ನಾನು ರಾಜಕೀಯಕ್ಕೆ ಬಂದಿದ್ದು ಕೇವಲ 8 ವರ್ಷ ಅಷ್ಟೇ.ಇದುವರೆಗೂ ತಿಪಟೂರಿನಲ್ಲಿ ಅಭಿವೃದ್ಧಿ ಮಾಡುವ ಕೆಲಸ ಯಾರ ಕೈಯಲ್ಲೂ ಆಗಿಲ್ಲ ಎಂದು ತುಮಕೂರಿನ ಜೆಡಿಎಸ್ (JDS) ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಕೆ.ಟಿ ಶಾಂತಕುಮಾರ್ (KT.Shanthakumar) ಹೇಳಿದ್ದಾರೆ. ತಿಪಟೂರು ಶಾಸಕರು ತಾಲೂಕಿಗೆ ಶಾಶ್ವತ ನೀರಾವರಿ ಕೊಡ್ತೀನಿ. ಹಾಗೇ-ಹೀಗೆ ಅಂತ ಸುಳ್ಳು ಭರವಸೆ ಕೊಟ್ಟಿದ್ದಾರೆ.
ಇದುವರೆಗೂ ಅವರು ಕೊಟ್ಟ ಯಾವ ಭರವಸೆಗಳು ಈಡೇರಿಲ್ಲ. ನಾನು ಕಳೆದ 8 ವರ್ಷಗಳಿಂದ ರೈತರ ಪರ ನಿಂತು ಸಮಸ್ಯೆ ಬಗೆಹರಿಸಿದ್ದೇನೆ. ಇಡೀ ತಿಪಟೂರು (Tiptur) ಕೊಳಚೆ ನೀರಿನಿಂದ ತುಂಬಿ ವಾಸನೆ ಹಿಡಿದು ಕುಂತಿದೆ. ಕೊಳಚೆ ನೀರಿನ ಸಮಸ್ಯೆನಾ ಸರಿಪಡಿಸುವ ಕೆಲಸವನ್ನ ಯಾರೂ ಮಾಡಿಲ್ಲ. ಇಲ್ಲಿನ ಶಾಸಕರು ನನ್ನ ಬಿಟ್ಟು ಬೇರೆಯವರಿಗೆ ಜನ ವೋಟ್ ಹಾಕಲ್ಲ ಅಂದುಕೊಂಡಿದ್ದಾರೆ. ಶಾಸಕರು ಅಂದು ಕೊಂಡಿರೋದು ಅಪ್ಪಟ ಸುಳ್ಳು. ಶಾಸಕರು ಸದನದಲ್ಲಿ ತಿಪಟೂರಿನ ಸಮಸ್ಯೆ ಬಗ್ಗೆ ಒಂದು ದಿನವೂ ಧ್ವನಿ ಎತ್ತಿಲ್ಲ. ತಿಪಟೂರು ತಾಲ್ಲೂಕಿನಲ್ಲಿ ಸಾಕಷ್ಟು ಜ್ವಲಂತ ಸಮಸ್ಯೆಗಳಿವೆ. ಶಾಸಕರದ್ದು ಬರೀ ಆಶ್ವಾಸನೆ ಅಷ್ಟೇ,ಅಭಿವೃದ್ಧಿಯಲ್ಲ. ನಾನು ಹಣ ಮಾಡಬೇಕು ಅಂತ ರಾಜಕೀಯಕ್ಕೆ ಬಂದಿಲ್ಲ. ಬಡ ಕುಟುಂಬಕ್ಕಾಗಿ ಸದಾಕಾಲ ಶಾಂತಕುಮಾರ್ ಮನೆ ತೆರೆದಿರುತ್ತೆ. ನನ್ನ ಮಾತೃ ಪಕ್ಷ ಜೆಡಿಎಸ್, ಮತ್ತೆ ನಮ್ಮ ಪಕ್ಷಕ್ಕೆ ಮರಳಿ ಬಂದಿದ್ದೇನೆ. ಈ ಹಿಂದೆ ಯಾವುದೋ ಸಂದರ್ಭಕ್ಕೆ ಜೆಡಿಎಸ್ ಪಕ್ಷ ಬಿಡುವಂತಹ ಸನ್ನಿವೇಶ ಬಂದಿತ್ತು. 