ಕೋಲಾರದಲ್ಲಿ (Kolar ) ಹೊಂಡಾ ಕಂಪನಿಯಲ್ಲಿ (Honda company) ಕೆಲಸ ಮಾಡ್ತಿರುವ ಕಾರ್ಮಿಕರು ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಪ್ರತಿಭಟನೆ ನಡೆಸುತ್ತಿದ್ದಾರೆ. ವೇತನವನ್ನ ಪ್ರತೀ ವರ್ಷ ೧೨% ಹೆಚ್ಚಿಸಬೇಕು ಎಂದು ಬೇಡಿಕೆ ಇಟ್ಟಿದ್ದಾರೆ .
ಕಂಪನಿಯಿಂದ ಬ್ರೇಕ್ ಆದ ಕಾರ್ಮಿಕನನ್ನು ೨ ದಿನದಲ್ಲಿ ಮತ್ತೆ ಕೆಲಸಕ್ಕೆ ಸೇರಿಸಿಕೊಳ್ಳಬೇಕು ಎಂದು ಮನವಿ ಮಾಡಿದ್ದಾರೆ . ಎಸ್ಪಿ ಗೆ ಮನವಿ ಸಲ್ಲಿಸಿ ನಂತರ ಜಿಲ್ಲಾಧಿಕಾರಿ ಮೂಲಕ ರಾಜ್ಯಪಾಲರಿಗೆ ಕಾರ್ಮಿಕರು ಮನವಿ ಸಲ್ಲಿಸಲಿದ್ದಾರೆ . ಹೊಂಡಾ ಕಂಪನಿಗೆ ಇಂದು ರಜೆಯಿರುವ ಹಿನ್ನೆಲೆಯಲ್ಲಿ ಕಂಪನಿಯಲ್ಲಿ ಕೆಲಸ ಮಾಡ್ತಿರುವ ೧೮೦೦ ಮಂದಿ ಕಾರ್ಮಿಕರು (Workers) ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ್ದಾರೆ . ಬೇಡಿಕೆಗಳನ್ನು ಈಡೇರಿಸುವುದಾಗಿ ಎರಡು ವಾರಗಳ ಕಾಲ ಹೊಂಡಾ ಕಂಪನಿ ಕಾಲವಕಾಶ ಕೋರಿತ್ತು .ಕಾಲವಾಕಾಶ ಮುಕ್ತಾಯವಾದ ಹಿನ್ನೆಲೆ ಇಂದು ಜಿಲ್ಲಾಧಿಕಾರಿಗಳ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಲು ಕಾರ್ಮಿಕರು ಮುಂದಾಗಿದ್ದಾರೆ . ಇದನ್ನೂ ಓದಿ : – ತಮಿಳುನಾಡಿನಲ್ಲಿ ಚಿದಂಬರಂ ಸೇರಿ ಆರು ಅಭ್ಯರ್ಥಿಗಳು ರಾಜ್ಯಸಭೆಗೆ ಅವಿರೋಧ ಆಯ್ಕೆ