Life Style

ಪರೀಕ್ಷೆಯ ಒತ್ತಡವನ್ನು ನಿವಾರಿಸುವುದು ಹೇಗೆ? ಇಲ್ಲಿದೆ ಟಿಪ್ಸ್…

ಪರೀಕ್ಷೆಯ ಒತ್ತಡವನ್ನು ನಿಯಂತ್ರಿಸಿ ಮನಸ್ಸಿನ ಶಾಂತಿಯನ್ನು ಕಾಪಾಡಿಕೊಳ್ಳಲು ವಿದ್ಯಾರ್ಥಿಗಳು ತಮ್ಮ ದೈನಂದಿನ ದಿನಚರಿಯಲ್ಲಿ ಅಳವಡಿಸಿಕೊಳ್ಳಬೇಕಾದ ಚಟುವಟಿಕೆಗಳ ಇಲ್ಲಿವೆ. ಪರೀಕ್ಷೆಯು ಎಲ್ಲಾರ ಮನಸ್ಸಿಗೂ ಪ್ರಭಾವ ಬೀರುತ್ತದೆ. ಪರೀಕ್ಷಾ ಸಮಯದಲ್ಲಿ ಎಲ್ಲಾ ವಿದ್ಯಾರ್ಥಿಗಳು ಹೆಚ್ಚು ಒತ್ತಡವನ್ನು ಎದುರಿಸುತ್ತಾರೆ. ಒತ್ತಡವು ಮಾನಸಿಕ ಆರೋಗ್ಯಕ್ಕೆ ಹಾನಿಕಾರಕವಾಗಿರುವುದರ ಜೊತೆಗೆ ವಿದ್ಯಾರ್ಥಿಗಳಿಗೆ ಉತ್ತಮವಾಗಿ ಕಾರ್ಯನಿರ್ವಹಿಸುವ, ಶೈಕ್ಷಣಿಕ ಉತ್ಕೃಷ್ಟತೆಯನ್ನು ಕಾಪಾಡಿಕೊಳ್ಳುವ ಮತ್ತು ಅತ್ಯುತ್ತಮ ಫಲಿತಾಂಶಗಳನ್ನು ಪಡೆಯಲು ಅಡಚಣೆ ಉಂಟು ಮಾಡುತ್ತದೆ. ಈ ನಿಟ್ಟಿನಲ್ಲಿ, ಆ ಅವಧಿಯಲ್ಲಿ ಉಂಟಾಗುವ ಒತ್ತಡ ಮತ್ತು ಆತಂಕವು ವಿದ್ಯಾರ್ಥಿಯ ಏಕಾಗ್ರತೆ, ಸ್ಮರಣೆ ಮತ್ತು ಒಟ್ಟಾರೆ ಉತ್ಪಾದಕತೆಯ ಮೇಲೆ ಪರಿಣಾಮ ಬೀರಬಹುದು. ಪರೀಕ್ಷೆಯ ಅವಧಿಯಲ್ಲಿ ಮನಸ್ಸಿನ ಶಾಂತಿಯನ್ನು ಕಾಪಾಡಿಕೊಳ್ಳಲು ವಿದ್ಯಾರ್ಥಿಗಳು ತಮ್ಮ ದೈನಂದಿನ ದಿನಚರಿಯಲ್ಲಿ ಶಾಂತಗೊಳಿಸುವ ಕೆಲವು ಚಟುವಟಿಕೆಗಳನ್ನು ಅಳವಡಿಸಿಕೊಳ್ಳುವುದು ಒಳ್ಳೆಯದು. ಪರೀಕ್ಷೆಯ ಉದ್ದಕ್ಕೂ ವಿದ್ಯಾರ್ಥಿಯನ್ನು ಕೇಂದ್ರೀಕರಿಸಲು ಮತ್ತು ತೊಡಗಿಸಿಕೊಳ್ಳಲು ಸಹಾಯ ಮಾಡುವ ಕೆಲವು ಅಭ್ಯಾಸಗಳು ಇಲ್ಲವೆ. ಪರೀಕ್ಷೆಯ ಸಮಯದಲ್ಲಿ ಮನಸ್ಸಿನ ಶಾಂತಿಗಾಗಿ ಅಭ್ಯಾಸ ಮಾಡಬೇಕಾಗಿರುವ ಕೆಲವು ಚಟುವಟಿಕೆಗಳು.


