ಜಾತಿ ಗಣತಿ ವರದಿ ವಿರೋಧಿಸಿ ವೀರಶೈವ ಲಿಂಗಾಯತ ಮಹಾಸಭಾದಲ್ಲಿ ನಿರ್ಣಯ ಕೈಗೊಂಡಿದ್ದಾರೆ..ಇತ್ತ ಕಾಂತರಾಜು ವರದಿ ಬೆಂಬಲಿಸಿ ಬೃಹತ್ ಸಮಾವೇಶ ಮಾಡಲು ಸಿದ್ಧತೆ ನಡೆಸಿದ್ದಾರೆ. ಆ ಕುರಿತು ಒಂದು ವರದಿ ಇಲ್ಲಿದೆ ನೋಡಿ ..
ಜಾತಿ ಗಣತಿ ಕಾವು ರಾಜ್ಯದಲ್ಲಿ ದಿನೆ ದಿನೇ ರಂಗೇರುತ್ತಿದೆ.ಸಿಎಂ ಸಿದ್ದರಾಮಯ್ಯ ಸರ್ಕಾರದಲ್ಲಿ ಪರ ವಿರೋಧಗಳು ವ್ಯಕ್ತ ವಾಗುತ್ತಿವೆ. ಲಿಂಗಾಯತ,ಒಕ್ಕಲಿಗ ಸಮುದಾಗಳು ಪ್ರಭಲವಾಗಿ ವಿರೋಧಿಸುತ್ತಿವೆ.ಈ ಹಿನ್ನಲೆ ದಾವಣಗೆರೆಯಲ್ಲಿ ಬೃಹತ್ ಮಟ್ಟದ ಸಮಾವೇಶ ಮಾಡಿ ಜಾತಿ ಗಣತಿ ಸ್ವೀಕರಿಸ ಬಾರದು ಇದು ಅವೈಜ್ಞಾನಿಕವಾಗಿದೆ.ಎಂಟು ವರ್ಷದ ಹಳೆದಾಗಿದೆ,ಸೋರಿಕೆ ಆಗಿದೆ. ಆದ್ದರಿಂದ ವರದಿಯನ್ನ ಯಾವುದೇ ಕಾರಣಕ್ಕೂ ಸ್ವೀಕರಿಸಬಾರದು ಎಂದು ಸಮಾವೇಶದಲ್ಲಿ ನಿರ್ಣಯ ಕೈಗೊಂಡಿದ್ದಾರೆ.
ಲಿಂಗಾಯತ,ಒಕ್ಕಲಿಗ ಸಮುದಾಗಳು ಜಾತಿ ಗಣತಿ ವರದಿ ಬಿಡುಗಡೆ ವಿರೋಧಿಸಿದರೆ..ಇತ್ತ ಹಿಂದುಳಿದ,ದಲಿತ ಸಮುದಾಗಳು ವರದಿ ಜಾರಿ ಆಗಬೇಕು ಎಂದು ಒತ್ತಯಿಸಿವೆ.ವೀರಶೈವ ಲಿಂಗಾಯತ ಮಹಾಸಭಾದ ಸಮಾವೇಶ ನಂತರ ಅಲರ್ಟ್ ಆದ ದಲಿತ ಸಂಘಟನೆಗಳು ನಾವು ಕೂಡಾ ದೊಡ್ಡ ಮಟ್ಟದಲ್ಲಿ ಅಹಿಂದಾ ಸಮಾವೇಶ ಮಾಡಬೇಕು ಎಂದು ಸಿದ್ಧತೆ ನಡಿಸಿದ್ದಾರೆ. ಹೌದು ಅಹಿಂದಾ ಸಮಾವೇಶವನ್ನು ಡಿಸೆಂಬರ್ 30 ರಂದು ಚಿತ್ರದುರ್ಗದಲ್ಲಿ ಆಯೋಜನೆ ಮಾಡಿದ್ದಾರೆ.10 ಲಕ್ಷಕ್ಕೂ ಹೆಚ್ಚು ಜನರನ್ನ ಸೇರಿಸಿ ಪಕ್ಷಾತೀತವಾಗಿ ನಾಯಕರನ್ನ ಅಹ್ವಾನಿಸಲು ತಿರರ್ಮಾಣಿಸಿದ್ದಾರೆ.ಸಿಎಂ ಸಿದ್ದರಾಮಯ್ಯ, ಜಮೀರ್ ಅಹ್ಮದ್,ಎಂ ಟಿ ಬಿ ನಾಗರಾಜ್, ಡಾ. ಜಿ ಪರಮೇಶ್ವರ್,ಸೇರಿದಂತೆ ದಲಿತ ಹಾಗೂ ಹಿಂದುಳಿದ ಸಮುದಾಯದನಾಯಕರು, ಸ್ವಾಮೀಜಿಗಳು,ಪಾದ್ರಿ,ಮೌಲ್ವಿಗಳನ್ನ ಕಾರ್ಯಕ್ರಮಕ್ಕೆ ಆಹ್ವಾನಿಸಲು ಮುಂದಾಗಿದ್ದಾರೆ.
