CinemaNational & International News

ಶೋಯೆಬ್ ಮಲಿಕ್​ ಮೂರನೇ ಮಡದಿ ಸನಾ ಜಾವೇದ್ ಯಾರು ಗೊತ್ತಾ?

ಇಸ್ಲಾಮಾಬಾದ್ : ಪಾಕ್‌ ನಟಿ ಸನಾ ಜಾವೇದ್‌ ಅವರನ್ನ ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಶೋಯೆಬ್‌ ಮಲಿಕ್‌, ವಿವಾಹವಾಗಿದ್ದಾರೆ. ಈ ಕುರಿತ ಫೋಟೋಗಳನ್ನು ಸ್ವತಃ ಶೋಯೆಬ್‌ ತನ್ನ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಈವರಿಬ್ಬರ ಫೋಟೋಗಳು ಸೋಶಿಯಲ್‌ ಮೀಡಿಯಾದಲ್ಲಿ ಸದ್ದು ಮಾಡುತ್ತಿದ್ದಂತೆ ಪಾಕ್‌ ನಟಿ ಸನಾ ಜಾವೇದ್‌ ಯಾರು ಎಂಬ ಚರ್ಚೆ ಹುಟ್ಟಿಕೊಂಡಿದೆ.

ಸನಾ ಜಾವೇದ್‌ ಬಗ್ಗೆ ನಿಮಗೆ ಗೊತ್ತಾ?

ಸನಾ ಜಾವೇದ್‌ 1993ರ ಮಾರ್ಚ್‌ 25ರಂದು ಸೌದಿ ಅರೇಬಿಯಾದ ಜೆಡ್ಡಾದಲ್ಲಿ ಜನಿಸಿದರು. 2012ರಲ್ಲಿ ತೆರೆಕಂಡಿದ್ದ ʻಶೆಹರ್-ಎ-ಝಾತ್ʼ ಹಾಸ್ಯ ಟಿವಿ ಕಾರ್ಯಕ್ರಮದ ಮೂಲಕ ಬಣ್ಣದ ಲೋಕಕ್ಕೆ ಪದಾರ್ಪಣೆ ಮಾಡಿದರು. ನಂತರದಲ್ಲಿ “ಖಾನಿ” ರೊಮ್ಯಾಂಟಿಕ್‌ ವೆಬ್‌ಸಿರೀಸ್‌ನಲ್ಲಿ ಕಾಣಿಸಿಕೊಂಡರು.

ಈ ಬೆನ್ನಲ್ಲೇ ರುಸ್ವಾಯಿ, ಡಂಕ್‌ನಂತಹ ಸೀರಿಯಲ್‌ಗಳಲ್ಲೂ ಗುರುತಿಸಿಕೊಂಡು ಫೇಮಸ್‌ ಆದ್ರು. “ಖಾನಿ” ಸೀರಿಯಲ್‌ನಲ್ಲಿ ತೋರಿದ ಉತ್ತಮ ಅಭಿನಯಕ್ಕಾಗಿ ʻಲಕ್ಸ್ ಸ್ಟೈಲ್ ಅವಾರ್ಡ್ಸ್ʼಪ್ರಶಸ್ತಿ ಪಡೆಯುವಲ್ಲಿಯೂ ಸನಾ ಜಾವೇದ್‌ ಯಶಸ್ವಿಯಾದರು.

ನಟಿಯಾಗಿದ್ದ ಜಾವೇದ್‌ 2020ರಲ್ಲಿ ಗೀತರಚನಕಾರ ಹಾಗೂ ಸಂಗೀತ ನಿರ್ಮಾಪಕರೂ ಆಗಿದ್ದ ಉಮರ್ ಜಸ್ವಾಲ್ ಅವರೊಂದಿಗೆ 2020ರಲ್ಲಿ ವಿವಾಹವಾಗಿದ್ದರು. ಆದ್ರೆ 2023ರಲ್ಲಿ ಅವರಿಂದ ವಿಚ್ಛೇದನ ಪಡೆದರು. ವಿಚ್ಛೇದನ ಪಡೆದ ಬಳಿಕ ಸನಾ ಹಾಗೂ ಉಮರ್‌ ಇಬ್ಬರು ತಮ್ಮ ಸೋಶಿಯಲ್‌ ಮೀಡಿಯಾಗಳಲ್ಲಿ ಹಂಚಿಕೊಂಡಿದ್ದ ಇಬ್ಬರಿಗೂ ಸಂಬಂಧಿಸಿದ ಎಲ್ಲ ಚಿತ್ರಗಳನ್ನ ಡಿಲೀಟ್‌ ಮಾಡಿದರು.

ಸನಾ ವಿಚ್ಛೇದನ ಪಡೆದ ಬಳಿಕ 2023ರಲ್ಲಿ ಶೋಯೆಬ್‌ ಮಲಿಕ್‌ ಜೊತೆಗೆ ಡೇಟಿಂಗ್‌ ಮಾಡುತ್ತಿದ್ದಾರೆ ಎಂಬ ವದಂತಿ ಹುಟ್ಟಿಕೊಂಡಿತ್ತು. ಇದೀಗ ವದಂತಿಗಳಿಗೆಲ್ಲಾ ತೆರೆ ಎಳೆದಿದ್ದಾರೆ. ಶೋಯೆಬ್‌ ಮಲಿಕ್‌ ಅವರನ್ನು ಮದುವೆಯಾದ ನಂತರ ಸನಾ ಜೇವದ್‌ ತಮ್ಮ ಇನ್‌ಸ್ಟಾಗ್ರಾಮ್‌ ಖಾತೆಯನ್ನ ಸನಾ ಶೋಯೆಬ್‌ ಮಲಿಕ್‌ ಎಂದೂ ಬದಲಾಯಿಸಿಕೊಂಡಿರುವುದಾಗಿ ಮೂಲಗಳು ತಿಳಿಸಿವೆ.

Related Articles

Leave a Reply

Your email address will not be published. Required fields are marked *

Back to top button
Close

Adblock Detected

Support Free Content We use ads to keep our content free for you. Please allow ads and let sponsors fund your surfing. Thank you!