ಭಾರತ-ಐರ್ಲೆಂಡ್ 2ನೇ ಟಿ-20 ಕ್ರಿಕೆಟ್ ಪಂದ್ಯ – ಟೀಂ ಇಂಡಿಯಾಗೆ 4 ರನ್ ಗಳ ರೋಚಕ ಗೆಲುವು

ಆರಂಭಿಕ ಆಟಗಾರ ದೀಪಕ್ ಹೂಡಾರ ಚೊಚ್ಚಲ ಶತಕದೊಂದಿಗೆ ಟೀಂ ಇಂಡಿಯಾ( INDIA ) ವು ಐರ್ಲೆಂಡ್ ವಿರುದ್ಧ 4 ರನ್ಗಳ ರೋಚಕ ಜಯ ಸಾಧಿಸಿದೆ. 2 ಪಂದ್ಯಗಳ ಸರಣಿಯನ್ನು ಹಾರ್ದಿಕ್ ಪಾಂಡ್ಯ (Hardik Pandya)ಬಳಗ 2-0 ಅಂತರದಲ್ಲಿ ವಶಪಡಿಸಿಕೊಂಡಿದೆ. ಗೆಲುವಿನ ಮೂಲಕ ಸರಣಿಯನ್ನು ಕೈವಶಪಡಿಸಿಕೊಂಡ ಟೀಂ ಇಂಡಿಯಾ ಐರ್ಲೆಂಡ್ ತಂಡಕ್ಕೆ ತವರು ನೆಲದಲ್ಲಿಯೇ ವೈಟ್ ವಾಶ್ ಬಳಿದಿದೆ.

ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾ ದೀಪಕ್ ಹೂಡಾ ಹಾಗೂ ಸಂಜು ಸ್ಯಾಮ್ಸನ್ ಅವರ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ 20 ಓವರಲ್ಲಿ 7 ವಿಕೆಟ್ ಗೆ 225 ರನ್ ಕಲೆ ಹಾಕಿತು. ಬೃಹತ್ ಮೊತ್ತದ ಗುರಿ ಬೆನ್ನತ್ತಿದ ಐರ್ಲೆಂಡ್ ದಿಟ್ಟಪ್ರದರ್ಶನ ನೀಡಿದ ಹೊರತಾಗಿಯೂ 5 ವಿಕೆಟ್ ಗೆ 221 ರನ್ ಗಳಿಸಲಷ್ಟೇ ಶಕ್ತವಾಗಿ ಸೋಲೊಪ್ಪಿಕೊಂಡಿತು. ಇದನ್ನೂ ಓದಿ : –  ಮುಂಬೈ ವಿರುದ್ಧ ಗೆದ್ದು ರಣಜಿ ಟ್ರೋಫಿ ಎತ್ತಿಹಿಡಿದ ಮಧ್ಯಪ್ರದೇಶ


ಸ್ಫೋಟಕ ಬ್ಯಾಟಿಂಗ್ ಆರಂಭಿಸಿದ ಭಾರತ ಆರಂಭದಲ್ಲೇ ಐರ್ಲೆಂಡ್ ವಿರುದ್ಧ ಪ್ರಾಬಲ್ಯ ಸಾಧಿಸಿತು. 2ನೇ ವಿಕೆಟ್ ಗೆ ಜೊತೆಯಾದ ಹೂಡಾ ಮತ್ತು ಸ್ಯಾಮ್ಸನ್ ಬರೋಬ್ಬರಿ 176 ರನ್ ಜೊತೆ ಯಾಟವಾಡಿದರು. ಇದು ಟಿ 20ಯಲ್ಲಿ ಯಾವುದೇ ವಿಕೆಟ್ ಗೆ ಭಾರತೀಯ ಬ್ಯಾಟರ್ ಗಳ ಗರಿಷ್ಠ ಜೊತೆಯಾಟ. ಹೂಡಾ 57 ಎಸೆತಗಳಲ್ಲಿ 9 ಬೌಂಡರಿ, 6 ಸಿಕ್ಸರ್ ಒಳಗೊಂಡ 104 ರನ್ ಬಾರಿಸಿದರು. ಈ ಮೂಲಕ ಭಾರತೀಯರ ಪೈಕಿ ಟಿ20ಯಲ್ಲಿ ಶತಕ ಬಾರಿಸಿದ 4ನೇ ಬ್ಯಾಟರ್ ಎನಿಸಿಕೊಂಡರು. ಇನ್ನು, ಸ್ಯಾಮ್ಸನ್ 42 ಎಸೆತಗಳಲ್ಲಿ 77 ರನ್ ಸಿಡಿಸಿ ತಮ್ಮ ಆಯ್ಕೆಯನ್ನು ಸಮರ್ಥಿಸಿದರು.

ಇದನ್ನೂ ಓದಿ : –  ಅಂದು ಐಸಿಸಿ ಎಲೈಟ್ ಪ್ಯಾನೆಲ್ ಅಂಪೈರ್ – ಇಂದು ಪಾಕ್ ನಲ್ಲಿ ಚಪ್ಪಲಿ ವ್ಯಾಪಾರಿ

Related Articles

Leave a Reply

Your email address will not be published. Required fields are marked *

Back to top button
Close

Adblock Detected

Support Free Content We use ads to keep our content free for you. Please allow ads and let sponsors fund your surfing. Thank you!