ಪಂಚರತ್ನದ ಮೂಲಕ ರಾಜ್ಯದ ಚುಕ್ಕಾಣಿ ಹಿಡಿಯಬೇಕು ಎಂದು ಮಾಜಿ ಸಿಎಂ ಕುಮಾರಸ್ವಾಮಿ ಅವರು ಶತಾಯಗತಾಯ ಪ್ರಯತ್ನ ಮಾಡುತ್ತಿದ್ದಾರೆ. ಈ ನಡುವೆ ಜೆಡಿಎಸ್ ಶಾಸಕರಾಗಿದ್ದ ಗುಬ್ಬಿ ಕ್ಷೇತ್ರದ ಶ್ರೀನಿವಾಸ್ ಕಾಂಗ್ರೆಸ್ ಸೇರ್ಪಡೆ ಮಾಡಿಕೊಳ್ಳುವ ಮೂಲಕ ಜೆಡಿಎಸ್ ಗೆ ಹೊಡೆತ ಕೊಟ್ಟಿದೆ. ಕೆಪಿಸಿಸಿ ಕಚೇರಿಯಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿಕೆಶಿವಕುಮಾರ್ ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು. ಮೂಡಗಿರಿ ಕ್ಷೇತ್ರದ ಬಿಜೆಪಿ ನಾಯಕ ಕಾಂಗ್ರೆಸ್ ಸೇರಲು ಬಂದಿದ್ದಾರೆ. ಮಂಡ್ಯ ವಕೀಲ ಸತ್ಯನಂದ ಕಾಂಗ್ರೆಸ್ ಸೇರುತ್ತಿದ್ದಾರೆ. ತುಮಕೂರು ಕೆಲ ನಾಯಕರು ಕಾಂಗ್ರೆಸ್ ಸೇರ್ತಾ ಇದ್ದಾರೆ. ಚುನಾವಣೆ ಘೋಷಣೆ ಆಗಿದೆ. ಮೇ ಹತ್ತು ಮತದಾನ ಅಲ್ಲ, ಅಭಿವೃದ್ಧಿ ಶೀಲ ನೀರ್ಮಾಣ ಮಾಡುವ ದಿನ ಎಂದು ಜನರು ಕಾಯ್ತಾ ಇದ್ರು. ಪ್ರಜಾಪ್ರಭುತ್ವ ಹಬ್ಬ ಬಹಳ ಹಿಂದೆ ನೀತಿಸಂಹಿತೆ ಬರಬೇಕಿತ್ತು. ಅಧಿಕಾರಿಗಳು ಭ್ರಷ್ಟಾಚಾರದಲ್ಲಿ ಮುಳಗಿದ್ರು. ನಾಳೆ ನಾಡಿದ್ದು ಅದರ ಬಗ್ಗೆ ಮಾತನಾಡುತ್ತೇನೆ ಎಂದು ಹೇಳಿದರು.
ಇನ್ನೂ ಶ್ರೀನಿವಾಸ್ ನಾಲ್ಕು ಬಾರಿ ಶಾಸಕರಾಗಿದ್ದಾರೆ. ವಾಸುಗೆ ನಾನು ಗಾಳ ಹಾಕುತ್ತಲೆ ಇದ್ದೆ. ಈಗ ನನ್ನ, ಸಿದ್ದರಾಮಯ್ಯ ಗಾಳಕ್ಕೆ ಬಿಳಲಿಲ್ಲ. ಮತದಾರರ ಗಾಳಿ ಬಿಸಿದ ಕಡೆ ರಾಷ್ಟ್ರೀಯ ಪಕ್ಷಕ್ಕೆ ಬಂದಿದ್ದಾರೆ. ಅರಸಿಕೆರ ಶಿವಲಿಗೌಡ ಸೇರ್ಪಡೆ ಆಗ್ತಾರೆ. ನಾಳೆ ಅಥವಾ ನಾಡಿದ್ದು ಸೇರ್ಪಡೆ ಆಗ್ತಾರೆ. ಹಲವು ಜೆಡಿಎಸ್ ನಾಯಕರು ಕಾಂಗ್ರೆಸ್ ಸೇರುತ್ತಿದ್ದಾರೆ. 37 ಜೆಡಿಎಸ್ ನಾಯಕರು ಕಾಂಗ್ರೆಸ್ ಸೇರಿದ್ದಾರೆ. ಕಳೆದ ಬಾರಿ ಜೆಡಿಎಸ್ ಜೊತೆ ಗುರುತಿಸಿಕೊಂಡಿದ್ರು. ಪುಟ್ಟಣ್ಣ, ಚಿಂಚನಸೂರ್, ಲಿಂಬಿಕಾಯಿ, ಬಣಕಾರ್, ಮಂಜುನಾಥ್ ಕುನ್ನೂರು ಬಿಜೆಪಿ ತೊರೆದು ಬಂದಿದ್ದಾರೆ ಎಂದರು. ಇನ್ನೂ ಡಿಕೆಶಿವಕುಮಾರ್ ಅವರು ಬಿಜೆಪಿ ಶಾಸಕರ ಮನೆ ಬಾಗಿಲು ತಟ್ಟುತ್ತಿದ್ದಾರೆ ಎಂಬ ವಿಚಾರಕ್ಕೆ ಪ್ರತಿಕ್ರಿಯಿಸಿ ಸಿಎಂ ಹೇಳಿದ್ರು. ನಮ್ಮ ಶಾಸಕರ ಮನೆ ಬಾಗಿಲು ತಟ್ಟುತ್ತಿದ್ದಾರೆ. ಆಪರೇಷನ್ ಕಮಲ ಮಾಡಿದಿರಿ ಅವಾಗ ಯಾವ ನೈತಿಕತೆ ಇತ್ತು. ಕಾಂಗ್ರೆಸ್, ಜೆಡಿಎಸ್ ಶಾಸಕರ ಆಪರೇಷನ್ ಮಾಡಿದ್ರಿ ಎಂದು
ಸಿಎಂ ಗೆ ಡಿ ಕೆ ಶಿವಕುಮಾರ್ ತಿರುಗೇಟು ನೀಡಿದರು.