ನೀವು ದೇಹದ ತೂಕ ಹೆಚ್ಚಿಸಲು ಆರೋಗ್ಯಕರ ಮತ್ತು ಸುಲಭ ಪಾಕ ವಿಧಾನವನ್ನು ಹುಡುಕುತ್ತಿದ್ದರಾ…? ಈ ಓಟ್ಸ್ ಬಾಳೆಹಣ್ಣಿನ ಸ್ಮೂಥಿಯನ್ನು ನೀವೊಮ್ಮೆ ಟ್ರೈ ಮಾಡಲೇಬೇಕು. ಉತ್ತಮ ಆರೋಗ್ಯಕ್ಕಾಗಿ ಆದರ್ಶ ತೂಕವನ್ನು ಕಾಪಾಡಿಕೊಳ್ಳುವುದು ಬಹಳ ಮುಖ್ಯವಾಗಿದೆ. ಕೆಲವು ಜನರು ಆ ಹೆಚ್ಚುವರಿ ತೂಕವನ್ನು ಕಳೆದುಕೊಳ್ಳಲು ಹೆಣಗಾಡಿದರೆ, ಇನ್ನೂ ಕೆಲವರು ತೂಕ ಹೆಚ್ಚಿಸಿಕೊಳ್ಳಲು ಪರದಾಡುತ್ತಾರೆ. ಇನ್ನೂ ಕೆಲವು ಜನರಿಗೆ ದೇಹ ತೂಕವನ್ನು ಹೆಚ್ಚಿಸಿಕೊಳ್ಳುವುದು ಕಠಿಣ ಪ್ರಕ್ರಿಯೆಯಾಗಿರುತ್ತದೆ. ಅವರು ಜೆನೆಟಿಕ್ಸ್ ಅಥವಾ ವೇಗದ ಚಯಾಪಚಯ ಕ್ರಿಯೆಯಂತಹ ಕಾರಣಗಳಿಂದಾಗಿ ಈ ಸಮಸ್ಯೆಯನ್ನು ಎದುರಿಸಬಹುದು. ಅವರಿಗೆ ತಮ್ಮ ದೇಹ ತೂಕ ಹೆಚ್ಚು ಮಾಡುವುದು ಮೊದಲ ಆದ್ಯತೆಯಾಗಿರುತ್ತದೆ. ಹೆಚ್ಚಿನ ಪ್ರಮಾಣದ ಕ್ಯಾಲೋರಿಯನ್ನು ಹೊಂದಿರುವ ಆಹಾರವನ್ನು ಸೇವನೆ ಮಾಡುವ ಮೂಲಕ ತೂಕವನ್ನು ಹೆಚ್ಚಿಸಬಹುದು. ಆದರೆ ತೂಕವನ್ನು ಹೆಚ್ಚಿಸುವ ಸಲುವಾಗಿ ಹೆಚ್ಚಿನ ಕ್ಯಾಲೋರಿ ಹೊಂದಿರುವ ಜಂಕ್ ಫುಡ್ಗಳನ್ನು ಸೇವಿಸುವುದು ಸೂಕ್ತವಲ್ಲ. ಬದಲಿಗೆ ಪೋಷಕಾಂಶಗಳಿಂದ ಸಮೃದ್ಧವಾಗಿರುವ ಆರೋಗ್ಯಕರ ಮತ್ತು ಸಮತೋಲಿನ ಆಹಾರವನ್ನು ಸೇವನೆ ಮಾಡುವುದು ಸೂಕ್ತವಾಗಿರುತ್ತದೆ.
