ಲಕ್ಷ್ಮಿ ಹೆಬ್ಬಾಳ್ಕರ್ (LAKSHMI HEBALKHAR) ವಿರುದ್ಧದ ಆರೋಪಕ್ಕೆ ಎಂಎಲ್ಸಿ ಚನ್ನರಾಜ ಹಟ್ಟಿಹೊಳಿ ಸುದ್ದಿಗೋಷ್ಠಿ ನಡೆಸಿ ರಮೇಶ್ ಜಾರಕಿಹೊಳಿ(RAMESH JARAKI HOLI)ವಿರುದ್ಧ ಖಂಡನೆ ವ್ಯಕ್ತಪಡಿಸಿದ್ರು.
ರಮೇಶ್ ಜಾರಕಿಹೊಳಿಗೆ ಕಾಮನ್ ಸೆನ್ಸ್ ಇಲ್ಲ. ಈಗ ಅವರ ಪರಿಸ್ಥಿತಿ ಕುಂಬಳಕಾಯಿ ಕಳ್ಳ ಅಂದ್ರೆ ಹೆಗಲು ಮುಟ್ಟಿಕೊಂಡಂತೆ ಆಗಿದೆ ಎಂದು MLC ಚನ್ನರಾಜ್ ಹಟ್ಟಿಹೊಳಿ ತಿರುಗೇಟು ನೀಡಿದ್ದಾರೆ. ಹೆಬ್ಬಾಳ್ಕರ್ ವಿರುದ್ಧ ವಿಷ ಕನ್ಯೆ ಪದ ಬಳಕೆ ಮಾಡಿರುವುದನ್ನು ನಾನು ಖಂಡಿಸುತ್ತೇನೆ. ಈ ರೀತಿ ಹೇಳಿಕೆ ಕೊಟ್ಟರೆ ಜನ ನೋಡುತ್ತಾರೆ. ಇಂಥ ಪದ ಬಳಸಲು ಅವರಿಗೆ ಕಾಮನ್ ಸೆನ್ಸ್ ಇಲ್ಲ. ಗೋಕಾಕ್ ನಲ್ಲಿ ಲಕ್ಷ್ಮಿ ಹೆಬ್ಬಾಳ್ಕರ್ ಅಭಿಮಾನಿಗಳಿದ್ದಾರೆ. ಅಲ್ಲಿನ ಜನರೇ ಅವರಿಗೆ ತಕ್ಕ ಪಾಠ ಕಲಿಸುತ್ತಾರೆ ಎಂದು ಎಚ್ಚರಿಕೆ ನೀಡಿದ್ದಾರೆ. ಬೆಳಗಾವಿ (BELGAVI) ಟಿಕೆಟ್ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿ, ಹೆಬ್ಬಾಳ್ಕರ್ ಅವರು ಟಿಕೆಟ್ ಪಡೆಯುವಾಗ ಜಿ. ಪರಮೇಶ್ವರ ಅವರು ಅಧ್ಯಕ್ಷರಾಗಿದ್ದರು. ಆದರೆ ಡಿಕೆಶಿ ಅವರು ಅಧ್ಯಕ್ಷರಾಗಿದ್ದು ಈಗ. ಇದರಿಂದ ಅವರು ಹೇಳೋದೆಲ್ಲಾ ಶುದ್ಧ ಸುಳ್ಳು ಅನ್ನೋದು ಗೊತ್ತಾಗುತ್ತೆ. ರಮೇಶ್ ಜಾರಕಿಹೊಳಿ ರೀತಿ ಅನ್ ಅಕೌಂಟೆಡ್ ದುಡ್ಡು ನಮ್ಮ ಬಳಿ ಇಲ್ಲ. ಅವರಂತಹ ನೀಚ ಮನಸ್ಥಿತಿಯೂ ನಮ್ಮದಲ್ಲ. ಇಂತಹ ಬೇಜವಾಬ್ದಾರಿ ಹೇಳಿಕೆಗಳಿಗೆ ಲಕ್ಷ್ಮಿ ಹೆಬ್ಬಾಳ್ಕರ್ ಸ್ಪಷ್ಟೀಕರಣ ನೀಡುವುದೂ ಇಲ್ಲ ಎಂದು ಹೇಳಿದ್ದಾರೆ. ಇದನ್ನು ಓದಿ :- 100 ರೂಪಾಯಿಗೆ ಕನಕಪುರದಲ್ಲಿ ಬ್ಲೂ ಫಿಲ್ಮ್ ತೋರಿಸಿದ್ದ ಡಿ.ಕೆ.ಶಿವಕುಮಾರ್- ರಮೇಶ್ ಜಾರಕಿಹೊಳಿ ಗಂಭೀರ ಆರೋಪ
ನಿಮಗೆ ಅನ್ಯಾಯ ಆಗಿದ್ದರೆ ಒಂದೂವರೆ ವರ್ಷದಿಂದ ಯಾಕೆ CBI ಗೆ ಸಿಡಿ ಪ್ರಕರಣ ದಾಖಲಿಸಿಲ್ಲ..? ತಮ್ಮ ಮೇಲೆ ಆರೋಪ ಮಾಡಿದಾಗ ಕಟ್ ಪೇಸ್ಟ್ ಆಡಿಯೋ ಕ್ಲಿಪ್ ಅಂತಾರೆ. ಅವರ ಬಳಿ ಇರುವುದೆಲ್ಲವೂ ಸತ್ಯವಾ? ಚುನಾವಣೆ ಸಮಯದಲ್ಲಿ ಇಡಿ, ಸಿಬಿಐ, ಐಟಿ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಸಿಬಿಐನಿಂದ ಅರೆಸ್ಟ್ ಮಾಡಿಸುತ್ತೇವೆ ಎಂದರೆ ಅವರ ಮಾತನ್ನ ಸಿಬಿಐ ಕೇಳುತ್ತದೆ ಎಂದರ್ಥ. ಅವರ ಹೇಳಿಕೆಯಿಂದ ಸಿಬಿಐ ಅವರ ಕಪಿಮುಷ್ಟಿಯಲ್ಲಿ ಇರುವುದು ಸ್ಪಷ್ಟವಾಗುತ್ತದೆ ಎಂದು ಸಂಶಯ ವ್ಯಕ್ತಪಡಿಸಿದ್ದಾರೆ.
