ಉದ್ಯಮಿ ಪ್ರದೀಪ್ ( pradeep )ಆತ್ಮಹತ್ಯೆ ವಿಚಾರಕ್ಕೆ ಸಂಬಂಧಿಸಿದಂತೆ ಬೆಂಗಳೂರಿನಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ (d.k shivkumar) ಪ್ರತಿಕ್ರಿಯೆ ನೀಡಿದ್ದಾರೆ.
ಶಾಸಕರ ದುರ್ವರ್ತನೆಯಿಂದ ಅನೇಕ ಸಾವುಗಳು ಆಗುತ್ತಿವೆ. ಇದನ್ನ ಕೊನೆ ಮಾಡಬೇಕು. ಇದಕ್ಕಾಗಿ ಜನರ ಧ್ವನಿ, ಭಾವನೆ ತಿಳಿಸಬೇಕಾಗಿದೆ. ಕಾನೂನು ಬದ್ಧವಾಗಿ ಹೋರಾಟ ಮಾಡಬೇಕಿದೆ. ಕಾನೂನಿನ ಮುಂದೆ ಎಲ್ಲರೂ ಒಂದೇ ಅರವಿಂದ ಲಿಂಬಾವಳಿ ಬೇರೆ ಅಲ್ಲ ,ಡಿ.ಕೆ.ಶಿವಕುಮಾರ್ ಬೇರೆ ಅಲ್ಲ, ಈ ಸರ್ಕಾರ ಎಲ್ಲರನ್ನೂ ರಕ್ಷಣೆ ಮಾಡ್ಕೊಂಡು ಬಂದಿದೆ. ಲಂಚಕ್ಕೆ, ಮಂಚಕ್ಕೆ, ಇಂತಹ ಸಾವಿಗೆ ರಕ್ಷಣೆ ಮಾಡ್ಕೊಂಡು ಬಂದಿದೆ. ಇದನ್ನು ಓದಿ :- ||SIDDESHWARA || ಸಿದ್ದೇಶ್ವರ ಶ್ರೀ ಅಂತ್ಯಕ್ರಿಯೆಗೆ 5 ಕ್ವಿಂಟಾಲ್ ಶ್ರೀಗಂಧ ಸಮರ್ಪಿಸಿದ ಭಕ್ತ !
ಕಾನೂನಿನ ಶಿಕ್ಷೆಗೆ ಒಳಗಾಗಲೇ ಬೇಕಿದೆ. ಆತ್ಮಹತ್ಯೆಗೆ ಶರಣಾದ ಪ್ರದೀಪ್ ಅವರ ಹುಡ್ಗ. ಅವರ ಕೈಯಲ್ಲಿ ನಾವೇನಾದರೂ ಬರೆಸಿದ್ದೀವಾ..? ನಾವೇನಾದರೂ ಷಡ್ಯಂತ್ರದಲ್ಲಿ ಭಾಗಿಯಾಗಿದ್ದರೆ ಹೇಳಲಿ. ಕಾಂಗ್ರೆಸ್ ನ ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಯಾರಾದರೂ ಇದ್ದರೆ ಹೇಳಲಿ ನೋ ಪ್ರಾಬ್ಲಂ. ಎಲ್ಲರಿಗೂ ಏನು ಕಾನೂನಿದ್ಯೋ ಅದರಂತೆ ತನಿಖೆಗೊಳಗಾಗಬೇಕು ಹಾಗೂ ಶಿಕ್ಷೆಗೊಳಗಾಬೇಕು ಹೇಳಿದ್ರು.
ಇದನ್ನು ಓದಿ :- ರಾಮನಗರವನ್ನು ಜಿಲ್ಲೆಯನ್ನಾಗಿ ಮಾಡಿದ್ದು ಕುಮಾರಣ್ಣ – ನಿಖಿಲ್ ಕುಮಾರಸ್ವಾಮಿ ಟಾಂಗ್