ಮಗುವಿಗೆ ಮುದ್ದಾದ ಹೆಸರಿಟ್ಟ ಪ್ರಣಿತಾ ಸುಭಾಷ್

ಸ್ಯಾಂಡಲ್ ವುಡ್ ( sandelwood )ಬ್ಯೂಟಿ ಪ್ರಣಿತಾ ಸುಭಾಷ್ ( Pranita Subhash ) ಇತ್ತೀಚೆಗಷ್ಟೇ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ಸದ್ಯ ತಮ್ಮ ಮುದ್ದು ಮಗಳ ಆರೈಕೆಯಲ್ಲಿ ಪ್ರಣಿತಾ ಬ್ಯುಸಿಯಾಗಿದ್ದಾರೆ.

ಮಗುವಿನ ಫೋಟೋ ಶೂಟ್ ಮಾಡಿಸಿ, ಅಭಿಮಾನಿಗಳಿಗೆ ಪರಿಚಯಿಸಿದ್ದಾರೆ. ಈ ಫೋಟೋ ಸಖತ್ ವೈರಲ್ ಆಗಿದೆ. ಸಾಲು ಸಾಲು ಸಿನಿಮಾಗಳ ಮೂಲಕ ಮೋಡಿ ಮಾಡಿದ್ದ ಬಹುಭಾಷಾ ನಟಿ ಪ್ರಣಿತಾ ಮಗಳ ಆರೈಕೆಯಲ್ಲಿ ಖುಷಿ ಕಾಣ್ತಿದ್ದಾರೆ. ಇದನ್ನು ಓದಿ : – ಕಿರುತೆರೆ ಸ್ಟಾರ್ ನಟ ಚಂದನ್ ಕುಮಾರ್ ಗೆ ತೆಲುಗು ಶೂಟಿಂಗ್ ಶೆಟ್ ನಲ್ಲಿ ಕಪಾಳಮೋಕ್ಷ ..!

ಈಗ ಮಗಳ ಫೋಟೋ ಶೂಟ್ ಜೊತೆ ಹೆಸರನ್ನು ಕೂಡ ಸೋಷಿಯಲ್ ಮೀಡಿಯಾದಲ್ಲಿ ರಿವೀಲ್ ಮಾಡಿದ್ದಾರೆ. ಪ್ರಣಿತಾ ದಂಪತಿ ತಮ್ಮ ಮುದ್ದು ಮಗಳಿಗೆ ʻಅರ್ನಾʼ ಅಂತಾ ಹೆಸರಿಟ್ಟಿದ್ದಾರೆ. ಜೊತೆಗೆ ಮಗುವಿನ ಚೆಂದದ ಫೋಟೋ ಶೂಟ್ ಕೂಡ ಶೇರ್ ಮಾಡಿದ್ದಾರೆ. ಈ ಫೋಟೋ ಇದೀಗ ನೆಟ್ಟಿಗರ ಗಮನ ಸೆಳೆಯುತ್ತಿದೆ. ಫೋಟೋ ನೋಡಿ ಫ್ಯಾನ್ಸ್ ಫಿದಾ ಆಗಿದ್ದಾರೆ.

ಇದನ್ನು ಓದಿ : – ಮುದ್ದು ಮಗನನ್ನ ಪರಿಚಯಿಸಿದ ಸಂಜನಾ ಗಲ್ರಾನಿ

Related Articles

Leave a Reply

Your email address will not be published. Required fields are marked *

Back to top button
Close

Adblock Detected

Support Free Content We use ads to keep our content free for you. Please allow ads and let sponsors fund your surfing. Thank you!