ಸಂಗೀತ ಧ್ಯಾನ:
ಸಂಗೀತ ಧ್ಯಾನ ಮನಸ್ಸಿನ ಶಾಂತಿಯನ್ನು ಉತ್ತೇಜಿಸಲು ಮತ್ತು ಪರೀಕ್ಷೆಯ ಸಮಯದಲ್ಲಿ ಒತ್ತಡವನ್ನು ಕಡಿಮೆ ಮಾಡಲು ಅತ್ಯುತ್ತಮ ಮಾರ್ಗವಾಗಿದೆ. ಸಂಗೀತ ಧ್ಯಾನವು ಮನಸ್ಸನ್ನು ಶಾಂತಗೊಳಿಸುವ ಪರಿಣಾಮವನ್ನು ಹೊಂದಿದೆ, ಇದು ಒತ್ತಡದ ಮಟ್ಟವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಪರೀಕ್ಷೆಯ ಸಮಯದಲ್ಲಿ ಸಂಗೀತ ಕೇಳುತ್ತ ಧ್ಯಾನ ಮಾಡುವುದರಿಂದ ವಿದ್ಯಾರ್ಥಿಯು ನೆನಪಿನ ಶಕ್ತಿ ಹೆಚ್ಚಿಸಲು ಸಹಾಯ ಮಾಡುತ್ತದೆ ಎಂದು ವೈಜ್ಞಾನಿಕ ಅಧ್ಯಯನಗಳಲ್ಲಿ ತೋರಿಸಲಾಗಿದೆ.


ಜಾಗರೂಕರಾಗಿರುವುದು:
ನೀವು ಎಚ್ಚರದಿಂದಿದ್ದಾಗ ನಮ್ಮ ಮನಸ್ಸು ಪ್ರತಿ ಕ್ಷಣ ಅದೇ ಸಂದರ್ಭದಲ್ಲಿ ಅಥವಾ ಜಾಗದಲ್ಲಿ ಇರುತ್ತದೆ. ಜೊತೆಗೆ ನಿಮ್ಮ ಪಂಚೇಂದ್ರಿಯಗಳು ಎಂದರೆ ಸ್ಪರ್ಶ, ರುಚಿ, ದೃಷ್ಟಿ, ಶ್ರವಣ ಮತ್ತು ವಾಸನೆ ಎಚ್ಚೆತ್ತಿಕೊಂಡಿರುತ್ತದೆ. ಇದರಿಂದ ಪರೀಕ್ಷೆಯ ಉದ್ದಕ್ಕೂ ಮನಸ್ಸು ಹಿಡಿತದಲ್ಲಿರುತ್ತದೆ, ಶಾಂತ ರೀತಿಯಲ್ಲಿ ಪರೀಕ್ಷೆಯನ್ನು ಬರೆಯಲು ಸಾಧ್ಯವಾಗುತ್ತದೆ. ಗಮನವನ್ನು ಕೇಂದ್ರೀಕರಿಸುವ ಶಿಸ್ತನ್ನು ಅಭ್ಯಾಸ ಮಾಡಿಕೊಂಡರೆ ಪರೀಕ್ಷೆಯ ಸಮಯದಲ್ಲಿ ಏಕಾಗ್ರತೆಯಿಂದ ಇರಲು ಸಾಧ್ಯವಾಗುತ್ತದೆ.


