ವಿಜಯ್ ಹಜಾರೆ ಟ್ರೋಫಿ ಟೂರ್ನಿ ಯಲ್ಲಿ ಒಂದೇ ಓವರ್ ನಲ್ಲಿ 7 ಸಿಕ್ಸ್ ಸಿಡಿಸಿ ಮಹಾರಾಷ್ಟ್ರ ತಂಡದ ನಾಯಕ ಋತುರಾಜ್ ಗಾಯಕ್ವಾಡ್ ( Rituraj Gaikwad ) ಪ್ರಥಮ ದರ್ಜೆ ಕ್ರಿಕೆಟ್ ನಲ್ಲಿ ನೂತನ ದಾಖಲೆ ಬರೆದಿದ್ದಾರೆ.
6⃣,6⃣,6⃣,6⃣,6⃣nb,6⃣,6⃣
Ruturaj Gaikwad smashes 4⃣3⃣ runs in one over! 🔥🔥
Follow the match ▶️ https://t.co/cIJsS7QVxK…#MAHvUP | #VijayHazareTrophy | #QF2 | @mastercardindia pic.twitter.com/j0CvsWZeES
— BCCI Domestic (@BCCIdomestic) November 28, 2022
ಉತ್ತರ ಪ್ರದೇಶ ವಿರುದ್ಧದ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಗಾಯಕ್ವಾಡ್ 49ನೇ ಓವರ್ ನಲ್ಲಿ 7 ಸಿಕ್ಸ್ ಸಹಿತ 43 ರನ್ ಚಚ್ಚಿದ್ದಾರೆ. 48ನೇ ಓವರ್ ನ 4ನೇ ಎಸೆತ ನೋಬಾಲ್ ಎಸೆದ ಕಾರಣ ಫ್ರೀ ಹಿಟ್ ಎಸೆತವನ್ನು ಸಿಕ್ಸ್ ಚಚ್ಚಿದರು. ಬಳಿಕ ಮುಂದಿನ 3 ಎಸೆತಗಳನ್ನು ಸಿಕ್ಸ್ ಸಿಡಿಸಿ ಒಟ್ಟು 43 ರನ್ ಚಚ್ಚಿ ಬಿಸಾಡಿದರು. ಇದನ್ನೂ ಓದಿ : – ವಾಂಟೆಡ್ ಲಿಸ್ಟ್ ನಲ್ಲಿರುವ ರೌಡಿ ಪೊಲೀಸರ ಕೈಗೆ ಸಿಗುವುದಿಲ್ಲ! – ಟ್ವೀಟ್ ಮೂಲಕ ಬಿಜೆಪಿ ಕಾಳೆಲೆದ ಕಾಂಗ್ರೆಸ್
ಈ ಹಿಂದೆ ಯುವರಾಜ್ ಸಿಂಗ್ ಟಿ20 ವಿಶ್ವಕಪ್ ನಲ್ಲಿ ಇಂಗ್ಲೆಂಡ್ ತಂಡದ ಸ್ಟುವರ್ಟ್ ಬ್ರಾಡ್ ಅವರ 6 ಎಸೆತಗಳಿಗೆ 6 ಸಿಕ್ಸ್ ಚಚ್ಚಿ ದಾಖಲೆ ಬರೆದಿದ್ದರು. ಇದೀಗ ಗಾಯಕ್ವಾಡ್ 7 ಸಿಕ್ಸ್ ಸಿಡಿಸಿ ನೂತನ ದಾಖಲೆ ತಮ್ಮ ಹೆಸರಿಗೆ ಬರೆಸಿಕೊಂಡಿದ್ದಾರೆ. ಅಷ್ಟೇ ಅಲ್ಲದೇ ಆರಂಭಿಕರಾಗಿ ಬ್ಯಾಟಿಂಗ್ ಗೆ ಇಳಿದು ಅಜೇಯ 220 ರನ್ ಗಳ್ಳಲ್ಲಿ 159 ಎಸೆತ, 10 ಬೌಂಡರಿ, 16 ಸಿಕ್ಸರ್ ಚಚ್ಚಿ ದ್ವಿಶತಕ ಸಿಡಿಸಿ ಬೃಹತ್ ಮೊತ್ತಕ್ಕೆ ಕಾರಣರಾದರು. ಅಂತಿಮವಾಗಿ ಮಹಾರಾಷ್ಟ್ರ ತಂಡ 50 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 330 ರನ್ ಪೇರಿಸಿತು.
https://youtu.be/M834olnHFNo
ಇದನ್ನೂ ಓದಿ : – ಮದುವೆ ಡೇಟ್ ಅನೌನ್ಸ್ ಮಾಡಿದ ನಟಿ ಕಿಯಾರಾ ಅಡ್ವಾಣಿ…!