ಫಿಫಾ ವಿಶ್ವಕಪ್ ಟೂರ್ನಿ ಯ ಪ್ರಿ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಲಿಯೋನೆಲ್ ಮೆಸ್ಸಿ ನೇತೃತ್ವದ ಅರ್ಜೆಂಟೀನಾ ತಂಡವು ಆಸ್ಟ್ರೇಲಿಯಾ ( AUSTRILIYA ) ಎದುರು 2-1 ಅಂತರದ ಗೆಲುವು ಸಾಧಿಸುವ ಕ್ವಾರ್ಟರ್ ಫೈನಲ್ ಗೆ ಲಗ್ಗೆಯಿಟ್ಟಿದೆ. ವೃತ್ತಿಜೀವನದ 1000ನೇ ಪಂದ್ಯವನ್ನಾಡಿದ ಲಿಯೋನೆಲ್ ಮೆಸ್ಸಿ, ಫಿಫಾ ವಿಶ್ವಕಪ್ ಟೂರ್ನಿ ಯಲ್ಲಿ ಮೊದಲ ಬಾರಿಗೆ ಗೋಲು ಬಾರಿಸುವ ಮೂಲಕ ತಂಡವನ್ನು ಕ್ವಾರ್ಟರ್ ಫೈನಲ್ ಗೇರಿಸುವಲ್ಲಿ ಯಶಸ್ವಿಯಾಗಿದ್ದಾರೆ. ಕ್ವಾರ್ಟರ್ ಫೈನಲ್ ನಲ್ಲಿ ಅರ್ಜೆಂಟೀನಾ ತಂಡವು ನೆದರ್ಲೆಂಡ್ಸ್ ಎದುರು ಕಾದಾಡಲಿದೆ.
🇵🇹 Cristiano Ronaldo after 1000 games;
⚽️ 725 goals
🎯 216 assists
🏆 31 trophies🇦🇷 Lionel Messi after 1000 games;
⚽️ 789-goals
🎯 348-assists
🏆 41-trophies🔝#FIFAWorldCup Stats #Messi𓃵|#CR7𓃵|#ARG|#ARGAUS pic.twitter.com/cqIOQi6TFc
— FIFA World Cup Stats (@alimo_philip) December 3, 2022
ಇಲ್ಲಿನ ಅಹಮದ್ ಬಿನ್ ಅಲಿ ಸ್ಟೇಡಿಯಂ ನಲ್ಲಿ ನಡೆದ ಪಂದ್ಯದಲ್ಲಿ ಮೆಸ್ಸಿ ಬಾರಿಸಿದ ಗೋಲು, ಅರ್ಜೆಂಟೀನಾ ಗೆಲುವಿನಲ್ಲಿ ಮಹತ್ತರ ಪಾತ್ರವನ್ನು ವಹಿಸಿತು. ವೃತ್ತಿಜೀವನದ 1000ನೇ ಫುಟ್ಬಾಲ್ ( FOOTBALL ) ಪಂದ್ಯವನ್ನಾಡಿದ ಲಿಯೋನೆಲ್ ಮೆಸ್ಸಿ 789ನೇ ಗೋಲು ಬಾರಿಸಿ ಸಂಭ್ರಮಿಸಿದರು. 35 ವರ್ಷದ ಲಿಯೋನೆಲ್ ಮೆಸ್ಸಿ ತಮ್ಮ ವೃತ್ತಿಜೀವನದ 5ನೇ ಫಿಫಾ ವಿಶ್ವಕಪ್ ಪಂದ್ಯವನ್ನಾಡುತ್ತಿದ್ದು, ಐದು ವಿಶ್ವಕಪ್ ಟೂರ್ನಿಗಳ ಪೈಕಿ ಮೆಸ್ಸಿ ಇದೇ ಮೊದಲ ಬಾರಿಗೆ ನಾಕೌಟ್ ಪಂದ್ಯದಲ್ಲಿ ಗೋಲು ಬಾರಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಇದನ್ನೂ ಓದಿ : – ಸಮುದಾಯ ಭವನದ ಉದ್ಘಾಟನೆಗೆ ಕರ್ನಾಟಕದ ಮುಖ್ಯಮಂತ್ರಿಯಾಗಿ ಬಂದು ಭಾಗವಹಿಸ್ತೀನಿ – ಹಚ್ಡಿಕೆ