HealthNational & International News

ವೈದ್ಯಕೀಯ ಜಗತ್ತನ್ನೇ ಬೆಚ್ಚಿ ಬೀಳಿಸಿದೆ ವ್ಯಕ್ತಿಯ ಉಬ್ಬಿದ ಹೊಟ್ಟೆ…!

ವೈದ್ಯಕೀಯ ಜಗತ್ತಿಗೆ ಬೆಚ್ಚಿ ಬೀಳಿಸುವಂತಹ ಒಂದು ಅಚ್ಚರಿಯ ಘಟನೆಯಾಗಿದೆ ನಾಗಪುರದಲ್ಲಿ.

ನಾಗಪುರ :30 ವರ್ಷಗಳಿಂದ ಉಬ್ಬಿದೆ ಆ ವ್ಯಕ್ತಿಯ ಹೊಟ್ಟ. ಅಷ್ಟಕ್ಕೂ ಆ ವ್ಯಕ್ತಿಯ ಉಬ್ಬಿದ ಹೊಟ್ಟೆಯಲ್ಲಿ ಏನಿತ್ತು ಎಂಬುದೇ ಜನರನ್ನ ಅನುಮಾನಕ್ಕೆ ಗುರಿ ಮಾಡಿದೆ. ಆ ವ್ಯಕ್ತಿಯ ಹೊಟ್ಟೆಯನ್ನು ಪರಿಶೀಲಿಸಿದ ವೈದ್ಯರು ಬೆಚ್ಚಿ ಬೆರಗಾಗಿದ್ದಾರೆ.

ಹೌದು, ಆ ವ್ಯಕ್ತಿಯ ಉಬ್ಬಿದ ಹೊಟ್ಟೆಯಲ್ಲಿ ಮೃತ ಪಟ್ಟಂತಹ ಅವಳಿ ಭ್ರೂಣಗಳು ಪತ್ತೆಯಾಗಿದ್ದು, ಅವು ಗರ್ಭಾವಸ್ಥೆಯ ಸಂದರ್ಭದಲ್ಲಿ ಮೃತ ಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ. ಅಚ್ಚರಿಯನ್ನುಟ್ಟಿಸಿದ ದೈಹಿಕ ಸ್ಥಿತಿಗೆ ಕಾರಣವೆಂದರೆ ‘ಫೀಟಸ್ ಇನ್ ಫೆಟು’ ಎಂದು ತಿಳಿಸಿದ್ದಾರೆ. ಆದರೆ ಈ ವ್ಯಕ್ತಿಗೆ 1999ರ ವರ್ಷದಲ್ಲೇ ಹೊಟ್ಟೆಯ ಉಬ್ಬರ ಕಾಣಿಸಿಕೊಣಿಸಿಕೊಂಡಿದ್ದು, ಆತನ ಉಸಿರಾಟಕ್ಕೆ ಕಷ್ಟವೆನಿಸಿದಾಗ ಆತನನ್ನು ಮುಂಬೈಯಲ್ಲಿಯ ಒಂದು ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಆ ವ್ಯಕ್ತಿಯ ಆರೋಗ್ಯವನ್ನು ಪರೀಶಿಲಿಸಿದ ಬಳಿಕ ಹೊಟ್ಟೆಯಲ್ಲಿ ಗಡ್ಡೆ ಬೆಳೆದಿರಬಹುದೆಂದು ಹೇಳಿದ್ದರು. ಆದರೆ ಶಸ್ತ್ರ ಚಿಕಿತ್ಸೆಯನ್ನು ಆರಭಿಸಿದ ವೈದ್ಯರಿಗೆ ಕಾದಿತ್ತು ಅಚ್ಚರಿ. ಆಗ ವೈದ್ಯರಿಗೆ ತಿಳಿದದ್ದು ಆ ವ್ಯಕ್ತಿಯ ಹೊಟ್ಟೆಯಲ್ಲಿ ಇದ್ದಿದ್ದು ಗಡ್ಡೆಯಲ್ಲ ಅವಳಿ ಭ್ರೂಣಗಳೆಂದು. ನಂತರ ವೈದ್ಯರು ಶಸ್ತ್ರ ಚಿಕಿತ್ಸೆ ಮಾಡಿ ಅದನ್ನು ಹೊರ ತೆಗೆದರು. ಆ ಭ್ರೂಣದಲ್ಲಿ ಕೂದಲಿನ ಭಾಗಗಳು, ದವಡೆಗಳು, ಜನಾಂಗದ ಭಾಗಗಳು. ಕೈಕಾಲುಗಳು ಇದ್ದವು ಎಂದು ವೈದ್ಯರೇ ತಿಳಿಸಿದ್ದಾರೆ.

ಶಸ್ತ್ರ ಚಿಕಿತ್ಸೆ ನಂತರ ವೈದ್ಯರು ತಿಳಿಸಿದ್ದೇನೆಂದರೆ, ಇದೊಂದು ಅಚ್ಚರಿಯಾದಂತಹ ಸಂಗತಿಯಾಗಿದೆ. ವ್ಯಕ್ತಿಯ ಹೊಟ್ಟೆಯಲ್ಲಿ ಅವಳಿ ಭ್ರೂಣವಿರುವುದು ಇಡೀ ವೈದ್ಯ ಲೋಕಕ್ಕೆ ಒಂದು ಆಶ್ಚರ್ಯಕರವಾದಂತಹ ಸುದ್ದಿ ಎಂದು ತಿಳಿಸಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button
Close

Adblock Detected

Support Free Content We use ads to keep our content free for you. Please allow ads and let sponsors fund your surfing. Thank you!