3 ವರ್ಷಕ್ಕೆ 1800 ಕೋಟಿ ರೂ – Ronaldo ಮುಂದೆ ಬಿಗ್ ಆಫರ್ ಇಟ್ಟ ಸೌದಿ ಮೂಲದ ಕ್ಲಬ್

Cristiano ronaldo ನನ್ನು ತಮ್ಮ ತೆಕ್ಕೆಗೆ ಹಾಕಿಕೊಳ್ಳಲು ಸೌದಿ ಅರೇಬಿಯಾ (Arabia) ದ ಕ್ಲಬ್ ಅಲ್ ನಾಸ್ರ್ ಎಫ್ ಸಿ ಪ್ರಯತ್ನ ಪಡುತ್ತಿದೆ. ವರದಿಯ ಪ್ರಕಾರ ಈ ಕ್ಲಬ್ ರೊನಾಲ್ಡೊ ಜೊತೆ 225 ಮಿಲಿಯನ್ ಅಂದರೆ ಸುಮಾರು 18.37 ಶತಕೋಟಿ ರೂ.ಗಳ ಒಪ್ಪಂದಕ್ಕೆ ಮುಂದಾಗಿದೆ.

Cristiano ronaldo ನನ್ನು ತಮ್ಮ ತೆಕ್ಕೆಗೆ ಹಾಕಿಕೊಳ್ಳಲು ಸೌದಿ ಅರೇಬಿಯಾ ( Saudhi Arabia) ದ ಕ್ಲಬ್ ಅಲ್ ನಾಸ್ರ್ ಎಫ್ ಸಿ ಪ್ರಯತ್ನ ಪಡುತ್ತಿದೆ. ವರದಿಯ ಪ್ರಕಾರ ಈ ಕ್ಲಬ್ ರೊನಾಲ್ಡೊ ಜೊತೆ 225 ಮಿಲಿಯನ್ ಅಂದರೆ ಸುಮಾರು 18.37 ಶತಕೋಟಿ ರೂ.ಗಳ ಒಪ್ಪಂದಕ್ಕೆ ಮುಂದಾಗಿದೆ. ಪ್ರಸ್ತುತ QATAR ನಲ್ಲಿ ನಡೆಯುತ್ತಿರುವ FIFA WORLDCUP ನಲ್ಲಿ ಪೋರ್ಚುಗಲ್ ತಂಡವನ್ನು ಮುನ್ನಡೆಸುತ್ತಿರುವ ನಾಯಕ ಕ್ರಿಸ್ಟಿಯಾನೊ ರೊನಾಲ್ಡೊ ಆಡಿದ ಮೊದಲ ಪಂದ್ಯದಲ್ಲೇ ತಂಡಕ್ಕೆ ಅದ್ಭುತ ಗೆಲುವು ತಂದುಕೊಡುವುದರೊಂದಿಗೆ ಪಂದ್ಯಾವಳಿಯನ್ನು ಗೆಲುವಿನೊಂದಿಗೆ ಆರಂಭಿಸಿದ್ದಾರೆ.

