ನವದೆಹಲಿ: ಒಡಿಶಾದ ಜೈಪುರ ಜಿಲ್ಲೆಯಲ್ಲಿ ಅಡುಗೆ ಅನಿಲ ಸಿಲಿಂಡರ್ ಸೋರಿಕೆಯಾಗಿ ಬೆಂಕಿ ಕಾಣಿಸಿಕೊಂಡ ಪರಿಣಾಮ ಇಬ್ಬರು ಮಹಿಳೆಯರು ಸೇರಿದಂತೆ ಐವರಿಗೆ ಗಾಯವಾಗಿರುವ ಘಟನೆ ನಡೆದಿದೆ.
ಜಿಲ್ಲೆಯ ಬಡಬಿರುಹಾನ್ ಗ್ರಾಮದಲ್ಲಿ ಸೋಮವಾರ ಈ ಘಟನೆ ನಡೆದಿದೆ. ತೀವ್ರ ಗಾಯಗಳಾಗಿರುವ ಇಬ್ಬರು ಮಹಿಳೆಯರನ್ನು ಜೈಪುರದದ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ನಂತರ ಅಲ್ಲಿಂದ ಎಸ್ಸಿಬಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ.
ಸ್ಥಳೀಯರ ಪ್ರಕಾರ, ಬಡಬಿರುಹಾನ್ ಗ್ರಾಮದ ಕಮಲಾಕಾಂತ ಸ್ವೈನ್ ಎಂಬವರು ಸೋಮವಾರ ಮಧ್ಯಾಹ್ನ ಹೊಸದಾಗಿ ವಿತರಿಸಿದ ಸಿಲಿಂಡರ್ ರೆಗ್ಯುಲೇಟರ್ ಅಳವಡಿಸುತ್ತಿದ್ದಾಗ, ಅದು ಸೋರಿಕೆಯಾಗಲು ಪ್ರಾರಂಭಿಸಿತು. ನಂತರ ಅದು ಬೆಂಕಿ ಕಾಣಿಸಿಕೊಂಡಿದೆ.
ಘಟನೆಯಲ್ಲಿ ಕಮಲಾಕಾಂತ, ಅವರ ಪತ್ನಿ ಸರಿತಾ, ಸೊಸೆ ಮಧುಸ್ಮಿತಾ ಅವರಿಗೆ ಗಾಯಗಳಾಗಿವೆ. ಇವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.