ತೂಕ ಹೆಚ್ಚಿಸಲು ಆರೋಗ್ಯಕರ ತಿಂಡಿ ಮತ್ತು ನಿಯಮಿತ ಊಟವನ್ನು ಸೇವಿಸಬೇಕು ಎಂದು ತಜ್ಞರು ಸಲಹೆ ನೀಡುತ್ತಾರೆ. ಮೂರು ಹೊತ್ತಿನ ಊಟದ ಜೊತೆಗೆ, ಆರೋಗ್ಯಕರ ಸ್ನಾಕ್ಸ್ಗಳನ್ನು ಕೂಡಾ ತಿನ್ನಬೇಕು. ಇದನ್ನು ನೀವು ಮಧ್ಯಂತರದಲ್ಲಿನ ಹಸಿವಿನ ಸಮಯದಲ್ಲಿ ತಿನ್ನುವುದು ಒಳ್ಳೆಯದು. ಇದರಿಂದ ಆಹಾರವು ಜೀರ್ಣವಾಗುತ್ತದೆ ಮತ್ತು ಹೊಟ್ಟೆಯಲ್ಲಿ ಹೆಚ್ಚಿನ ಸ್ಥಳಾವಕಾಶ ಕೂಡಾ ಇರುತ್ತದೆ. ಆದ್ದರಿಂದ ನೀವು ತೂಕ ಹೆಚ್ಚಿಸಲು ಈ ಓಟ್ಸ್ ಹಾಗೂ ಬಾಳೆ ಹಣ್ಣಿನ ಸ್ಮೂದಿಯನ್ನು ಪ್ರಯತ್ನಿಸಿ.
ಓಟ್ಸ್-ಬಾಳೆಹಣ್ಣಿನ ಸ್ಮೂದಿ ತೂಕ ಹೆಚ್ಚಿಸಲು ಹೇಗೆ ಸಹಾಯ ಮಾಡುತ್ತದೆ?
ಹೆಚ್ಚಿನ ಕ್ಯಾಲೋರಿಯನ್ನು ಹೊಂದಿರುವ ಆಹಾರವನ್ನು ತಿನ್ನುವುದು ಮಾತ್ರವಲ್ಲದೆ ಆದರ ಜೊತೆಗೆ ಪೋಷಕಾಂಶಗಳಿಂದ ಸಮೃದ್ಧವಾಗಿರುವ ಆಹಾರವನ್ನು ಸೇವಿಸುವುದು ಮುಖ್ಯವಾಗಿರುತ್ತದೆ. ತೂಕವನ್ನು ಪಡೆಯಲು ಪ್ರಯತ್ನಿಸುತ್ತಿರುವವರಿಗೆ ಅತ್ಯುತ್ತಮವಾದ ಲಘು ಊಟದ ಆಯ್ಕೆಯಾದ ಓಟ್ಸ್-ಬಾಳೆಹಣ್ಣಿನ ಸ್ಮೂದಿ ಉತ್ತಮ ಆಯ್ಕೆಯಾಗಿದೆ. ಆರೋಗ್ಯಕರವಾಗಿ ತೂಕ ಹೆಚ್ಚಿಸಲು ಇದು ನಿಮಗೆ ಸಹಾಯ ಮಾಡುತ್ತದೆ.
ಓಟ್ಸ್-ಬಾಳೆಹಣ್ಣಿನ ಸ್ಮೂದಿ ಮಾಡುವುದು ಹೇಗೆ: ಸ್ಮೂದಿ ತಯಾರಿಸಲು ಬೇಕಾಗುವ ಪದಾರ್ಥಗಳು:
1 ಕಪ್ ಬಿಳಿ ಓಟ್ಸ್, 2 ಬಾಳೆಹಣ್ಣು, 1ಲೀ ಕಪ್ ಹಾಲು, 2 ರಿಂದ 3 ಚಮಚ ಜೇನುತುಪ್ಪ, 2 ಚಮಚ ಕಡಲೆಕಾಯಿ ಬೆಣ್ಣೆ.
ವಿಧಾನ: ಓಟ್ಸ್, ಬಾಳೆಹಣ್ಣು, ಕಡಲೆಕಾಯಿ ಬೆಣ್ಣೆ, ಜೀನುತುಪ್ಪ ಹಾಗೂ ಹಾಲನ್ನು ಒಂದು ಮಿಕ್ಸಿ ಜಾರ್ಗೆ ಹಾಕಿ, ಸ್ಮೂದಿಗೆ ಬೇಕಾದ ಕನ್ಸಿಸ್ಟೆನ್ಸಿ ಬರುವವರೆಗೆ ರುಬ್ಬಿಕೊಂಡರೆ ಆರೋಗ್ಯಕರ ಓಟ್ಸ್ ಬಾಳೆಹಣ್ಣಿನ ಸ್ಮೂದಿ ರೆಡಿ.