ಅನ್ಯ ಪಕ್ಷಗಳಿಂದ ನಾಯಕರನ್ನ ಸೆಳಿಯುತ್ತಿರುವ ಕಾಂಗ್ರೆಸ್ ಇಂದು ಚಿಂತಾಮಣಿ, ಶಿಗ್ಗಾಂವಿ, ಕೆಆರ್ ಪೇಟೆ ಜೆಡಿಎಸ್ ಹಾಗೂ ಬಿಜೆಪಿ ನಾಯಕರನ್ನ ಸೇರ್ಪಡೆ ಮಾಡಿಕೊಂಡರು.ನಗರದ ಕೆಪಿಸಿಸಿ ಕಚೇರಿಯಲ್ಲಿ ಆಯೋಜಿಸಿರುವ ಸೇರ್ಪಡೆ ಕಾರ್ಯಕ್ರಮದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿಕೆಶಿವಕುಮಾರ್, ವಿಪಕ್ಷನಾಯಕ ಸಿದ್ದರಾಮಯ್ಯ ನೇತೃತ್ವದಲ್ಲಿ ಕಾಂಗ್ರೆಸ್ ಗೆ ಅನೇಕ ನಾಯಕರನ್ನ ಪಕ್ಷದ ಭಾವುಟ ನೀಡುವುದರ ಮೂಲಕ ಕಾಂಗ್ರೆಸ್ ಗೆ ಬರಮಾಡಿಕೊಂಡರು. ಶಿಗ್ಗಾವಿಯ ಮಾಜಿ ಸಂಸದ ಮಂಜುನಾಥ್ ಕುನ್ನೂರು,ಕೆ.ಆರ್.ಪೇಟೆಯ ಬಿ.ಎಲ್ ದೇವರಾಜು,ಎಂ.ಸಿ.ಸುಧಾಕರ್ ಇಂದು ಕೈ ಪಡೆ ಸೇರಿಕೊಂಡರು.
ಈ ಕುರಿತು ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿಕೆಶಿವಕುಮಾರ್ ಮಂಜುನಾಥ್ ಕುನ್ನೂರು ಶಾಸಕರಾಗಿದ್ದವರು. ಸಂಸದರಾಗಿಯೂ ಕೆಲಸ ಮಾಡಿದ್ದವರು. ಖರ್ಗೆಯವರ ಜೊತೆ ಮಾತುಕತೆ ನಡೆಸಿದ್ದರು. ಇದೀಗ ಅವರು, ಅವರ ಪುತ್ರ ಕಾಂಗ್ರೆಸ್ ಸೇರಿದ್ದಾರೆ. ಇವರಿಂದ ಶಿಗ್ಗಾಂವಿಯಲ್ಲಿ ನಮಗೆ ಬಲ ಬಂದಿದೆ. ಮುಖ್ಯಮಂತ್ರಿಗಳ ಕ್ಷೇತ್ರದ ನಾಯಕರೇ ಸೇರ್ತಿದ್ದಾರೆ.
ಇವರನ್ನ ಸಿಎಂ ವಿಶ್ವಾಸಕ್ಕೆ ತೆಗೆದುಕೊಳ್ಳಲಿಲ್ಲ. ಇದು ಇವತ್ತಿನ ಸೇರ್ಪಡೆಯೇ ಸಾಕ್ಷಿ. ಮಂಜುನಾಥ್ ಕುನ್ನೂರು,ರಾಜು ಕುನ್ನೂರು ಸೇರ್ಪಡೆ ಇದು ನಮಗೆ ಮತ್ತಷ್ಟು ಬಲವನ್ನ ತಂದಿದೆ. ಅವರ ಜೊತೆ ನೂರಾರು ಬಿಜೆಪಿ ಕಾರ್ಯಕರ್ತರು ಸೇರ್ಪಡೆ ಆಗಿದ್ದಾರೆ. ಇನ್ನೂ ಇವತ್ತು ಜೆಡಿಎಸ್ ಬಿಜೆಪಿಯಿಂದ ನಾಯಕರು ಕಾರ್ಯಕರ್ತರು ಕಾಂಗ್ರೆಸ್ ಸೇರಿದ್ದಾರೆ. ಇದರಿಂದ ಕಾಂಗ್ರೆಸ್ ರಾಜ್ಯದಲ್ಲಿ ಯಾವ ತೀತಿ ಮುನ್ನುಗ್ಗುತ್ತಿದೆ ಎಂಬುವುದು ಗೊತ್ತಾಗುತ್ತಿದೆ ಎಂದು ಹೇಳಿದರು.