ನಟಿ ಸಮಂತಾ Myositis ಹೆಸರಿನ ಅಪರೂಪದ ಕಾಯಿಲೆಯಿಂದ ಬಳಲುತ್ತಿದ್ದಾರೆ. ಸಮಂತಾ ಆರೋಗ್ಯ ತುಂಬಾನೇ ಹದಗೆಟ್ಟಿತ್ತು. ಈ ಸಮಸ್ಯೆ ಎದುರಾದರೆ ಸ್ನಾಯುಗಳಲ್ಲಿ ಸೆಳೆತ ಶುರುವಾಗುತ್ತದೆ. ಪರಿಸ್ಥಿತಿ ಕೈಮೀರಿದರೆ ನಡೆಯಲೂ ಸಾಧ್ಯವಾಗುವುದಿಲ್ಲ. ಸಮಂತಾ ( SAMANTAH ) ತಿಂಗಳಾನುಗಟ್ಟಲೆ ಚಿಕಿತ್ಸೆ ಪಡೆದು ಚೇತರಿಸಿಕೊಳ್ಳುತ್ತಿದ್ದಾರೆ. ‘ಶಾಕುಂತಲಂ’ ಸಿನಿಮಾದ ಟ್ರೇಲರ್ ಲಾಂಚ್ ವೇಳೆ ಸಮಂತಾ ಪೋಸ್ ನೀಡಿದ್ದಾರೆ. ಅವರಲ್ಲಿ ಮೊದಲಿನ ಚಾರ್ಮ್ ಇಲ್ಲ ಎಂದು ಅನೇಕರು ಅಭಿಪ್ರಾಯಪಟ್ಟಿದ್ದಾರೆ. ಇದಕ್ಕೆ ಸಮಂತಾ ತಿರುಗೇಟು ನೀಡಿದ್ದಾರೆ.
#ShaakuntalamTrailer is here!
▶️ https://t.co/vTNOwgToduThis FEB 17, experience the #EpicLoveStory unfold only in theatres.#Shaakuntalam @Gunasekhar1 @ActorDevMohan #ManiSharma @neelima_guna @GunaaTeamworks @SVC_official @tipsofficial #MythologyforMilennials
— Samantha (@Samanthaprabhu2) January 9, 2023
Myositis ಕಾಯಿಲೆ ಬಂದ ವಿಚಾರವನ್ನು ಸಮಂತಾ ಕಳೆದವರ್ಷ ಅಧಿಕೃತ ಮಾಡಿದರು. ಆ ಬಳಿಕ ಅವರು ಚಿಕಿತ್ಸೆ ಪಡೆಯಲು ವಿದೇಶಕ್ಕೆ ತೆರಳಿದ್ದಾರೆ ಎನ್ನಲಾಗಿದೆ. ಆದರೆ, ಈ ವಿಚಾರವನ್ನು ಅವರು ಅಧಿಕೃತವಾಗಿ ಹೇಳಿಕೊಂಡಿಲ್ಲ. ಸಮಂತಾ ಅವರು ‘ಶಾಕುಂತಲಂ’ ಟ್ರೇಲರ್ ಲಾಂಚ್ ಕಾರ್ಯಕ್ರಮದಲ್ಲಿ ಭಾಗಿ ಆಗಿದ್ದರು. ವೇದಿಕೆ ಮೇಲೆ ಅವರು ಕಣ್ಣೀರು ಹಾಕಿದ್ದಾರೆ.
I pray you never have to go through months of treatment and medication like I did ..
And here’s some love from me to add to your glow 🤍 https://t.co/DmKpRSUc1a— Samantha (@Samanthaprabhu2) January 9, 2023
ಸುದ್ದಿಗೋಷ್ಠಿಯ ಫೋಟೋಗಳನ್ನು ಕೆಲ ಪೇಜ್ಗಳು ಶೇರ್ ಮಾಡಿಕೊಂಡಿವೆ. ‘ಸಮಂತಾ ಮೊದಲಿನ ಚಾರ್ಮ್ ಉಳಿಸಿಕೊಂಡಿಲ್ಲ’ ಎಂದು ಬರೆಯಲಾಗಿತ್ತು. ಈ ಟ್ವೀಟ್ ನ ರೀಟ್ವೀಟ್ ಮಾಡಿರುವ ಸಮಂತಾ, ‘ನಾನು ಚಿಕಿತ್ಸೆ ಪಡೆದುಕೊಂಡಷ್ಟು ಮತ್ತು ಔಷಧಗಳನ್ನು ತೆಗೆದುಕೊಂಡಷ್ಟು ನೀವು ತೆಗೆದುಕೊಳ್ಳದಿರಲಿ ಎಂದು ನಾನು ಪ್ರಾರ್ಥಿಸುತ್ತೇನೆ. ನೀವು ಮತ್ತಷ್ಟು ಚಾರ್ಮ್ ಪಡೆಯಲು ನನ್ನ ಕಡೆಯಿಂದ ಒಂದಷ್ಟು ಪ್ರೀತಿ’ ಎಂದು ಸಮಂತಾ ಬರೆದುಕೊಂಡಿದ್ದಾರೆ.
ಇದನ್ನು ಓದಿ :- ಕೊನೆಗೂ ಸಿಹಿ ಸುದ್ದಿ ಕೊಟ್ಟ ವಿಕ್ಕಿ ಕೌಶಲ್- ಕತ್ರಿನಾ ಕೈಫ್