ಹಳೆ ಮೈಸೂರು (Mysuru) ಭಾಗ, ಕಲ್ಯಾಣ ಕರ್ನಾಟಕ, ಉತ್ತರ ಕರ್ನಾಟಕ (Uttar karnataka) ಬಳಿಕ ಹೆಚ್ ಡಿ ಕೆ ಬೆಂಗಳೂರ (Bangalore) ನ್ನ ಟಾರ್ಗೆಟ್ ಮಾಡಿದ್ದಾರೆ. ಇಂದು ಬೆಂಗಳೂರಿನ ವಿವಿಧ ವಿಧಾನಸಭಾ ಕ್ಷೇತ್ರಗಳ ಮುಖಂಡರ ಜೊತೆ ಹೆಚ್ ಡಿ ಕೆ ಸಭೆ ನಡೆಸಲಿದ್ದಾರೆ. ಮಾಜಿ ಸಿಎಂ ಹೆಚ್.ಡಿ.ಕೆ ಮತ್ತು ಸಿಎಂ ಇಬ್ರಾಹಿಂ ನೇತೃತ್ವದಲ್ಲಿ ಸಭೆ ನಡೆಯಲಿದೆ. ಬೆಂಗಳೂರು ನಗರ, ರಾಜಾಜಿನಗರ,ಹೆಬ್ಬಾಳ ,ರಾಜರಾಜೇಶ್ವರಿ ನಗರ, ಪದ್ಮನಾಭನಗರ, ಚಿಕ್ಕಪೇಟೆ, ಬ್ಯಾಟರಾಯನಪುರ ಕ್ಷೇತ್ರಗಳ ಮುಖಂಡರ ಜೊತೆ ಹೆಚ್ ಡಿ ಕೆ ಸಭೆ ನಡೆಸಲಿದ್ದಾರೆ.
ಅಭ್ಯರ್ಥಿಗಳ ಆಯ್ಕೆ, ಟಿಕೆಟ್ ಘೋಷಣೆ, ಪಂಚರತ್ನ ಯಾತ್ರೆ ಸಿದ್ದತೆಗಳ ಬಗ್ಗೆ ಮುಖಂಡರ ಜೊತೆ ಹೆಚ್ ಡಿ ಕೆ ಚರ್ಚೆ ನಡೆಸಲಿದ್ದಾರೆ. ಅಭ್ಯರ್ಥಿಗಳ ಕಾರ್ಯವೈಖರಿ ಬಗ್ಗೆ ಹೆಚ್ ಡಿ ಕೆ (Kumaraswamy) ಗ್ರೌಂಡ್ ರಿಪೋರ್ಟ್ ಪಡೆದುಕೊಳ್ಳುತ್ತಿದ್ದಾರೆ. ಅಭ್ಯರ್ಥಿ ಘೋಷಣೆ ಕುರಿತು ಇಂದಿನ ಸಭೆಯಲ್ಲಿ ಮಹತ್ವದ ಚರ್ಚೆ ನಡೆಯಲಿದೆ. ಹೆಚ್ ಡಿ ಕೆ ಮೊದಲ ಪಟ್ಟಿಯಲ್ಲಿ 93 ಜನರನ್ನು ಘೋಷಿಸಿದ್ದರು. ಜೆಡಿಎಸ್ ಎರಡನೇ ಪಟ್ಟಿ ಬಿಡುಗಡೆಗೆ ಸಿದ್ದತೆ ನಡೆಸುತ್ತಿದೆ. ಕ್ಷೇತ್ರವಾರು ಕಾರ್ಯಕ್ರಮ ನಡೆಸಿ ಸಂದರ್ಭನುಸಾರ ಹೆಚ್ ಡಿ ಕೆ ಟಿಕೆಟ್ ಘೋಷಿಸುತ್ತಾರೆ. ಟಿಕೆಟ್ ಘೋಷಣೆ, ಜೆಡಿಎಸ್ ಚುನಾವಣೆ ಸಿದ್ದತೆ, ಅಭ್ಯರ್ಥಿಗಳ ಕಾರ್ಯವೈಖರಿ ಬಗ್ಗೆ ಇಂದಿನ ಸಭೆಯಲ್ಲಿ ಚರ್ಚೆ ನಡೆಯಲಿದೆ.
ಇದನ್ನೂ ಓದಿ : – ಮರಾಠಿ ಭಾಷಿಕರಿಗೆ ಒಲಿದ ಬೆಳಗಾವಿ ಪಾಲಿಕೆ ಮೇಯರ್, ಉಪಮೇಯರ್ ಸ್ಥಾನ