ಪ್ರಶಾಂತ್ ನೀಲ್ ನಿರ್ದೇಶನದ ಕೆಜಿಎಫ್ ಚಾಪ್ಟರ್ 2 ಬಾಕ್ಸ್ ಆಫೀಸ್ನಲ್ಲಿ ತನ್ನ ನಾಗಲೋಟ ಮುಂದುವರೆಸಿದೆ. ಯಶ್ ಅಭಿನಯದ ಚಿತ್ರವು ಏಪ್ರಿಲ್ 14 ರಂದು ಬಿಡುಗಡೆಯಾದಾಗಿನಿಂದ ಹಲವಾರು ದಾಖಲೆಗಳನ್ನು ಮುರಿಯುತ್ತಿದೆ.
ಏಳು ದಿನಗಳಲ್ಲಿ ಚಿತ್ರವು ತನ್ನ ಭಾರೀ ಪ್ರಚಾರದ ಹಿಂದಿನ ಕಾರಣ ಸಾಬೀತುಪಡಿಸಿದೆ. ಚಲನಚಿತ್ರಗಳ ಇತಿಹಾಸದಲ್ಲಿ ಅತಿದೊಡ್ಡ ಓಪನರ್ ಆದ ನಂತರ, ಕೆಜಿಎಫ್ 2 (ಹಿಂದಿ) ಮೊದಲ ವಾರದಲ್ಲೇ ಸುಮಾರು 250.75 ಕೋಟಿ ಗಳಿಸುವ ಮೂಲಕ 250 ಕೋಟಿ ಕ್ಲಬ್ ಸೇರಿದ್ದು ಅಗ್ರಸ್ಥಾನದಲ್ಲಿದೆ. ಇದನ್ನೂ ಓದಿ :- ಕೆಜಿಎಫ್ -2 ನಟಿ ಅರ್ಚನಾ ಜೋಯಿಸ್ ಜೊತೆಗೆ ಸೆಲ್ಪಿಗೆ ಮುಗಿಬಿದ್ದ ಅಭಿಮಾನಿಗಳು
ಬಾಹುಬಲಿ: ದಿ ಕನ್ಕ್ಲೂಷನ್, ದಂಗಲ್, ಸುಲ್ತಾನ್, ಮತ್ತು ಟೈಗರ್ ಜಿಂದಾ ಹೈ ಮುಂತಾದ ಬಾಕ್ಸ್ ಆಫೀಸ್ ಸೂಪರ್ಹಿಟ್ಗಳನ್ನು ಹಿಂದಿಕ್ಕಿ ಹಿಂದಿಯಲ್ಲಿ ಬಾಕ್ಸ್ ಆಫೀಸ್ ಲೂಟಿ ಮಾಡುತ್ತಿದೆ.
ಜಗತ್ತಿನಾದ್ಯಂತ ಕೆಜಿಎಫ್ 2 ಚಿತ್ರ ಮೊದಲ ದಿನ 165.37 ಕೋಟಿ. 2ನೇ ದಿನ – 139.25 ಕೋಟಿ. 3ನೇ ದಿನ 115.08 ಕೋಟಿ. 4ನೇ ದಿನ 132.13 ಕೋಟಿ. 5ನೇ ದಿನ 73.29 ಕೋಟಿ. 6ನೇ ದಿನ 51.68 ಕೋಟಿ. 7ನೇ ದಿನ 43.51 ಕೋಟಿ. ಒಟ್ಟಾರೆ 720.31 ಕೋಟಿ ಗಳಿಸಿದೆ.
ಇದನ್ನೂ ಓದಿ :- ‘ದಂಗಲ್’, ‘ಬಾಹುಬಲಿ 2’ ದಾಖಲೆಯನ್ನು ಧೂಳಿಪಟ ಮಾಡಿದ KGF 2