ಈ ಪಂದ್ಯದಲ್ಲಿ ಗೋಲು ಗಳಿಸುವುದರೊಂದಿಗೆ ಸತತ 5 ವಿಶ್ವಕಪ್ ಗಳಲ್ಲಿ ಗೋಲು ಗಳಿಸಿದ ದಾಖಲೆಯನ್ನು ರೊನಾಲ್ಡೊ ಮಾಡಿದ್ದರು. ಆದರೆ ಈ ವಿಶ್ವಕಪ್ ಆರಂಭಕ್ಕೂ ಮುನ್ನ ಈ ಫುಟ್ಬಾಲ್ ದಿಗ್ಗಜ ತನ್ನ ಬದುಕು ನಿರ್ಮಿಸಿದ ಇಂಗ್ಲಿಷ್ ಕ್ಲಬ್ Manchester United ಜೊತೆಗೆ ವಿವಾದ ಮಾಡಿಕೊಂಡಿದ್ದರಿಂದ ಇಬ್ಬರ ನಡುವಿನ ಸಂಬಂಧ ಹಳಸಿತ್ತು. ಹೀಗಾಗಿ ರೊನಾಲ್ಡೊ ಪರಸ್ಪರ ಒಪ್ಪಿಗೆಯ ಮೇರೆಗೆ ಕ್ಲಬ್ ನಿಂದ ಹೊರಬಂದಿದ್ದರು. ಹೀಗಿರುವಾಗ ರೊನಾಲ್ಡೊ ಸದ್ಯ ಯಾವ ಕ್ಲಬ್ ಜೊತೆಗೆ ಒಪ್ಪಂದ ಮಾಡಿಕೊಂಡಿಲ್ಲ. ಈ ನಡುವೆ ಸೌದಿ ಅರೇಬಿಯಾದ ಕ್ಲಬ್ ವೊಂದು ರೊನಾಲ್ಡೊ ಜೊತೆಗೆ ದಾಖಲೆಯ ಮೊತ್ತಕ್ಕೆ ಒಪ್ಪಂದ ಮಾಡಿಕೊಳ್ಳಲು ಮುಂದಾಗಿದೆ ಎಂಬ ಸುದ್ದಿ ಹೊರಬಿದ್ದಿದೆ. ವಿಶ್ವಕಪ್ ಆರಂಭಕ್ಕೂ ಮೊದಲು, ಕ್ರಿಸ್ಟಿಯಾನೋ ಇಂಗ್ಲೆಂಡ್ನ ದೊಡ್ಡ ಕ್ಲಬ್ ಮ್ಯಾಂಚೆಸ್ಟರ್ ಯುನೈಟೆಡ್ ನ ಭಾಗವಾಗಿದ್ದರು.

ನಂತರ ಟೂರ್ನಿ ಆರಂಭಕ್ಕೂ ಮುನ್ನ ನೀಡಿದ ಸಂದರ್ಶನವೊಂದರಲ್ಲಿ ಕ್ಲಬ್ ಮಾಲೀಕರು, ಅಧಿಕಾರಿಗಳು ಹಾಗೂ ತಂಡದ ಮ್ಯಾನೇಜರ್ ವಿರುದ್ಧ ರೊನಾಲ್ಡೊ ದೊಡ್ಡ ಆರೋಪ ಮಾಡಿದ್ದರು. ಆ ಬಳಿಕ ಈ ಸಂದರ್ಶನ ಇಡೀ ಫುಟ್ಬಾಲ್ (Foot ball)  ಲೋಕದಲ್ಲೇ ಬಿರುಗಾಳಿ ಎಬ್ಬಿಸಿದ್ದು, ಸ್ಟಾರ್ ಫುಟ್ಬಾಲ್ ಆಟಗಾರನ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಕ್ಲಬ್ ಹೇಳಿತ್ತು. ಬಳಿಕ ರೊನಾಲ್ಡೊರನ್ನು ತಂಡದಿಂದ ಕೈಬಿಟ್ಟಿರುವುದಾಗಿ ಕ್ಲಬ್ ತನ್ನ ಹೇಳಿಕೆಯಲ್ಲಿ ತಿಳಿಸಿತ್ತು. ಸದ್ಯ ಮ್ಯಾಂಚೆಸ್ಟರ್ ಯುನೈಟೆಡ್ ಕ್ಲಬ್ ತೊರೆದಿರುವ ರೊನಾಲ್ಡೊ ಈಗ ಯಾವುದೇ ಕ್ಲಬ್ ಜೊತೆ ಒಪ್ಪಂದ ಮಾಡಿಕೊಂಡಿಲ್ಲ. ಸದ್ಯಕ್ಕೆ ವಿಶ್ವಕಪ್ ಮೇಲೆ ಸಂಪೂರ್ಣ ಗಮನ ಕೇಂದ್ರೀಕರಿಸಿರುವ ರೊನಾಲ್ಡೊ ತಮ್ಮ ದೇಶವನ್ನು ಮೊದಲ ಬಾರಿಗೆ ವಿಶ್ವ ಚಾಂಪಿಯನ್ ಮಾಡಲು ಪ್ರಯತ್ನಿಸುತ್ತಿದ್ದಾರೆ. ಆದಾಗ್ಯೂ, ರೊನಾಲ್ಡೊರನ್ನು ತಮ್ಮ ತಂಡಕ್ಕೆ ಸೇರಿಸಿಕೊಳ್ಳಲು ಹಲವು ಕ್ಲಬ್ ಗಳು ತಮ್ಮ ಪ್ರಯತ್ನವನ್ನು ಆರಂಭಿಸಿವೆ. ಇದನ್ನೂ ಓದಿ : – ಒಂದೇ ಓವರ್ ನಲ್ಲಿ 7 ಸಿಕ್ಸ್ ಸಿಡಿಸಿ ದಾಖಲೆ ಬರೆದ ಋತುರಾಜ್ ಗಾಯಕ್ವಾಡ್…!

