ಎಸ್ ಸಿ ಎಸ್ ಟಿ ಸಮುದಾಯಗಳಿಗೆ ಬಿಜೆಪಿ ಸರ್ಕಾರ ಅನ್ಯಾಯ ಮಾಡುತ್ತಿದೆ ಎಂದು ಆರೋಪಿಸಿ ಕಾಂಗ್ರೆಸ್ ಇಂದು ಪ್ರತಿಭಟನೆ ಮಾಡಿದರು.ನಗರದ ಕೆಪಿಸಿಸಿ ಕಚೇರಿಯಿಂದ ರಾಜ ಭವನದವರೆ ಪ್ರತಿಭಟನೆ ಹಮ್ಮಿಕೊಂಡಿದ್ದರು. ಕೆಪಿಸಿಸಿ ಅಧ್ಯಕ್ಷ ಡಿಕೆಶಿವಕುಮಾರ್,ವಿಪಕ್ಷನಾಯಕ ಸಿದ್ದರಾಮಯ್ಯ ನೇತೃತ್ವದಲ್ಲಿ ಪ್ರತಿಭಟನೆ ಸಾಗಿತು. ರಾಜಭವನ ಭವನಕ್ಕೆ ಹೋಗುವ ದಾರಿ ಮದ್ದೆ ಇಂಡಿಯನ್ ಎಕ್ಸ್ ಪ್ರೆಸ್ ಸರ್ಕಲ್ ನಲ್ಲಿ ಕೈ ನಾಯಕರನ್ನು ಪೊಲಿಸರು ವಶಕ್ಕೆ ಪಡೆದುಕೊಂಡರು. ಬಳಿಕ ಕಾಂಗ್ರೆಸ್ ನಿಯೋಗ ರಾಜ್ಯ ಪಾಲರನ್ನು ಭೇಟಿ ಮಾಡಿ ಸರ್ಕಾರದ ವಿರುದ್ಧ ದೂರು ನೀಡಿದ್ರು,
ಈ ಬಗ್ಗೆ ಮಾತನಡಿದ ಡಿಕೆಶಿವಕುಮಾರ್ ಕರ್ನಾಟಕದ ಜನತೆಯ ಪರವಾಗಿ ಪರಿಶಿಷ್ಟ ಜಾತಿ, ಪಂಗಡದ ಪರವಾಗಿ ನಾಗಮೋಹನ್ ದಾಸ್ ವರದಿ ಬಂತು. ನ್ಯಾಯ ಒದಗಿಸಬೇಕು ಅಂತಾ ಒತ್ತಾಯ ಮಾಡಿದೆವು. ಅಸೆಂಬ್ಲಿಯಲ್ಲಿ ಒತ್ತಾಯ ಮಾಡಿದ್ವಿ ಕೇಂದ್ರ ಸರ್ಕಾರಕ್ಕೆ ಅವರು ಐದು ತಿಂಗಳ ಹಿಂದೆನೆ ಕಳಿಸಬೇಕಾಗಿತ್ತು.
ಆದರೆ ಅಲ್ಲಿ ಯಾವುದೇ ಪ್ರಸ್ತಾವನೆ ಇಲ್ಲ ಅಂದರು. ಲೋಕಸಭೆಯಲ್ಲಿ ಪ್ರಸ್ತಾವನೆಯೇ ಇಲ್ಲ ಅಂತಾ ಹೇಳಿದರು. ಆದರೆ ನಿನ್ನೆ ರಾತ್ರೊ ರಾತ್ರಿ 9 ಶೆಡ್ಯೂಲ್ ಗೆ ಆದೇಶ ಕೊಟ್ಟಿದ್ದಾರೆ. ಇವತ್ತು ಸರ್ಕಾರ ಪ್ರತಿಭಟನೆಗೆ ಅವಕಾಶ ಕೊಡದೇ ಬಂಧಿಸಿದೆ. 15 ಜನ ನಾಯಕರು ರಾಜಭವನಕ್ಕೆ ಭೇಟಿ ನೀಡಿ ಮನವಿ ಮಾಡಿದ್ದೆವೆ. ಸರ್ಕಾರ ಸುಳ್ಳು ಹೇಳ್ತಾ ಇದೆ, ಜನರಿಗೆ ಸುಳ್ಳು ಹೇಳ್ತಾ ಇದೆ ಆಗಾಗಿ. ಆರ್ಟಿಕಲ್ 356 ಪ್ರಕಾರ ಸರ್ಕಾರನ ವಜಾ ಮಾಡಬೇಕು ಅಂತಾ ಒತ್ತಾಯ ಮಾಡಿದ್ದೆವೆ ಎಂದು ಹೇಳಿದರು.