ಕಾಂಗ್ರೆಸ್ (Congress ) ಪಕ್ಷ ಸುಧೀರ್ಘವಾಗಿ ದೇಶದಲ್ಲಿ ಅಧಿಕಾರ ನಡೆಸಿದ್ದರು. ಅಂಬೇಡ್ಕರ್ (Ambedker) ಅವರ ಹೆಸರು ಸ್ಮರಣೆ ಮಾಡಿಲ್ಲ ಎಂದು ರಾಜ್ಯ ಕಾಂಗ್ರೆಸ್ ವಿರುದ್ದ ಬಿಜೆಪಿ ಎಮ್.ಎಲ್.ಸಿ ಛಲವಾದಿ ನಾರಾಯಣಸ್ವಾಮಿ (Chlavadhi narayaswamy) ವಾಗ್ದಾಳಿ ನಡೆಸಿದ್ದಾರೆ. ಕೋಲಾರ (kolar) ದಲ್ಲಿ ಮಾತನಾಡಿದ ಅವರು ಕಾನೂನು ದಿನವಾದ ಇಂದು ಸಂವಿಧಾನ ದಿನವನ್ನಾಗಿ ಮಾಡಿದ್ದು ಬಿಜೆಪಿ ಸರ್ಕಾರ.
ಪ್ರಧಾನಿ ಮೋದಿ (Modi) ಯವರು ಪ್ರಧಾನಿಯಾಗಿದ್ದು ಡಾ ಬಿ.ಆರ್ ಅಂಬೇಡ್ಕರ್ ಅವರ ಸಂವಿಧಾನದ ಅಡಿ ಎಂದು ಹೇಳಿದ್ದಾರೆ. ಆದರೆ ಕಾಂಗ್ರೆಸ್ ಪಕ್ಷ ಎಂದೂ ಅಧಿಕಾರದಲ್ಲಿದ್ದಾಗ ಅವರನ್ನು ಸ್ಮರಿಸಿಲ್ಲ ಎಂದು ಹೇಳಿದ್ರು. ಸಂವಿಧಾನಕ್ಕೆ ಅಪಚಾರ ಮಾಡುವ ಕೆಲಸ ಇದುವರೆಗೆ ಬಿಜೆಪಿ ಹಾಗು ಸಂಘ ಪರಿವಾರ ಮಾಡಿಲ್ಲ. ಸಂವಿಧಾನದ ವಿಚಾರವಾಗಿ ಬಿಜೆಪಿ ವಿರುದ್ದ ದೊಡ್ಡ ಅಪಪ್ರಚಾರ ನಡೆಸಲಾಗ್ತಿದೆ. ರಾಹುಲ್ ಗಾಂಧಿ (Rahul gandhi) ಯ ಭಾರತ್ ಜೋಡೋ ಯಾತ್ರೆ ಹಾಸ್ಯಾಸ್ಪದ. ಸಂವಿಧಾನದ ಉಳಿವಿಗೆ ಹೋರಾಟ ಅಂತಿದ್ದಾರೆ. ಆದರೆ 1976 ರಲ್ಲಿ ಇಂದಿರಾಗಾಂಧಿ ದೇಶದಲ್ಲಿ ತುರ್ತು ಪರಿಸ್ಥಿತಿ ಹೇರಿ ಸಂವಿಧಾನಕ್ಕೆ ವಿರೋಧಿ ಕೆಲಸ ಮಾಡಿದ್ರು ಎಂದು ಛಲವಾದಿ ನಾರಾಯಣಸ್ವಾಮಿ ತಿಳಿಸಿದ್ದಾರೆ.
ಇದನ್ನೂ ಓದಿ : – ಚಿಕ್ಕಮಗಳೂರು ಪ್ರವಾಸದಲ್ಲಿ ಸಿಎಂ ಬಸವರಾಜ್ ಬೊಮ್ಮಾಯಿ