Cristiano Ronaldo: Manchester United future uncertain but how much is Portuguese to blame for club's struggles? | Football News | Sky Sports

ರೊನಾಲ್ಡೊಗೆ ಈಗ 37 ವರ್ಷ. ಆದರೂ ಕೂಡ ಈ ದಿಗ್ಗಜ ಆಟಗಾರನಿಗೆ ಬೇಡಿಕೆ ತಗ್ಗಿಲ್ಲ. ವಯಸ್ಸಾದಂತೆ ತನ್ನ ಮೌಲ್ಯವನ್ನು ಹೆಚ್ಚಿಸಿಕೊಳ್ಳುತ್ತಿರುವ ರೊನಾಲ್ಡೊರನ್ನು ತಮ್ಮ ತೆಕ್ಕೆಗೆ ಹಾಕಿಕೊಳ್ಳಲು ಸೌದಿ ಅರೇಬಿಯಾದ ಕ್ಲಬ್ ಅಲ್ ನಾಸ್ರ್ ಎಫ್ ಸಿ ಪ್ರಯತ್ನ ಮಾಡುತ್ತಿದೆ. ವರದಿಯ ಪ್ರಕಾರ ಈ ಕ್ಲಬ್ ರೊನಾಲ್ಡೊ ಜೊತೆ 225 ಮಿಲಿಯನ್ ಅಂದರೆ ಸುಮಾರು 18.37 ಶತಕೋಟಿ ರೂ.ಗಳ ಒಪ್ಪಂದಕ್ಕೆ ಮುಂದಾಗಿದೆ. ಈ ಸೌದಿ ಕ್ಲಬ್ ರೊನಾಲ್ಡೊ ಅವರೊಂದಿಗೆ 3 ವರ್ಷಗಳ ಒಪ್ಪಂದಕ್ಕೆ ಸಹಿ ಹಾಕಲು ಸಿದ್ಧತೆ ನಡೆಸಿದೆ ಎಂದು ಬ್ರಿಟಿಷ್ ಪತ್ರಕರ್ತ ಬೆನ್ ಜೇಕಬ್ಸ್ ತಮ್ಮ ವರದಿಯಲ್ಲಿ ತಿಳಿಸಿದ್ದಾರೆ. ಇದರ ಅಡಿಯಲ್ಲಿ, ಅವರಿಗೆ ಪ್ರತಿ ವರ್ಷ 75 ಮಿಲಿಯನ್ ಡಾಲರ್ ಗಳಿಗಿಂತ ಹೆಚ್ಚು ಅಂದರೆ 6 ಶತಕೋಟಿ (600) ರೂಪಾಯಿಗಳಿಗಿಂತ ಹೆಚ್ಚು ವೇತನವನ್ನು ನೀಡಲು ಪ್ರಸ್ತಾಪಿಸಲಾಗಿದೆ ಎಂದು ವರದಿಯಾಗಿದೆ.

ಇದನ್ನೂ ಓದಿ : –  ಉರುಗೈ ವಿರುದ್ಧ ಗೆದ್ದು ರೌಂಡ್-16 ಗೆ ಎಂಟ್ರಿ ಕೊಟ್ಟ ಪೋರ್ಚುಗಲ್

Related Articles

Leave a Reply

Your email address will not be published. Required fields are marked *

Back to top button
Close

Adblock Detected

Support Free Content We use ads to keep our content free for you. Please allow ads and let sponsors fund your surfing. Thank you!