2 ವರ್ಷಗಳ ಹಿಂದೆ ನಡೆದ ಭೀಕರ ಅಪಘಾತದಲ್ಲಿ ನಟಿ ರಿಷಿಕಾ ಸಿಂಗ್ ( RISHIKA SINGH ) ಬೆನ್ನುಮೂಳೆಗೆ ಬಲವಾಗಿ ಪೆಟ್ಟಾಗಿತ್ತು. ಮಾವಳ್ಳಿಪುರ ಸಮೀಪದಲ್ಲಿ ನಡೆದ ತೀವ್ರ ಅಪಘಾತದಲ್ಲಿ ಅವರ ಕಾರು ನುಜ್ಜುಗುಜ್ಜಾಗಿತ್ತು. ನೀಲಗಿರಿ ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ಎರಡು ಕಾಲುಗಳ ಸ್ವಾಧೀನವನ್ನೂ ಅವರು ಕಳೆದುಕೊಂಡಿದ್ದರು.
ಆನಂತರ ಅವರ ಆರೋಗ್ಯದ ಸ್ಥಿತಿಯ ಬಗ್ಗೆ ಎಲ್ಲವೂ ವರದಿ ಆಗಿರಲಿಲ್ಲ. ಇದೀಗ ಸ್ವತಃ ನಟಿಯೇ ತಮ್ಮ ಆರೋಗ್ಯದ ಬಗ್ಗೆ ಅಭಿಮಾನಿಗಳ ಜೊತೆ ಹಂಚಿಕೊಂಡಿದ್ದಾರೆ. ಬೆನ್ನುಮೂಳೆಗೆ ಬಲವಾಗಿಯೇ ಪೆಟ್ಟುಬಿದ್ದ ಪರಿಣಾಮ ಅವರು ಹಾಸಿಗೆಯಲ್ಲೇ ಹಲವು ತಿಂಗಳ ಕಾಲ ಕಳೆಯಬೇಕಾಗಿತ್ತು. ವೈದ್ಯರ ಸತತ ಪ್ರಯತ್ನ ಮತ್ತು ರಿಷಿಕಾ ಅವರ ಧೈರ್ಯದ ಕಾರಣದಿಂದಾಗಿ ಇದೀಗ ಅವರು ಚೇತರಿಸಿಕೊಳ್ಳುತ್ತಿದ್ದಾರೆ. ವ್ಹೀಲ್ ಚೇರ್ ಸಹಾಯದಿಂದ ಓಡಾಡುತ್ತಿದ್ದ ಅವರು, ಇದೀಗ ಎರಡು ಕೋಲುಗಳ ಆಶ್ರಯ ಪಡೆದುಕೊಂಡು ನಡೆದಾಡುವಂತಹ ಚೇತರಿಕೆಯನ್ನು ಕಂಡಿದ್ದಾರೆ. ಇದನ್ನುಓದಿ :- ಬೆಂಗಳೂರಿನಲ್ಲಿ ಪಾಗಲ್ ಪ್ರೇಮಿಯ ಕಾಟಕ್ಕೆ ವೈದ್ಯೆ ಆತ್ಮಹತ್ಯೆ..!
ಈ ಕುರಿತು ಅವರು ಸೋಷಿಯಲ್ ಮೀಡಿಯಾ ( SOCIAL MEDIA) ದಲ್ಲಿ ಬರೆದುಕೊಂಡಿದ್ದಾರೆ. ಒಂದೂವರೆ ವರ್ಷಗಳ ಹಿಂದೆ ಅಪಘಾತದಲ್ಲಿ ಗಾಯಗೊಂಡಿದ್ದೆ. ದೇವರಿಂದ ನಾನು ಸರಿ ಹೋಗಿದ್ದೇನೆ. ವೈದ್ಯರನ್ನು ನಾರಾಯಣನಿಗೆ ಹೋಲಿಸುತ್ತಾರೆ. ಅವರಿಂದಾಗಿ ನನ್ನ ಬೆನ್ನುಮೂಳೆ ಸರಿ ಹೋಗಿದೆ. ನನ್ನನ್ನು ಐರನ್ ಮಹಿಳೆಯನ್ನಾಗಿಸಿದ ಡಾಕ್ಟರ್ ಗೆ ಧನ್ಯವಾದಗಳು. ನನ್ನ ಕುಟುಂಬ ನನಗೆ ಶಕ್ತಿಯಾಗಿ ಬೆನ್ನು ಹಿಂದೆ ನಿಂತಿತ್ತು. ನಂಬಿಕೆಯೇ ನನ್ನನ್ನು ಸುಧಾರಿಸಿದೆ. ನನ್ನ ಆರೋಗ್ಯಕ್ಕಾಗಿ ಪ್ರಾರ್ಥಿಸಿದ ಎಲ್ಲರಿಗೂ ಧನ್ಯವಾದಗಳು ಎಂದು ಅವರು ಬರೆದುಕೊಂಡಿದ್ದಾರೆ.
ಇದನ್ನುಓದಿ :- ವಿಡಿಯೋ ಕಾಲ್ ಮಾಡಿ ಪತ್ನಿಯನ್ನು ತೋರಿಸಲಿಲ್ಲ ಎಂದು ಸಹೋದ್ಯೋಗಿ ಹೊಟ್ಟೆಗೆ ಇರಿದು ಕೊಲೆ…!