ಇದಕ್ಕೆ ಎರಡನೇ ಸುದ್ದಿಗೋಷ್ಠಿ ನಡೆಸಿ ತಿರುಗೇಟು ನೀಡಿದ ರಮೇಶ್ ಜಾರಕಿಹೊಳಿ, ಲಕ್ಷ್ಮೀ ಹೆಬ್ಬಾಳ್ಕರ್ ಮತ್ತು ಚನ್ನರಾಜ ಹಟ್ಟಿಹೊಳಿಗೆ ನೈತಿಕತೆ ಇಲ್ಲ. ಸಿಡಿ ಗ್ಯಾಂಗ್ ಕ್ಯಾಪ್ಟನ್ ಇಟ್ಟುಕೊಂಡು ರಾಜಕೀಯ ಮಾಡುತ್ತೀರಾ ಎಂದು ಪ್ರಶ್ನಿಸಿದರು. ಇಂತಹ ಫ್ರಾಡ್ ಇಟ್ಟುಕೊಂಡು ಕಾಂಗ್ರೆಸ್ (CONGRESS)ಪಕ್ಷದಿಂದ ರಾಜಕೀಯ ಮಾಡಲಾಗುತ್ತಿದೆ. ಸಿಡಿ ಮಾಸ್ಟರ್ಗೆ ಅಧಿಕಾರ ಸಿಕ್ಕರೆ ರಾಜ್ಯದ ಗತಿ ಏನು ಅಂತಾ ಪ್ರಶ್ನೆ ಮಾಡಿದ್ರು. ಸಿಡಿ ಬ್ಲ್ಯಾಕ್ಮೇಲ್ ಮಾಡುವವನಿಗೆ ಕೆಪಿಸಿಸಿ ಅಧ್ಯಕ್ಷ ಸ್ಥಾನ ನೀಡಿದ್ದಾರೆ ಎಂದು ಡಿ.ಕೆ.ಶಿವಕುಮಾರ್ ವಿರುದ್ಧ ಏಕವಚನದಲ್ಲೇ ವಾಗ್ದಾಳಿ ನಡೆಸಿದ್ರು. ಆತನನ್ನು ರಾಜಕೀಯವಾಗಿ ಮುಗಿಸಲು ಇದು ನನ್ನ ಮೊದಲ ಅಸ್ತ್ರ. ಸಿಡಿ ಇಟ್ಟುಕೊಂಡು ಎಲ್ಲರನ್ನು ಬ್ಲ್ಯಾಕ್ಮೇಲ್ ಮಾಡುತ್ತಿದ್ದಾನೆ. ರಾಜಕೀಯಕ್ಕೆ ಬರುವ ಮೊದಲು ಕನಕಪುರದಲ್ಲಿ ಡಿಕೆಶಿ 100 ರೂ.ಗೆ ಬ್ಲ್ಯೂಫಿಲ್ಮ್ ತೋರಿಸುತ್ತಿದ್ದ. ಈ ಬಗ್ಗೆ ಕಾಂಗ್ರೆಸ್ನ ಯಾವೊಬ್ಬ ನಾಯಕ ಕೂಡ ಮಾತನಾಡುತ್ತಿಲ್ಲ. ವಿಪಕ್ಷ ನಾಯಕ ಸಿದ್ದರಾಮಯ್ಯ ಕೂಡ ಡಿಕೆಶಿ ಬಗ್ಗೆ ಮಾತನಾಡುತ್ತಿಲ್ಲ. ನಾನು ಯಾವುದೇ ಗಿಮಿಕ್ ಮಾಡುತ್ತಿಲ್ಲ ಎಂದರು.
ಇದನ್ನು ಓದಿ :- ಸಿದ್ದರಾಮಯ್ಯಗೆ ಕೋಲಾರಗಿಂತ ವರುಣಾನೇ ಸೇಫೆಸ್ಟ್ ಕ್ಷೇತ್ರ – K.N ರಾಜಣ್ಣ