ಸ್ಯಾಂಡಲ್ ವುಡ್ ( sandelwood ) ನಟಿ ಅಮೂಲ್ಯ ( amulya ) ಗೆ ಅಭಿಮಾನಿ ಬಳಗ ದೊಡ್ಡದಿದೆ. ಇತ್ತೀಚೆಗೆ ಅವರು ಚಿತ್ರರಂಗದಲ್ಲಿ ಆ್ಯಕ್ಟೀವ್ ಆಗಿಲ್ಲ. ಕುಟುಂಬಕ್ಕೆ ಹೆಚ್ಚು ಆದ್ಯತೆ ನೀಡುತ್ತಿದ್ದಾರೆ. ಇತ್ತೀಚೆಗೆ ಅವಳಿ ಮಕ್ಕಳಿಗೆ ಜನ್ಮ ನೀಡಿದ್ದರು. ಇದರಿಂದ ಅಮೂಲ್ಯ ಕುಟುಂಬದಲ್ಲಿ ಖುಷಿ ಹೆಚ್ಚಾಗಿದೆ.
ಅಮೂಲ್ಯ ಕೃಷ್ಣ ಜನ್ಮಾಷ್ಟಮಿ ಸಂದರ್ಭದಲ್ಲಿ ಮಕ್ಕಳ ಮುಖ ರಿವೀಲ್ ಮಾಡಿದ್ದರು. ಈಗ ಗಣೇಶ ಹಬ್ಬದ ಸಂದರ್ಭದಲ್ಲಿ ಮಕ್ಕಳ ಹೊಸ ಫೋಟೋ ಹಂಚಿಕೊಂಡಿದ್ದಾರೆ. ಅಮೂಲ್ಯ ಮಕ್ಕಳು ಮಲಗಿದ್ದಾರೆ. ಅವರ ಸುತ್ತಲೂ ಪುಸ್ತಕ, ಅ,ಆ,ಇ,ಈ ಹಾಗೂ ಎ,ಬಿ,ಸಿ,ಡಿ ಎಂದು ಬರೆದ ಚಿಕ್ಕ ಚಿಕ್ಕ ಬೋರ್ಡ್ ಇದೆ. ಈ ಫೋಟೋ ಫ್ಯಾನ್ಸ್ ಗೆ ಇಷ್ಟ ಆಗಿದೆ.
ಇದನ್ನೂ ಓದಿ :- ಅವಳಿ ಮುದ್ದು ಮಕ್ಕಳ ಫೋಟೋ ರಿವೀಲ್ ಮಾಡಿದ ನಟಿ ಅಮೂಲ್ಯ