90 ವರ್ಷ ವಯಸ್ಸಾದ್ರು ದೇವೇಗೌಡ (Devegowda) ರು ಪಕ್ಷಕ್ಕಾಗಿ ಹೋರಾಟ ಮಾಡ್ತಾರೆ. ಕುಮಾರಸ್ವಾಮಿ ಅವರನ್ನ ಮತ್ತೊಮ್ಮೆ ಮುಖ್ಯಮಂತ್ರಿ ಮಾಡ್ಬೇಕು ಅಂತ ಪಣ ತೊಟ್ಟಿದ್ದಾರೆ. ಪಂಚರತ್ನ ಯಾತ್ರೆ ಈಗಾಗಲೇ ರಾಜ್ಯದ ಎಲ್ಲೆಡೆ ಸಾಗ್ತಿದೆ. ರಾಜ್ಯದ ಎಲ್ಲಾ ವರ್ಗದ ಜನರು ಸಾಥ್ ಕೊಡ್ತಿದ್ದಾರೆ. ಸುಳ್ಳು ಆಶ್ವಾಸನೆ ಕೊಡುವಂತಹ ಮುಖ್ಯಮಂತ್ರಿ ಕುಮಾರಸ್ವಾಮಿ ಅಲ್ಲ. ಇದನ್ನೂ ಓದಿ : – ಒಬ್ಬ ಅಭ್ಯರ್ಥಿ ಏಕಕಾಲಕ್ಕೆ ಎರಡು ಕ್ಷೇತ್ರಗಳಲ್ಲಿ ಚುನಾವಣೆಗೆ ಸ್ಪರ್ಧಿಸಬಹುದು – ಸುಪ್ರೀಂ ಕೋರ್ಟ್
ಆದರೆ ನಮ್ಮ ಕೆಲ ನಾಯಕರಿಗೆ ಬಡ ಜನರ ಅಭಿವೃದ್ಧಿ ಬೇಕಾಗಿಲ್ಲ. ಬರೀ ದುಡ್ಡು ಮಾಡ್ಬೇಕು ಅಷ್ಟೇ. ಗುದ್ದಲಿ ಪೂಜೆ, ಗೆದ್ದ ನಾಲ್ಕೂವರೆ ವರ್ಷದ ಬಳಿಕ ಆಗುತ್ತಿವೆ. ಯಾಕೆ ಅಂದರೆ ಇದು ಎಲೆಕ್ಷನ್ ಗಿಮಿಕ್. ನಿಮ್ಮ ಶಾಂತಕುಮಾರ್ ಇವತ್ತು ಜೆಡಿಎಸ್ ಪಕ್ಷ ಸೇರ್ಪಡೆ ಆಗ್ತಿದ್ದಾರೆ. ಯಾಕಂದ್ರೆ ಕುಮಾರಸ್ವಾಮಿ (Kumaraswamy) ಅವರ 123 ಕನಸು ಮನಸ್ಸು ಮಾಡ್ಬೇಕಿದೆ. ಹಾಗಾಗಿ ತಿಪಟೂರಿನಿಂದ ಒಂದು ಸೀಟ್ ಕೊಡ್ಬೇಕು. ಶಾಂತಕುಮಾರ್ ಎಂಎಲ್ ಎ ಆಗ್ತಾರೆ. ಮುಂದಿನ ದಿನಗಳಲ್ಲಿ ತಿಪಟೂರು ಅಭಿವೃದ್ಧಿ ಆಗುತ್ತೆ. ನಿಮ್ಮೆಲ್ಲರ ಸಹಕಾರದಿಂದ ಇವತ್ತು ಜೆಡಿಎಸ್ ಪಕ್ಷ ಸೇರ್ಪಡೆ ಆಗಿದ್ದೇನೆ. ನಿಮ್ಮ ಅಶೀರ್ವಾದ ಸದಾ ಹೀಗೆ ಇರಲಿ. ಹಲವು ನಾಯಕರು, ಮುಖಂಡರು ಕಾಂಗ್ರೆಸ್-ಬಿಜೆಪಿ ತೊರೆದು ಜೆಡಿಎಸ್ ಗೆ ಸೇರ್ಪಡೆ ಆಗ್ತಿದ್ದಾರೆ ಎಂದು ಕೆ.ಟಿ ಶಾಂತಕುಮಾರ್ ತಿಳಿಸಿದ್ದಾರೆ.
ಇದನ್ನೂ ಓದಿ : – ಪರಮೇಶ್ವರ್ ಪಕ್ಷದ ಶಿಸ್ತಿನ ಸಿಪಾಯಿ – ಡಿಕೆ ಶಿವಕುಮಾರ್ ಸ್ಪಷ್ಟನೆ