ಬೆಂಗಳೂರು : ಇಷ್ಟುದಿನ ಮೆಟ್ರೋ ಆವರಣದಲ್ಲಿ ಕ್ಯಾಮರಾ ಬಳಕೆ, ಚಿತ್ರೀಕರಣಕ್ಕೆ ಅವಕಾಶ ಸಿಗದೇ ಚಾನ್ಸ್‌ಗಾಗಿ ಕಾಯ್ತಿದ್ದ ಚಿತ್ರರಂಗದ ಮಂದಿಗೆ ಬಿಎಂಆರ್‌ಸಿಎಲ್ (BMRCL) ಗುಡ್‌ನ್ಯೂಸ್ ಕೊಟ್ಟಿದೆ. ದೆಹಲಿ, ಚೆನ್ನೈ ಮೆಟ್ರೋ ಬಳಿಕ ಬೆಂಗಳೂರಿನ ನಮ್ಮ ಮೆಟ್ರೋದಲ್ಲೂ ಸಿನಿಮಾ ಹಾಗೂ ಸೀರಿಯಲ್‌ಗಳ ಶೂಟಿಂಗ್‌ಗೆ ಅನುಮತಿ ಕೊಡೋಕೆ ಬಿಎಂಆರ್‌ಸಿಎಲ್ (BMRCL) ಮುಂದಾಗಿದ್ದು, ಇನ್ಮುಂದೆ ಬೆಂಗಳೂರಿನ ಮೆಟ್ರೋ ನಿಲ್ದಾಣಗಳು, ಮೆಟ್ರೋ ರೈಲುಗಳಲ್ಲೂ ಬಣ್ಣದ ಲೋಕದ ಕಲರವ ಕೇಳುವ ಕಾಲ ಹತ್ತಿರವಾಗ್ತಿದೆ.
ಬೆಂಗಳೂರಿನ ಮೆಟ್ರೋಗಳಲ್ಲಿ ಚಿತ್ರೀಕರಣಕ್ಕೆ ಅವಕಾಶ ಸಿಕ್ಕಿದ್ದು ಈ ಬಗ್ಗೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಉಪಾಧ್ಯಕ್ಷೆ ಪ್ರಮೀಳಾ ಜೋಶಾಯಿ ಅವರು ಸಂತಸ ವ್ಯಕ್ತಪಡಿಸಿದ್ದಾರೆ. ಇದು ತುಂಬಾ ಒಳ್ಳೆಯ ವಿಚಾರ ಕನ್ನಡ ಚಲನಚಿತ್ರರಂಗ ಇದನ್ನು ಸ್ವಾಗತ ಮಾಡ್ತಿವಿ. 25% ರಿಯಾಯಿತಿ ನೀಡಿರೋದ್ರಿಂದ ಕನ್ನಡ ಚಿತ್ರರಂಗ ಬೆಳೆಯುತ್ತದೆ ಮತ್ತು ಬೇರೆಬೇರೆ ಭಾಷೆಯ ಚಲನಚಿತ್ರಗಳು ನಮ್ಮ ರಾಜ್ಯದಲ್ಲಿ ಚಿತ್ರೀಕರಣ ಆಗುತ್ತದೆ ಎಂದು ತಿಳಿಸಿದರು.
