16 ನೇ ಆವೃತ್ತಿಯ ಐ ಪಿ ಎಲ್ ಕಪ್ ಯಾರದ್ದು ಎಂಬ ಪ್ರಶ್ನೆಗೆ ನಿನ್ನೆ ತೆರೆ ಬಿದ್ದಿದೆ, ನಿನ್ನೆ ಮಳೆಯ ನಡುವೆಯೂ ನಡೆದಿದ್ದ, ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಗುಜರಾತ್ ಟೈಟಾನ್ಸ್ ನಡುವಿನ ಐಪಿಎಲ್ 2023 ರ ಫೈನಲ್ ಪಂದ್ಯದಲ್ಲಿ ಮಹೇಂದ್ರ ಸಿಂಗ್ ಧೋನಿ ತಂಡ ಐದನೇ ಬಾರಿ ಕಪ್ ಹಿಡಿದು ಸಂಭ್ರಮಿಸಿದೆ. ಈ ಸೀಸನ್ನ ಕ್ರಿಕೆಟ್ ಉನ್ಮಾದದ ನಡುವೆ ಕ್ರಿಕಿಟ್ ಅಭಿಮಾನಿಗಳ ಹಾಟ್ ಫೇವರಿಟ್ ಆಗಿ ಬಿರಿಯಾನಿ ಹೊರಹೊಮ್ಮಿದೆ ಎಂದು ಸ್ವಿಗ್ಗಿ ಘೋಷಿಸಿದೆ.
ಆಹಾರ ವಿತರಣಾ ಅಪ್ಲಿಕೇಶನ್ ಸ್ವಿಗ್ಗಿ, ಸೋಮವಾರ ಟ್ವೀಟ್ನಲ್ಲಿ ಈ ಬಗ್ಗೆ ಮಾಹಿತಿ ನೀಡಿದ್ದು, ಈ ಸೀಸನ್ ವೇಳೆ ಬಿರಿಯಾನಿಯ 12 ಮಿಲಿಯನ್ ಆರ್ಡರ್ಗಳನ್ನು ಪಡದಿರುವುದಾಗಿ, ತನ್ನ ಅಪ್ಲಿಕೇಶನ್ನಲ್ಲಿ ನಿಮಿಷಕ್ಕೆ 212 ಬಿರಿಯಾನಿಗಳನ್ನು ವಿತರಿಸಿರುವುದಾಗಿದೆ ಎಂದು ಬಹಿರಂಗಪಡಿಸಿದೆ.”212 BPM (ನಿಮಿಷಕ್ಕೆ ಬಿರಿಯಾನಿಗಳು) ನಲ್ಲಿ 12 ಮಿಲಿಯನ್ಗಿಂತಲೂ ಹೆಚ್ಚು ಆರ್ಡರ್ಗಳೊಂದಿಗೆ ಈ ಋತುವಿನಲ್ಲಿ ಹೆಚ್ಚು ಆರ್ಡರ್ ಮಾಡಿದ ಆಹಾರ ಪದಾರ್ಥಕ್ಕಾಗಿ ಬಿರಿಯಾನಿ ಟ್ರೋಫಿಯನ್ನು ಗೆದ್ದಿದೆ” ಎಂದು ಸ್ವಿಗ್ಗಿ ಕಂಪನಿ ಘೋಷಿಸಿದೆ.
2020 ರ ಐಪಿಎಲ್ ಸಮಯದಲ್ಲಿ, ಚಿಕನ್ ಬಿರಿಯಾನಿ, ಬಟರ್ ನಾನ್ ಮತ್ತು ಮಸಾಲಾ ದೋಸೆ ಮೊದಲ ಮೂರು ಆದ್ಯತೆಯ ಭಕ್ಷ್ಯಗಳೊಂದಿಗೆ ಆರ್ಡರ್ಗಳಲ್ಲಿ ಶೇಕಡಾ 30 ರಷ್ಟು ಏರಿಕೆ ಕಂಡಿದೆ ಎಂದು ಸ್ವಿಗ್ಗಿ ಹೇಳಿದೆ. ಐಪಿಎಲ್ ವಿಶೇಷ ಮೆನುಗಳು, ವಿಶೇಷವಾಗಿ ಕಾಂಬೊಗಳು ಹಿಟ್ ಆಗಿವೆ ಎಂದು ಕಂಪನಿಯು ಹಂಚಿಕೊಂಡಿದೆ.
ವರದಿ :- ಸುಚಿತ್ರ ನಿಂಗೇಗೌಡ