FRANCE ತನ್ನ ಮೊದಲ ಪಂದ್ಯದಲ್ಲಿ ಆಸ್ಟ್ರೇಲಿಯಾ (Australia) ತಂಡವನ್ನು 4-1 ಗೋಲುಗಳ ಅಂತರದಿಂದ ಗೆದ್ದು ಬೀಗಿದ ಬಳಿಕ ತನ್ನ ಓಟವನ್ನು ಮುಂದುವರೆಸಿದೆ. ನಿನ್ನೆ ಡೆನ್ಮಾರ್ಕ್ (Denmark) ವಿರುದ್ಧದ ಪಂದ್ಯವನ್ನು 2-1 ರಿಂದ ಕೈವಶ ಮಾಡಿಕೊಂಡು ಇದೀಗ FIFA WORLD CUP ನ ನಾಕೌಟ್ ಹಂತಕ್ಕೆ ಲಗ್ಗೆ ಇಟ್ಟಿತು.
ಗೆಲುವಿಗಾಗಿ ಜಿದ್ದಾಜಿದ್ದಿನಲ್ಲಿ ಎರಡೂ ತಂಡಗಳು ಹೋರಾಡಿದವು. ಆದರೆ ಅಂತಿಮವಾಗಿ ಫ್ರಾನ್ಸ್ ಗೆಲುವಿನ ಕೇಕೆ ಹಾಕಿತು. ಕರೀಮ್ ಬೆಂಜೆಮಾ (Karim Benzema) ಕಾಲಿನ ಗಾಯದಿಂದಾಗಿ ಪಂದ್ಯದಿಂದ ಹೊರಗುಳಿದ ಕಾರಣ ಕೈಲಿಯನ್ ಎಂಬಪ್ಪೆ (Kylian Mbappe) ಪ್ರಾನ್ಸ್ ತಂಡವನ್ನು ಮುನ್ನಡಿಸಿದರು. ಮೊದಲಾರ್ಧದಲ್ಲಿ ಎರಡೂ ತಂಡಗಳು ಗೋಲು ಗಳಿಸಲಿಲ್ಲ. ನಂತರ ರಣೋತ್ಸಾಹದಿಂದ ಮುನ್ನುಗ್ಗಿದ ಕೈಲಿಯನ್ ಎಂಬಪ್ಪೆ 61 ನೇ ನಿಮಿಷದಲ್ಲಿ ಮೊದಲ ಗೋಲು ಬಾರಿಸಿ ಮುನ್ನಡೆ ತಂದುಕೊಟ್ಟರು. ಆಟ ಸಾಗುತ್ತಿದಂತೆ ಡೆನ್ಮಾರ್ಕ್ ಡಿಫೆಂಡರ್ ಆಂಡ್ರಿಯಾಸ್ ಕ್ರಿಸ್ಟೇನ್ಸ ನ್ 68ನೇ ಗೋಲು ಗಳಿಸಿ ತಂಡಕ್ಕೆ 1-1 ರಿಂದ ಸಮಬಲ ಸಾಧಿಸಿದರು. ನಿಮಿಷದಲ್ಲಿ ಹೆಡರ್ ಮೂಲಕ ಚೆಂಡಿನ ಮೇಲೆ ಬಿಗಿ ಹಿಡಿತ ಸಾಧಿಸಿದ ಎಂಬಪ್ಪೆ 85ನೇ ನಿಮಿಷದಲ್ಲಿ ಡೆನ್ಮಾರ್ಕ್ ನ ಗೋಲ್ ಕೀಪರ್ ಕ್ಯಾಸ್ಪರ್ ಸ್ಮಿಚೆಲ್ ತಪ್ಪಿಸಿ ಮತ್ತೊಂದು ಗೋಲು ದಾಖಲಿಸುವಲ್ಲಿ ಯಶಸ್ವಿಯಾದರು. ಇದಾದ ನಂತರ ಫ್ರಾನ್ಸ್ 2-1 ರಿಂದ ಮುನ್ನಡೆಯಲ್ಲಿ ಸಾಗಿ ಗೆಲುವು ಪಡೆಯಿತು.
ಇದನ್ನೂ ಓದಿ : – DO OR DIE ಪಂದ್ಯದಲ್ಲಿ ಮಿಂಚಿದ MESSI – ನಾಕೌಟ್ ರೇಸ್ ನಲ್ಲಿ ಉಳಿದುಕೊಂಡ ಅರ್ಜೆಂಟೀನಾ