ಆರೋಗ್ಯಕರ ಅಭ್ಯಾಸಗಳು:
ಪರೀಕ್ಷೆಗಳನ್ನು ಎದುರಿಸುವವರು ಒತ್ತಡಕ್ಕೆ ಒಳಗಾಗುವುದು ಸಾಮಾನ್ಯ, ಆದ್ದರಿಂದ ಆರೋಗ್ಯಕರ ಅಭ್ಯಾಸಗಳನ್ನು ಅಭ್ಯಾಸ ಮಾಡುವುದು ಅತ್ಯಗತ್ಯ. ಪರೀಕ್ಷೆಯ ತಯಾರಿಗೆ ಹೆಚ್ಚಿನ ಶ್ರಮ ಮತ್ತು ಏಕಾಗ್ರತೆಯ ಅಗತ್ಯವಿರುತ್ತದೆ. ಇದರಿಂದ ವಿದ್ಯಾರ್ಥಿಗಳು ಆರೋಗ್ಯ ಸಮಸ್ಯೆಗಳನ್ನು ಎದುರಿಸುವ ಸಾಧ್ಯತೆಗಳಿವೆ. ಪರೀಕ್ಷೆಯ ಸಮಯದಲ್ಲಿ ವ್ಯಾಯಾಮ, ಯೋಗ, ಉತ್ತಮ ಆಹಾರ, ಸರಿಯಾದ ನಿದ್ರೆ ಮತ್ತು ಸಮಯ ನಿರ್ವಹಣೆಯಂತಹ ಆರೋಗ್ಯಕರ ಅಭ್ಯಾಸಗಳನ್ನು ಕಾಪಾಡಿಕೊಳ್ಳುವುದು ಒತ್ತಡವನ್ನು ಕಡಿಮೆ ಮಾಡಲು ಮತ್ತು ಮನಸ್ಸಿನ ಶಾಂತಿಯನ್ನು ಉತ್ತೇಜಿಸಲು ಸಹಾಯ ಮಾಡುತ್ತದೆ.


ಪರೀಕ್ಷೆಯ ಒತ್ತಡವನ್ನು ನಿಯಂತ್ರಿಸಲು ಕೆಲವರಿಗೆ ವ್ಯಾಯಾಮ, ಕೆಲವರಿಗೆ ಸಂಗೀತ ಕೇಳುವುದು ಅಥವಾ ಹಾಡುವುದು, ಇನ್ನು ಕೆಲವರಿಗೆ ಚಿತ್ರ ಬಿಡಿಸುವುದು, ಹೀಗೆ ಒಬ್ಬಬ್ಬರಿಗೆ ಒಂದೊಂದು ಚಟುವಟಿಕೆ ಸಮಾಧಾನ ನೀಡುತ್ತದೆ. ಯಾವ ಚಟುವಟಿಕೆ ನಿಮ್ಮ ಮನಸ್ಸಿನ ಒತ್ತಡ ಕಡಿಮೆ ಮಾಡುತ್ತದೆ ಎಂಬುದನ್ನು ತಿಳಿಯಿರಿ. ಪರೀಕ್ಷೆಯ ಸಮಯದಲ್ಲಿ ಒತ್ತಡವುಂಟಾದಾಗ ಕನಿಷ್ಠ 10-15 ನಿಮಿಷ ಆ ಚಟುವಟಿಕೆಯಲ್ಲಿ ನಿಮ್ಮನ್ನ ನೀವು ತೊಡಗಿಸಿಕೊಳ್ಳಿ. ಇದರಿಂದ ನಿಮಗೆ ನೆಮ್ಮದಿಯು ಸಿಗುತ್ತದೆ. ಪರೀಕ್ಷಾ ಸಿದ್ದತೆಗೆ ಏಕಾಗ್ರತೆಯು ಹೆಚ್ಚಾಗುತ್ತದೆ ಎಂದು ಹೇಳಾಲಾಗುತ್ತದೆ.

Related Articles

Leave a Reply

Your email address will not be published. Required fields are marked *

Back to top button
Close

Adblock Detected

Support Free Content We use ads to keep our content free for you. Please allow ads and let sponsors fund your surfing. Thank you!