ಉತ್ತರ ಪ್ರದೇಶದ ಅಯೋಧ್ಯಾದಲ್ಲಿನ ರಾಮ ಮಂದಿರದಲ್ಲಿ ಶ್ರೀರಾಮನ ವಿಗ್ರಹ ತಯಾರಿಸಲು ಅಪರೂಪದ ಎರಡು ಸಾಲಿಗ್ರಾಮ ಶಿಲೆಗಳನ್ನು ನೇಪಾಳದಿಂದ ತರಿಸಲಾಗಿದೆ. ನೇಪಾಳದಿಂದ ಹೊರಟ ಶಿಲೆಗಳು ಗುರುವಾರ ಅಯೋಧ್ಯಾ (AYODHYA) ತಲುಪಿವೆ. ಸಾಲಿಗ್ರಾಮಗಳು ಬುಧವಾರ ಗೋರಖ್ಪುರ ತಲುಪಿದ್ದು, ಅಲ್ಲಿ ಪೂಜೆ ಸಲ್ಲಿಸಲು ಭಕ್ತರಿಗೆ ಅವಕಾಶ ನೀಡಲಾಗಿತ್ತು.
Uttar Pradesh | Shaligram stones brought from Nepal reached Ayodhya.
They are expected to be used for the construction of idols of Ram and Janaki. pic.twitter.com/76L3IzNdAF
— ANI (@ANI) February 2, 2023
ಈ ಪವಿತ್ರ ಶಿಲೆಗಳಿಗೆ ಶ್ರೀರಾಮ ಜನ್ಮಭೂಮಿಯಲ್ಲಿನ ಅರ್ಚಕರು ಮತ್ತು ಸ್ಥಳೀಯರು ಭವ್ಯ ಸ್ವಾಗತ ನೀಡಿದರು. ಶಿಲಾ ಬಂಡೆಗಳಿಗೆ ಹೂವಿನ ಹಾರ ಹಾಕಿ ನಮಿಸಿದ ಜನರು, ಅದನ್ನು ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ಗೆ ಹಸ್ತಾಂತರಿಸುವುದಕ್ಕೂ ಮುನ್ನ ಧಾರ್ಮಿಕ ವಿಧಿ ವಿಧಾನಗಳನ್ನು ನಡೆಸಿದರು.
ಈ ಸಾಲಿಗ್ರಾಮ ಶಿಲೆಗಳನ್ನು ಶ್ರೀರಾಮ ಮತ್ತು ಸೀತಾ ಮಾತೆಯ ವಿಗ್ರಹಗಳನ್ನು ಕೆತ್ತಲು ಬಳಸಲಾಗುತ್ತದೆ ಎನ್ನಲಾಗಿದೆ.
ಇದನ್ನೂ ಓದಿ – ಅಯೋಧ್ಯೆಯಲ್ಲಿ ರಾಮಮಂದಿರಕ್ಕೆ ರಾಜ್ಯದ ಭಕ್ತರಿಂದ ಸ್ವರ್ಣ ಶಿಖರ