ಖ್ಯಾತಿ ನಟಿ ಜಾಕ್ವೆಲಿನ್ ಫರ್ನಾಂಡಿಸ್ ( Jacqueline Fernandez) ಗೆ ಸಣ್ಣ ರಿಲೀಫ್ ಸಿಕ್ಕಿದೆ. 200 ಕೋಟಿ ರೂಪಾಯಿ ವಂಚನೆ ಪ್ರಕರಣದಲ್ಲಿ ಅವರು ಜಾಮೀನು ಪಡೆದುಕೊಂಡಿದ್ದಾರೆ. ದೆಹಲಿಯ ಪಟಿಯಾಲಾ ಕೋರ್ಟ್ ನಲ್ಲಿ ಅವರಿಗೆ ಬೇಲ್ ಸಿಕ್ಕಿದೆ. ವಿಚಾರಣೆ ಮುಗಿಸಿ ಹೊರಬಂದ ಅವರನ್ನು ಅನೇಕರು ಮುತ್ತಿಕೊಂಡಿದ್ದಾರೆ.
ಜಾಕ್ವೆಲಿನ್ ಫರ್ನಾಂಡಿಸ್ ಅವರಿಂದ ಪ್ರತಿಕ್ರಿಯೆ ಪಡೆಯಲು ಮತ್ತು ಅವರ ಫೋಟೋ, ವಿಡಿಯೋಗಳನ್ನು ಚಿತ್ರಿಸಲು ಮಾಧ್ಯಮದ ಕ್ಯಾಮೆರಾಗಳು ಮುಗಿಬಿದ್ದಿವೆ. ಈ ಸಂದರ್ಭದ ವಿಡಿಯೋ ವೈರಲ್ ಆಗಿದೆ. ಸೋಶಿಯಲ್ ಮೀಡಿಯಾದಲ್ಲಿ ಇದನ್ನು ನೋಡಿದ ನೆಟ್ಟಿಗರು ಖಾರವಾಗಿ ಪ್ರತಿಕ್ರಿಯಿಸುತ್ತಿದ್ದಾರೆ. ಇದು ಸರಿಯಾದ ನಡೆ ಅಲ್ಲ ಎಂದು ಛಾಟಿ ಬೀಸುತ್ತಿದ್ದಾರೆ.
ಇದನ್ನೂ ಓದಿ : – ಚಿತ್ರನಟಿ ಮಾಡೆಲ್ ಮೇಲೆ ಲೈಂಗಿಕ ದೌರ್ಜನ್ಯ – ಟ್ಯಾಕ್ಸಿ ಚಾಲಕನ ಜೊತೆ ಕಂಪನಿಯ ಮೇಲೂ ದೂರು ದಾಖಲು