ಅಹಿಂದಾ ಸಮಾವೇಶ ಕುರಿತು ಮಾತನಾಡಿದ ಸಚಿವ ಬೈರತಿ ಸುರೇಶ್ ಅಹಿಂದ ಸಮಾವೇಶ ಸರ್ಕಾರದಿಂದ ಮಾಡ್ತಿಲ್ಲ. ನಮ್ಮ ಸಮುದಾಯಗಳೆಲ್ಲಾ ಸೇರಿ ಮಾಡ್ತಿರೋದು. ಅವರವರ ಬೇಡಿಕೆಗಳನ್ನಿಟ್ಟುಕೊಂಡು ಮಾಡ್ತಾರೆ. ಒಕ್ಕಲಿಗ ಲಿಂಗಾಯತರು ಎಲ್ಲಾರು ಮಾಡಬಹುದು. ಜಾತಿಗಣತಿ ಮಾಡೋದು ಆರ್ಥಿಕ, ಸಾಮಾಜಿಕ ಪರಿಸ್ಥಿತಿ ತಿಳಿಯಲು. ಜನಸಂಖ್ಯೆ ಎಷ್ಟಿದೆ ಅಂತಾ ತಿಳಿದುಕೊಳ್ಳೋಕೆ ಅಲ್ಲ. ಮೊದಲು ರಿಪೋರ್ಟ್ ಬರಲಿ, ಆಮೇಲೆ ನೋಡೋಣ ಎಂದು ಜಾತಿಗಣತಿ ಸಮೀಕ್ಷೆ ವಿರೋಧ ಪಡಿಸುವ ಅವರಿಗೆ ಬೈರತಿ ತಿರುಗೇಟು ನೀಡಿದರು. ಒಟ್ಟಾರೆ ಜಾತಿ ಗಣತಿಗೆ ರಾಜ್ಯದಲ್ಲಿ ಪರ ವಿರೋಧಗಳು ವ್ಯಕ್ತವಾಗುತ್ತಿವೆ.ಸಮಾವೇಶಗಳ ಭರಾಟೆ ಜೋರಾಗಿವೆ. ಕಾಂಗ್ರೆಸ್ ಸರ್ಕಾರಕ್ಕೆ ಜಾತಿ ಗಣತಿ ತೊಡಾಕುಗುವ ಸಾಧ್ಯತೆ ಇದೆ..ವರದಿ ಜಾರಿ ಮಾಡಿದರೆ ಪ್ರಭಲ ಸಮುದಾಯಗಳ ಕೆಂಗಣ್ಣಿಗೆ ಗುರಿ ಆಗುವ ಸಂಭವ ಇದೆ. ಇನ್ನೂ ವರದಿ ಜಾರಿ ಮಾಡಲಿಲ್ಲ ಅಂದ್ರೆ ದಲಿತ,ಹಿಂದುಳಿದ ಸಮುದಾಗಳ ಕೆಂಗಣ್ಣಿಗೆ ಗುರಿ ಅಗುವ ಆತಂಕವು ಇದೆ..ಈ ಹಿನ್ನಲೆ ಸರ್ಕಾರ ಯಾವ ನಿರ್ಧಾರ ಕೈಗೊಳ್ಳುತ್ತೋ ಎಂಬುದನ್ನ ಕಾದು ನೋಡಬೇಕಾಗಿದೆ.