ಬಾಕ್ಸ್ ಆಫೀಸ್‌ನಲ್ಲಿ ‘ಕೆಜಿಎಫ್ ಚಾಪ್ಟರ್ 2’ ಅಬ್ಬರ ಮುಂದುವರಿದಿದೆ. ಬಾಲಿವುಡ್ ಅಂಗಳದಲ್ಲಿ ‘ಕೆಜಿಎಫ್ ಚಾಪ್ಟರ್ 2’ ಕಡೆಯಿಂದ ಹೊಸ ಇತಿಹಾಸವೇ ಸೃಷ್ಟಿಯಾಗಿದೆ. ಬಾಲಿವುಡ್ ಸಿನಿಮಾಗಳು ಮಾಡಿದ್ದ ದೊಡ್ಡ ದಾಖಲೆಗಳನ್ನು ರಾಕಿ ಭಾಯ್ ಅಳಿಸಿ ಹಾಕುತ್ತಿದ್ದಾನೆ.
ಹಿಂದಿ ಚಿತ್ರರಂಗದಲ್ಲಿ ಮೊದಲ ದಿನ ಅತೀ ಹೆಚ್ಚು ಕಲೆಕ್ಷನ್ ಮಾಡಿದ ಸಿನಿಮಾ ಎಂಬ ಖ್ಯಾತಿ ಕೆಜಿಎಫ್ 2 ಸಿನಿಮಾಕ್ಕಿದೆ. ಈ ಸಿನಿಮಾದ ಹಿಂದಿ ವರ್ಷನ್‌ನಿಂದ ಮೊದಲ ದಿನವೇ 53.95 ಕೋಟಿ ರೂ. ಗಳಿಕೆ ಆಗಿರುವುದು ಅತೀ ದೊಡ್ಡ ದಾಖಲೆ ಆಗಿದೆ.
ದಾಖಲೆಗಳ ಮೇಲೆ ದಾಖಲೆಗಳನ್ನು ಸೃಷ್ಟಿ ಮಾಡುತ್ತಿರುವ ‘ಕೆಜಿಎಫ್ ಚಾಪ್ಟರ್ 2’ ಸಿನಿಮಾವು ಈಗ ಏಳೇ ದಿನಕ್ಕೆ ಮತ್ತೊಂದು ಅದ್ವಿತೀಯ ದಾಖಲೆಯನ್ನು ಬರೆದಿದೆ. ಒಂದು ಸಿನಿಮಾ 100, 200, 250, 300 ಕೋಟಿ ಕ್ಲಬ್‌ಗೆ ಸೇರುವುದು ಒಂದು ಮೈಲಿಗಲ್ಲು. ಇದನ್ನೂ ಓದಿ :- ಕೆಜಿಎಫ್ -2 ನಟಿ ಅರ್ಚನಾ ಜೋಯಿಸ್ ಜೊತೆಗೆ ಸೆಲ್ಪಿಗೆ ಮುಗಿಬಿದ್ದ ಅಭಿಮಾನಿಗಳು
ಅದೇ ರೀತಿ ‘ಕೆಜಿಎಫ್ 2’ ಹಿಂದಿ ವರ್ಷನ್ 250 ಕೋಟಿ ಕ್ಲಬ್‌ಗೆ ಎಂಟ್ರಿ ಪಡೆದು, ತನ್ನ ನಾಗಾಲೋಟವನ್ನು ಮುಂದುವರಿಸಿದೆ. ಹೀಗೆ ಅತ್ಯಂತ ವೇಗವಾಗಿ 250 ಕೋಟಿ ಕ್ಲಬ್‌ಗೆ ಎಂಟ್ರಿ ಪಡೆದ ಸಿನಿಮಾವಾಗಿ ‘ಕೆಜಿಎಫ್ 2’ ಹೊರಹೊಮ್ಮಿದೆ. ಈ ಸಾಧನೆ ಮಾಡಲು ‘ಕೆಜಿಎಫ್ 2’ ಏಳು ದಿನಗಳನ್ನು ತೆಗೆದುಕೊಂಡಿದೆ. ಈ ಹಿಂದೆ ತೆರೆಕಂಡಿದ್ದ ‘ಬಾಹುಬಲಿ 2’ ಈ ಸಾಧನೆಯನ್ನು 8 ದಿನಗಳಲ್ಲಿ ಮಾಡಿತ್ತು. ಅದೇ ಈವರೆಗಿನ ದಾಖಲೆ ಆಗಿತ್ತು. ಹಾಗೆಯೇ, 250 ಕ್ಲಬ್ ಸೇರಲು ಹಿಂದಿಯ ‘ದಂಗಲ್’, ‘ಸಂಜು’, ‘ಟೈಗರ್ ಜಂದಾ ಹೈ’ ಸಿನಿಮಾಗಳು 10 ದಿನ ತೆಗೆದುಕೊಂಡಿದ್ದವು. ಕನ್ನಡದ ಸಿನಿಮಾವೊಂದು ದಾಖಲೆ ಸೃಷ್ಟಿಸಿರುವುದು ಕನ್ನಡಿಗರಿಗೆ ಹೆಮ್ಮೆ ಎನಿಸಿದೆ.
ಇದನ್ನೂ ಓದಿ :- ‘ಕೆಜಿಎಫ್–2’ – ಚೇರ್ ನಿಂದ ಶುರವಾದ ಜಗಳ ಗುಂಡೇಟಿನಲ್ಲಿ ಅಂತ್ಯ