾಗ ಒಕ್ಕಲಿಗರ ಸಂಘ ಯಾಕೆ ಮಾತಾಡ್ತಿಲ್ಲ? ಬೇರೆ ಸಂಘಟನೆಗಳು ಯಾಕೆ ಮಾತಾಡ್ತಿಲ್ಲ? ರಾಜಕಾರಣಿಗಳು ಕೆಲವರು ಅಡ್ಜಸ್ಟ್ ಮಾಡ್ಕೊಂಡು ರಾಜಕಾರಣ ಮಾಡ್ತಿರಬಹುದು ಎಂದು ತಿಳಿಸಿದ್ರು. ಇದನ್ನು ಓದಿ :– ಕಾಂಗ್ರೆಸ್ ಬೆಂಕಿಗೆ ತುಪ್ಪ ಸುರೀತಿದೆ – ಸಿಎಂ ಬೊಮ್ಮಾಯಿ
ಮೋದಿ ಪ್ರಯಾಣಿಸುವ ರಸ್ತೆಗಳಲ್ಲಿ ಕಾಲೇಜುಗಳಿಗೆ ರಜೆ ವಿಚಾರ
ಕಾಲೇಜುಗಳಿಗೆ ಯಾಕೆ ರಜೆ ಕೊಡಬೇಕು? ವಿದ್ಯಾರ್ಥಿಗಳು ಗಲಾಟೆ ಮಾಡ್ತಾರಾ? ರೋ ಡಲ್ಲಿ ಏನು ಸೆಕ್ಯೂರಿಟಿ ಕೊಡಬೇಕೋ ಕೊಡಿ. ರೋಡ್ ಶೋ ಮಾಡಿ ರಾಜಕೀಯ ಮಾಡಿ. ಆದರೆ ವಿದ್ಯಾರ್ಥಿ ಗಳನ್ನು ಯಾಕೆ ಅನುಮಾನದಿಂದ ನೋಡ್ತಿದ್ದೀರಾ? ನಮ್ಮ ವಿದ್ಯಾರ್ಥಿಗಳೇನು ಟೆರರಿಸ್ಟ್ ಗಳಾ? ಅಗ್ನಿಪಥ್ (AGNIPATH) ಯೋಜನೆ ತಂದಿದ್ದೀರಾ ಆ ಮಕ್ಕಳು ಡಿಗ್ರಿ ಪಾಸ್ ಮಾಡಬಾರದಾ? ಇಷ್ಟು ವರ್ಷ ದೇಶವನ್ನು ಎಂಥೆಂತಾ ಸಂದರ್ಭಗಳಲ್ಲಿ ರಕ್ಷಣೆ ಮಾಡಿದ್ದಾರೆ. ಮಂತ್ರಿಗಳು ಅವರ ಮಕ್ಕಳನ್ನು ಅಗ್ನಿಪಥ್ ಯೋಜನೆಗೆ ಕಳಿಸಲಿ ನೋಡೋಣ. ಮಂತ್ರಿಗಳ ಮಕ್ಕಳು ಇಂಜಿನಿಯರ್ ಆಗಬೇಕು, ಡಾಕ್ಟರ್ ಆಗಬೇಕು. ಆದರೆ ಬಡವರ ಮಕ್ಕಳು ಮಾತ್ರ ಸೆಕ್ಯುರಿಟಿ ಗಾರ್ಡ್ಸ್ ಗಳಾಗಬೇಕಾ? ಮೋದಿ ( NARENDRA MODI) ಬರುತ್ತಿರುವುದು ಜನಕ್ಕೆ ಅನುಕೂಲ ಅಲ್ಲ. ನಾಯಕರ ಅನುಕೂಲಕ್ಕೆ. ನಮ್ಮ ಕಾರ್ಯಾಧ್ಯಕ್ಷ ರಾಮಲಿಂಗಾರೆಡ್ಡಿ (RAMLINGA REDDY) ಕೇಳಿದ ಪ್ರಶ್ನೆ ಗಳಿಗೆ ಮೋದಿ ಉತ್ತರ ಕೊಡಲಿ ನೊಡೋಣ ಎಂದು ಮೋದಿ ವಿರುದ್ದ ಕಿಡಿಕಾರಿದ್ರು.
ಇದನ್ನು ಓದಿ :– ಅಸ್ಸಾಂ – ಮೇಘಾಲಯದಲ್ಲಿ ಪ್ರವಾಹದಿಂದಾಗಿ 1700 ಗ್ರಾಮಗಳು ಮುಳುಗಡೆ