ಕೇಂದ್ರ ಸರ್ಕಾರ ಚಿನ್ನದ ಮೇಲಿನ ಮೂಲ ಆಮದು ತೆರಿಗೆಯನ್ನು ಶೇ. 7.5 ರಿಂದ ಶೇ. 12.5ಕ್ಕೆ ಏರಿಕೆ ಮಾಡಿದೆ. ರೂಪಾಯಿ ಮೌಲ್ಯ ದಾಖಲೆಯ ಮಟ್ಟಕ್ಕೆ ಕುಸಿದಿರುವ ಹಿನ್ನೆಲೆಯಲ್ಲಿ ಆಮದು ತಡೆಯುವ ಉದ್ದೇಶದಿಂದ ಸರಕಾರ ಈ ಕ್ರಮ ಕೈಗೊಂಡಿದೆ.
ಈ ಹಿಂದೆ ಚಿನ್ನದ ಮೇಲಿನ ಆಮದು ಸುಂಕವು ಸೆಸ್, ಸೋಷಿಯಲ್ ವೆಲ್ಫೇರ್ ಸರ್ಚಾರ್ಜ್ ಸೇರಿ ಶೇ. 10.75 ಇತ್ತು. ಇದೀಗ ಆಮದು ತೆರಿಗೆ ಹೆಚ್ಚಳದ ನಂತರ ಶೇ. 15.75ಕ್ಕೆ ಏರಿಕೆಯಾಗಲಿದೆ. ದೇಶೀಯ ಮಾರುಕಟ್ಟೆಯನ್ನು ಬಲಪಡಿಸಲು ಚೀನಾ, ಅಮೆರಿಕ ಮತ್ತು ಸಿಂಗಾಪುರದಂತಹ ದೇಶಗಳು ಈಗಾಗಲೇ ಚಿನ್ನದ ಮೇಲಿನ ಆಮದು ಸುಂಕವನ್ನು ತೆಗೆದುಹಾಕಿವೆ. ಆದರೆ ಭಾರತ ಆಮದು ಸುಂಕವನ್ನು ಹೆಚ್ಚಿಸಿದೆ. ಇದನ್ನೂ ಓದಿ :- ರಾಯಚೂರಿನಲ್ಲಿ ಚಿರತೆ ಸೆರೆ ಹಿಡಿಯಲು ಚುರುಕುಗೊಂಡ ಕಾರ್ಯಾಚರಣೆ
ದುಬಾರಿಯಾಗಲಿದೆ ಚಿನ್ನ
ಆಮದು ಸುಂಕ ಹೆಚ್ಚಳವಾಗಿರುವುದರಿಂದ ದೇಶದಲ್ಲಿ ಚಿನ್ನದ ದರ ಮುಂದಿನ ದಿನಗಳಲ್ಲಿ ಏರಿಕೆಯಾಗಲಿದೆ. ಈಗಾಗಲೇ ದೇಶದಲ್ಲಿ ಚಿನ್ನದ ದರ ಗರಿಷ್ಠ ಮಟ್ಟದಲ್ಲಿದ್ದು, ಇದೀಗ ಮತ್ತೆ ದರ ಏರಿಕೆಯಾಗಲಿರುವುದು ಆಭರಣ ಪ್ರಿಯರಿಗೆ ನಿರಾಶೆ ಮೂಡಿಸಿದೆ. 10 ಗ್ರಾಂಗೆ 51,900 ರೂ.ಗೆ ಏರಿಕೆಯಾಗಿದೆ. ಆದ್ರೆ ಜಾಗತಿಕ ಮಟ್ಟದಲ್ಲಿ ಇಂದು ಚಿನ್ನದ ದರ ಕುಸಿತವಾಗಿದೆ.
ಇದನ್ನೂ ಓದಿ :- ಇಂದು ಆಷಾಢ ಮಾಸದ ಮೊದಲ ಶುಕ್ರವಾರ – ಚಾಮುಂಡಿ ಬೆಟ್ಟಕ್ಕೆ ಹರಿದು ಬಂದ ಭಕ್ತ ಸಾಗರ