11 ಬೌಂಡರಿ, 7 ಸಿಕ್ಸ್ – ಶತಕಸಿಡಿಸಿದ ದಾಖಲೆ ವೀರ ಸೂರ್ಯಕುಮಾರ್

ದಾಖಲೆಗಳ ಸರದಾರ ಸೂರ್ಯಕುಮಾರ್ ಯಾದವ್ ( SURYA KUMAR YADAV ) ಇಂದು ಭರ್ಜರಿ ಶತಕ ಸಿಡಿಸುವ ಮೂಲಕ ಮತ್ತೊಂದು ದಾಖಲೆ ಬರೆದಿದ್ದಾರೆ.

ದಾಖಲೆಗಳ ಸರದಾರ ಸೂರ್ಯಕುಮಾರ್ ಯಾದವ್ ( SURYA KUMAR YADAV ) ಇಂದು ಭರ್ಜರಿ ಶತಕ ಸಿಡಿಸುವ ಮೂಲಕ ಮತ್ತೊಂದು ದಾಖಲೆ ಬರೆದಿದ್ದಾರೆ. ಕಿವೀಸ್ ಪ್ರವಾಸ ಕೈಗೊಂಡಿರುವ ಭಾರತ ತಂಡ ದ್ವಿಪಕ್ಷೀಯ ಸರಣಿಯ ಮೊದಲ ಪಂದ್ಯದಲ್ಲೇ ಅಬ್ಬರಿಸಿರುವ ಸೂರ್ಯ ಕಿವೀಸ್ ಪಡೆಯ ಬೌಲರ್‌ ಗಳ ಬೆವರಿಳಿಸಿದ್ದಾರೆ.

ಕೇವಲ 49 ಎಸೆತಗಳಲ್ಲಿ ಭರ್ಜರಿ ಶತಕ ಸಿಡಿಸಿ ಮಿಂಚಿದ್ದಾರೆ. ಇದು ಟಿ20ನಲ್ಲಿ ಸೂರ್ಯಕುಮಾರ್ ಸಿಡಿಸಿದ 2ನೇ ಶತಕವಾಗಿದ್ದು, ರೋಹಿತ್ ಶರ್ಮಾ ನಂತರ ಅತೀ ಕಡಿಮೆ ಎಸೆತಗಳಲ್ಲಿ ಶತಕ ಸಿಡಿಸಿದ 2ನೇ ಭಾರತೀಯನೆಂಬ ಖ್ಯಾತಿ ಪಡೆದಿದ್ದಾರೆ. ಇದನ್ನೂ ಓದಿ :– ಹೃದಯಾಘಾತಕ್ಕೊಳಗಾಗಿದ್ದ ಬೆಂಗಾಳಿ ನಟಿ ಐಂದ್ರಿಲಾ ಶರ್ಮಾ ಇನ್ನಿಲ್ಲ

ಇಂದು ನ್ಯೂಜಿಲೆಂಡ್ ವಿರುದ್ಧ ನಡೆದ ಪಂದ್ಯದಲ್ಲಿ 51 ಎಸೆತಗಳನ್ನು ಎದುರಿಸಿದ ಸೂರ್ಯಕುಮಾರ್ ಅಜೇಯ 111 ರನ್ ಚಚ್ಚಿದ್ದಾರೆ. ಕಿವೀಸ್ ಪಡೆಯ ವಿರುದ್ಧ ಆರಂಭದಿಂದಲೇ ಅಬ್ಬರಿಸಲು ಮುಂದಾದ ಸೂರ್ಯಕುಮಾರ್ ಮೊದಲ 32 ಎಸೆತಗಳಲ್ಲಿ 50 ರನ್ ಸಿಡಿದರೆ, ಮುಂದಿನ 19 ಎಸೆತಗಳಲ್ಲಿ 61 ರನ್ ಚಚ್ಚಿದ್ದಾರೆ. 7 ಸಿಕ್ಸರ್, 11 ಬೌಂಡರಿಗಳು ಇದರಲ್ಲಿ ಸೇರಿವೆ. ಈ ಮೂಲಕ ಭಾರತ 65 ರನ್ ಗಳ ಭರ್ಜರಿ ಗೆಲುವು ಸಾಧಿಸಿದೆ.

ಇದನ್ನೂ ಓದಿ :– ಇದು ನಿಜವಾದ ಅಹಿಂದ ಕಾರ್ಯಕ್ರಮ – ಸಿದ್ದರಾಮಯ್ಯಗೆ ಟಾಂಗ್ ನೀಡಿದ ಸಿಎಂ ಬೊಮ್ಮಾಯಿ

Related Articles

Leave a Reply

Your email address will not be published. Required fields are marked *

Back to top button
Close

Adblock Detected

Support Free Content We use ads to keep our content free for you. Please allow ads and let sponsors fund your surfing. Thank you!