ಕರ್ನಾಟಕದಲ್ಲಿನ ಹಿಜಾಬ್ ವಿವಾದದ ಬಗ್ಗೆ ಖಾರವಾಗಿ ಪ್ರತಿಕ್ರಿಯಿಸಿರುವ ಕಾಂಗ್ರೆಸ್ ನಾಯಕ ಪ್ರಿಯಾಂಕಾ ಗಾಂಧಿ, ಬಿಕಿನಿಯಾದರೂ ಹಾಕಿಕಕೊಳ್ಳಲಿ, ಹಿಜಾಬ್ ಆದರೂ ಹಾಕಿಕೊಳ್ಳಲಿ ಅದು ಮಹಿಳೆಯರ ಹಕ್ಕು ಎಂದು ಹೇಳಿದ್ದಾರೆ.
ಮಹಿಳೆಯರು ಏನು ಧರಿಸಬೇಕು ಎಂಬುದು ಅವರ ಹಕ್ಕು. ಯಾವುದು ಹಾಕಬೇಕು ಎಂದು ನಿರ್ಧರಿಸುವ ಹಕ್ಕು ಯಾರಿಗೂ ಇಲ್ಲ. ಈ ರೀತಿ ಕಿರುಕುಳ ಕೊಡುವುದನ್ನು ನಿಲ್ಲಿಸಿ ಎಂದು ಅವರು ಟ್ವಿಟರ್ ನಲ್ಲಿ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬಿಕಿನಿಯಾಗಿರಲಿ, ಮುಸುಕು, ಜೀನ್ಸ್ ಆಗಿರಲಿ ಅಥವಾ ಹಿಜಬ್ ಆಗಿರಲಿ, ತಾನು ಏನು ಧರಿಸಬೇಕೆಂದು ನಿರ್ಧರಿಸುವುದು ಮಹಿಳೆಯ ಹಕ್ಕು. ಈ ಹಕ್ಕನ್ನು ಭಾರತೀಯ ಸಂವಿಧಾನವು ಖಾತರಿಪಡಿಸಿದೆ. ಮಹಿಳೆಯರಿಗೆ ಕಿರುಕುಳ ನೀಡುವುದನ್ನು ನಿಲ್ಲಿಸಿ ಎಂದು ಅವರು ಹೇಳಿದ್ದಾರೆ.