ಇನ್ನು ಮೆಟ್ರೋ ಆವರಣ, ಮೆಟ್ರೋ ರೈಲುಗಳಲ್ಲಿ ಶೂಟಿಂಗ್ ಮಾಡಲು ಒಂದು ದಿನಕ್ಕೆ 6 ಲಕ್ಷ ರೂಪಾಯಿ ಬಾಡಿಗೆ ನಿಗದಿ ಮಾಡಲಾಗಿದೆ. ಕನ್ನಡದ ಚಿತ್ರಗಳಿಗೆ 25% ರಿಯಾಯಿತಿ ಕೊಟ್ಟಿರೋ ಬಿಎಂಆರ್‌ಸಿಎಲ್ (BMRCL), ಇತರೆ ಭಾಷೆಗಳ ಚಿತ್ರೀಕರಣಕ್ಕೆ 6 ಲಕ್ಷ ಹಣವನ್ನ ವಸೂಲಿ ಮಾಡೋಕೆ ಪ್ಲಾನ್ ಮಾಡಿದೆ. ಇನ್ನು ಲಾ ಅಂಡ್ ಅರ್ಡರ್ ಸಮಸ್ಯೆ ಆಗುವ, ಸಮಾಜಕ್ಕೆ ಹಾನಿ ಉಂಟಾಗುವ, ಜನರ ಭಾವನೆಗೆ ಧಕ್ಕೆ ಉಂಟಾಗುವ ಯಾವುದೇ ಸಿನಿಮಾ ಅಥವಾ ಸೀರಿಯಲ್ ಶೂಟಿಂಗ್‌ಗೆ ನಿರ್ಬಂಧ ಹೇರಿದ್ದು, ಪೀಕ್ ಅವರ್‌ನಲ್ಲಿ ಪ್ರಯಾಣಿಕರಿಗೆ ಸಮಸ್ಯೆಯಾಗದಂತೆ ಅವಕಾಶ ಕೊಡೋಕೆ ತಯಾರಿ ನಡೆದಿದೆ. ಇನ್ನು ಶೂಟಿಂಗ್‌ನಿಂದ ಬಂದ ಹಣವನ್ನ ನಾನ್‌ಫೇರ್ ಇನ್‌ಕಮ್ ಅಂತಾ ಪರಿಗಣಿಸಿ ಮೆಟ್ರೋದರ ಏರಿಕೆಯಾದ್ರೆ ಅಂತಾ ಸಮಯದಲ್ಲಿ ಪ್ರಯಾಣಿಕರಿಗೆ ಸಬ್ಸಿಡಿ ರೂಪದಲ್ಲಿ ನೀಡೋಕು (BMRCL) ಸಿದ್ಧತೆ ನಡೆಸಿದೆ.
ಶೂಟಿಂಗ್ ಮಾಡೋಕೆ ಮೆಟ್ರೋದಲ್ಲಿ ಪಾಲಿಸಬೇಕಾದ ಷರತ್ತುಗಳೇನು?
ಶೂಟಿಂಗ್‌ಗೆ ಮುನ್ನ ಅಪ್ಲೀಕೇಶನ್, ಸ್ಕ್ರಿಪ್ಟ್ ಸಲ್ಲಿಕೆ ಕಡ್ಡಾಯ
ಶೂಟಿಂಗ್ ಮಾಡುವಾಗ ಡೋರ್ ಓಪನ್ ಮಾಡುವ ಹಾಗಿಲ್ಲ
ಪೀಕ್ ಅವರ್ ಇರೋ ಟೈಮ್‌ನಲ್ಲಿ ಶೂಟ್ ಮಾಡುವ ಹಾಗಿಲ್ಲ
BMRCL ಒಬ್ಬ ಸಿಬ್ಬಂದಿ ಶೂಟಿಂಗ್ ಮಾಡುವಾಗ ಜೊತೆ ಇರ್ತಾರೆ
ಅನುಮತಿ ನೀಡಿರೋ ಸ್ಥಳದಲ್ಲಿ ಮಾತ್ರ ಶೂಟಿಂಗ್ ಮಾಡಬೇಕು
ಟೀಂನಲ್ಲಿರೋ ಮಹಿಳೆಯರ ಜವಾಬ್ದಾರಿ ತಂಡದ್ದೇ ಆಗಿರುತ್ತೆ
ಚಿತ್ರೀಕರಣ ವೇಳೆ ಏನೇ ಅನಾಹುತ ಆದ್ರೂ ಚಿತ್ರತಂಡವೇ ಹೊಣೆ