ಛತ್ತೀಸ್ಗಢ: ಛತ್ತೀಸ್ಗಢದ ಕಂಕೇರ್ನಲ್ಲಿ ಇಂದು ಸಂಭವಿಸಿದ ಐಇಡಿ ಸ್ಫೋಟದಲ್ಲಿ ಬಿಎಸ್ಎಫ್ ಕಾನ್ಸ್ಟೇಬಲ್ ಮತ್ತು ಇಬ್ಬರು ಮತದಾನ ತಂಡದ ಸದಸ್ಯರು ಗಾಯಗೊಂಡಿದ್ದಾರೆ.
ಬಿಎಸ್ಎಫ್ ಮತ್ತು ಜಿಲ್ಲಾ ಪಡೆಯ ಜಂಟಿ ತಂಡವು ಕ್ಯಾಂಪ್ ಮಾರ್ಬೆಡಾದಿಂದ ರೆಂಗಘಾಟಿ ರೆಂಗಗೊಂದಿ ಮತಗಟ್ಟೆಗೆ ನಾಲ್ಕು ಮತದಾನ ತಂಡಗಳೊಂದಿಗೆ ಕಂಕೇರ್ ಜಿಲ್ಲೆಯ ಛೋಟೆಬೆಟಿಯಾ ಪೊಲೀಸ್ ಠಾಣೆಯಿಂದ ತೆರಳುತ್ತಿದ್ದರು ಈ ವೇಳೆ ಐಇಡಿ ಸ್ಫೋಟಗೊಂಡಿದೆ. ಸ್ಫೋಟದಲ್ಲಿ ಬಿಎಸ್ಎಫ್ ಕಾನ್ಸ್ಟೇಬಲ್ ಮತ್ತು ಇಬ್ಬರು ಮತದಾನ ತಂಡದ ಸದಸ್ಯರು ಗಾಯಗೊಂಡಿದ್ದಾರೆ. ಗಾಯಗೊಂಡವರು ಚಿಕಿತ್ಸೆ ಪಡೆಯುತ್ತಿದ್ದು, ಅವರ ಸ್ಥಿತಿ ಸಾಮಾನ್ಯವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.