ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಳ್ಳುವುದಕ್ಕಿಂತಲೂ ಸಾಯುವುದು ಒಳ್ಳೆಯದು ಎಂದು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ (NITISH KUMAR) ಕಟುವಾಗಿ ಹೇಳಿದ್ದಾರೆ.
‘ಪ್ರಧಾನಿ ನರೇಂದ್ರ ಮೋದಿ (NARENDRA MODI) ಅವರಿಗೆ ವಿಶ್ವಾಸದ್ರೋಹ ಮಾಡಿದರು’ ಎನ್ನುವ ಬಿಜೆಪಿ ನಾಯಕರ ಆರೋಪದ ಕುರಿತು ಪ್ರತಿಕ್ರಿಯಿಸಿದ ಅವರು, ಬಿಜೆಪಿಯೊಂದಿಗೆ ಮೈತ್ರಿ ಕುರಿತ ಗಾಳಿಸುದ್ದಿಯನ್ನು ಸಾರಾಸಗಟಾಗಿ ತಳ್ಳಿಹಾಕಿದರು. ಯಾವುದೇ ಆಧಾರವಿಲ್ಲದೆ, ಉದ್ದೇಶಪೂರ್ವಕವಾಗಿ ಉಪಮುಖ್ಯಮಂತ್ರಿ ತೇಜಸ್ವಿ ಯಾದವ್ ವಿರುದ್ಧ ಬಿಜೆಪಿ ಸರ್ಕಾರದ ಏಜೆನ್ಸಿಗಳು ಕ್ರಮಜರುಗಿಸುತ್ತಿವೆ ಎಂದು ದೂರಿದರು. ಇದನ್ನು ಓದಿ :- ಲಕ್ಷ್ಮಿ ವಿರುದ್ಧ ರಮೇಶ್ ಜಾರಕಿಹೊಳಿ ವಿಷ ಕನ್ಯೆ ಪದ ಬಳಕೆಗೆ ಚನ್ನರಾಜ ಹಟ್ಟಿಹೊಳಿ ಆಕ್ಷೇಪ
ಬಿಜೆಪಿಯೊಂದಿಗೆ ಮತ್ತೊಮ್ಮೆ ಮೈತ್ರಿ ಮಾಡಿಕೊಳ್ಳುವ ಪ್ರಶ್ನೆಯೇ ಉದ್ಭವಿವುದಿಲ್ಲ. ನಾನು ಸತ್ತರೂ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಳ್ಳುವುದಿಲ್ಲ’ ಎಂದು ಸ್ಪಷ್ಟಪಡಿಸಿದರು. ನಿತೀಶ್ ಕುಮಾರ್ ಮಾತನಾಡುವಾಗ ತೇಜಸ್ವಿ ಯಾದವ್ ಅವರ ಪಕ್ಕದಲ್ಲಿಯೇ ಇದ್ದರು. ‘ಸರಿಯಾಗಿ ಕೇಳಿಸಿಕೊಳ್ಳಿ. ಅವರು ಎಷ್ಟು ಕಷ್ಟಪಟ್ಟಿದ್ದಾರೆ. ತೇಜಸ್ವಿ ಮತ್ತು ಅವರ ತಂದೆಯ ವಿರುದ್ಧ ಪ್ರಕರಣ ದಾಖಲಿಸುವ ಮೂಲಕ ಮತ್ತೆ ನನ್ನೊಡನೆ ಮೈತ್ರಿ ಮಾಡಿಕೊಳ್ಳಲು ಬಿಜೆಪಿ ತಂತ್ರ ರೂಪಿಸಿದೆ. ಹಿಂದೆಯೂ ಅವರು ಹೀಗೆಯೇ ಮಾಡಿದ್ದರು. ಮತ್ತೆ ಹಳೆಯ ತಂತ್ರಗಳನ್ನೇ ಅನುಸರಿಸುತ್ತಿದ್ದಾರೆ’ ಎಂದು ನಿತೀಶ್ ಕುಮಾರ್ ಸ್ಫೋಟಕ ಹೇಳಿಕೆ ನೀಡಿದ್ದಾರೆ.
ಇದನ್ನು ಓದಿ :- 100 ರೂಪಾಯಿಗೆ ಕನಕಪುರದಲ್ಲಿ ಬ್ಲೂ ಫಿಲ್ಮ್ ತೋರಿಸಿದ್ದ ಡಿ.ಕೆ.ಶಿವಕುಮಾರ್- ರಮೇಶ್ ಜಾರಕಿಹೊಳಿ ಗಂಭೀರ ಆರೋಪ